ನವದೆಹಲಿ:ಜೂನ್​ 21ರಂದು ನಡೆಯಲಿರುವ 6ನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಮುಖ ಕಾರ್ಯಕ್ರಮದ ಆತಿಥ್ಯವನ್ನು ಈ ಬಾರಿ ಕೇಂದ್ರಾಡಳಿತ ಪ್ರದೇಶ ಲಡಾಖ್​ ರಾಜಧಾನಿ ಲೇಹ್​ ವಹಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ ಎಂದು ಆಯುಷ್​ ಸಚಿವಾಲಯ ಬುಧವಾರ ತಿಳಿಸಿದೆ.
ಜೂನ್​ 21ರಂದು ಪ್ರಧಾನಿ ಮೋದಿ ಅವರು ಸಾಮಾನ್ಯ ಯೋಗಾ ಶಿಷ್ಠಾಚಾರ ಅಡಿಯಲ್ಲಿ ಯೋಗಾಸನ ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 15 ರಿಂದ 20 ಸಾವಿರ ಮಂದಿ ಭಾಗವಹಿಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಯುಷ್ ಸಚಿವ ಶ್ರೀಪಾದ್​ ನಾಯಕ್​, ಇದುವರೆಗೂ ನಡೆದಂತಹ ಯೋಗ ದಿನಾಚರಣೆಗಿಂತಲೂ ಈ ಬಾರಿ ತುಂಬಾ ವಿಭಿನ್ನ ಹಾಗೂ ವಿಶೇಷವಾಗಿರಲಿದೆ ಎಂದು ಭರವಸೆ ನೀಡುತ್ತೇವೆ. ಇದೇ ಮೊದಲ ಬಾರಿಗೆ ಅತ್ಯಂತ ಎತ್ತರದ ಸ್ಥಳ ಲೇಹ್​ನಲ್ಲಿ ಹೆಚ್ಚಿನ ಸಂಖ್ಯೆಯ ಜನರೊನ್ನೊಳಗೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜೂನ್​ 21ರ ಸಮಾರಂಭಕ್ಕೆ ಸಿಐಐ, ಎಫ್​ಐಸಿಸಿಐ, ಇನ್ಸ್ಟಿಟ್ಯೂಟ್​ ಆಫ್​ ಕಂಪನಿ ಸೆಕ್ರೆಟರಿಯಂತಹ ಕೈಗಾರಿಕ ಸಂಸ್ಥೆಗಳು ಮತ್ತು ಸಿಬಿಎಸ್​ಇ, ಎನ್​ಸಿಇಆರ್​ಟಿ, ಯುಜಿಸಿ ಮತ್ತು ಡಿಎವಿಯಂತಹ ಶಿಕ್ಷಣ ಸಂಸ್ಥೆಗಳು ಕಾರ್ಯಕ್ರಮ ನೀಡಲು ತಯಾರಿ ನಡೆಸುತ್ತಿವೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ ಜಾರ್ಖಂಡ್​ನ ರಾಂಚಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆದಿತ್ತು.
ಪ್ರಧಾನಿ ಮೋದಿ ಅವರ ಮನವಿಯಿಂದಾಗಿ 2015ರಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಾರಂಭವಾಯಿತು. ಪ್ರತಿ ವರ್ಷ ಜೂನ್​ 21ರಂದು ನಡೆಯುವ ವಾರ್ಷಿಕ ಕಾರ್ಯಕ್ರಮವನ್ನು ಆಯುಷ್​ ಸಚಿವಾಲಯದ ಅಡಿಯಲ್ಲಿ ನಡೆಯುತ್ತದೆ.(ಏಜೆನ್ಸೀಸ್​)
PM@narendramodiwill lead the mega event of 6th International Day of Yoga at#Lehon June 21, 2020.#IDY2020
Details:https://t.co/jESVdPTRAMpic.twitter.com/iGjUwcFcqc
— PIB India (@PIB_India)March 11, 2020

ನೀವು ಎಸ್​ಬಿಐ ಗ್ರಾಹಕರೇ..? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ ನೋಡಿ..

ಹುಟ್ಟುಹಬ್ಬ ಆಚರಣೆ ವೇಳೆ ಕೇಕ್​ ತಿಂದು 8 ಮಂದಿ ಅಸ್ವಸ್ಥ: ಕೇಕ್​ ಪರಿಶೀಲಿಸಿದಾಗ ಕಾದಿತ್ತು ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
