ನವದೆಹಲಿ:ಲಾಕ್​ಡೌನ್ ವಿಸ್ತರಣೆಯಿಂದಾಗಿ ದೇಶದಲ್ಲಿ ಮೇ 3ರವರೆಗೆ ಕ್ರೀಡಾ ಚಟುವಟಿಕೆಗಳೂ ಸ್ತಬ್ಧಗೊಂಡಿವೆ. ಲಾಕ್​ಡೌನ್ ಮುಕ್ತಾಯಗೊಂಡ ಬೆನ್ನಲ್ಲೇ ಕ್ರೀಡಾ ಚಟುವಟಿಕೆಗಳನ್ನೂ ಆರಂಭಿಸುವ ನಿರೀಕ್ಷೆ ಕ್ರೀಡಾ ವಲಯದಲ್ಲಿದೆ. ಆದರೆ ವೈದ್ಯಕೀಯ ತಜ್ಞರು ಇದಕ್ಕೆ ಪ್ರತಿಕೂಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲ ತಿಂಗಳ ಮಟ್ಟಿಗೆ ಕ್ರೀಡಾಕೂಟಗಳನ್ನು ನಡೆಸುವುದು ಬೇಡ ಎಂದು ಸಲಹೆ ನೀಡಿರುವ ವೈದ್ಯಕೀಯ ತಜ್ಞರು, ಜೀವವನ್ನು ಅಪಾಯಕ್ಕೆ ಸಿಲುಕಿಸಬೇಡಿ ಎಂದು ಎಚ್ಚರಿಸಿದ್ದಾರೆ.
ಮುಂದಿನ ಆರು ಅಥವಾ 9 ತಿಂಗಳ ಕಾಲ ಕ್ರೀಡಾ ಚಟುವಟಿಕೆಗಳನ್ನು ನಡೆಸುವುದು ಸಾಧ್ಯವಾಗದು ಎಂದು ದೇಶದ ಅಗ್ರ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಕರೊನಾ ಭೀತಿಯಿಂದಾಗಿ ಸದ್ಯ ಕ್ರಿಕೆಟ್, ಫುಟ್​ಬಾಲ್, ಟೆನಿಸ್, ರೇಸಿಂಗ್, ಗಾಲ್ಪ್, ಹಾಕಿ ಟೂರ್ನಿಗಳ ಜತೆಗೆ ಜಾಗತಿಕ ಮಹಾ ಕ್ರೀಡಾಕೂಟ ಒಲಿಂಪಿಕ್ಸ್ ಕೂಡ ಮುಂದೂಡಿಕೆಯಾಗಿದೆ.
‘ಕ್ರೀಡೆ ಶ್ರೇಷ್ಠವಾದುದು ಎಂಬ ಬಗ್ಗೆ ನನಗೆ ಯಾವುದೇ ಅನುಮಾನಗಳಿಲ್ಲ. ಆದರೆ ಹಾಲಿ ಸನ್ನಿವೇಶದಲ್ಲಿ ಜೀವಗಳನ್ನು ಉಳಿಸುವುದೇ ಮುಖ್ಯವಾದುದು. ಕ್ರೀಡಾಕೂಟಗಳನ್ನು ಆಯೋಜಿಸಿದರೆ ಸಹಜವಾಗಿಯೇ ಸಾಕಷ್ಟು ಪ್ರೇಕ್ಷಕರು ಬರುತ್ತಾರೆ. ಅದರಿಂದ ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಡಾ. ಆಕಾಶ್ ಸಭರ್​ವಾಲ್ ತಿಳಿಸಿದ್ದಾರೆ. ಅವರು ಕ್ರೀಡಾ ಗಾಯಗಳ ಶಸ್ತ್ರಚಿಕಿತ್ಸೆಯಲ್ಲಿ ತಜ್ಞರಾಗಿದ್ದಾರೆ.
ಕ್ರೀಡೆಯಿಂದ ಮನರಂಜನೆ ಮಾತ್ರವಲ್ಲದೆ ದೈಹಿಕ ಮತ್ತು ಮಾನಸಿಕವಾಗಿಯೂ ಸಾಕಷ್ಟು ಲಾಭಗಳಿವೆ. ಆದರೆ ಕರೊನಾ ಹರಡುವ ಅಪಾಯವೂ ಅಧಿಕವಾಗಿರುವುದರಿಂದಾಗಿ ಕ್ರೀಡೆಯನ್ನು ಸಾಧ್ಯವಾದಷ್ಟು ಸಮಯ ದೂರವಿಡುವುದೇ ಉತ್ತಮ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಕ್ರೀಡಾ ಔಷಧಿಗಳ ತಜ್ಞ ವೈದ್ಯ ಆಶಿಶ್ ಆಚಾರ್ಯ ಕೂಡ ಇನ್ನು ಆರು ತಿಂಗಳ ಕಾಲ ಕ್ರೀಡಾ ಚಟುವಟಿಕೆಗಳನ್ನು ನಿಲ್ಲಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಕ್ರೀಡೆ ಈಗ ಆದ್ಯತೆ ಆಗಬಾರದು. ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವುದೇ ಪ್ರಮುಖವಾಗಿದೆ’ ಎಂದಿದ್ದಾರೆ.
ಗುರುಗ್ರಾಮದ ಸಾಂಕ್ರಾಮಿಕ ಕಾಯಿಲೆಗಳ ತಜ್ಞೆ ಡಾ. ನೇಹಾ ಗುಪ್ತಾ ಕೂಡ ಇಂಥದ್ದೇ ಅಭಿಪ್ರಾಯಪಟ್ಟಿದ್ದು, ‘ಈ ಹೊಸ ವೈರಸ್​ನ ಲಕ್ಷಣಗಳನ್ನು ನಾವು ಈಗಾಗಲೆ ಗಮನಿಸಿರುವಂತೆ, ಇದು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಇನ್ನು ಕೆಲ ತಿಂಗಳ ಕಾಲ ಕ್ರೀಡಾಕೂಟಗಳನ್ನು ನಡೆಸದಿರುವುದೇ ಉತ್ತಮ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಕಾಯುವುದು ಅಗತ್ಯ’ ಎಂದಿದ್ದಾರೆ.
ಪ್ರೇಕ್ಷಕರಿಲ್ಲದೆಯೂ ಬೇಡ!
ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲು ವಿವಿಧ ಕ್ರೀಡಾ ಸಂಸ್ಥೆಗಳು ಮುಂದಾಗುತ್ತಿವೆ. ಆದರೆ ಕ್ರೀಡಾಕೂಟಗಳನ್ನು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣಗಳಲ್ಲಿ ಆಯೋಜಿಸುವುದು ಕೂಡ ಅಪಾಯಕಾರಿ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ‘ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಿದರೂ, ಆಟಗಾರರು, ಅಧಿಕಾರಿಗಳು, ಸಂಘಟಕರು, ಇತರ ಸಿಬ್ಬಂದಿ ಸಹಿತ ಹಲವರು ಅಲ್ಲಿ ಹಾಜರಿರಬೇಕಾಗುತ್ತದೆ. ಇದರಿಂದ ಸೋಂಕು ಹರಡುವ ಭೀತಿ ಇದ್ದೇ ಇರುತ್ತದೆ’ ಎಂದು ಡಾ. ಆಕಾಶ್ ಸಭರ್​ವಾಲ್ ವಿವರಿಸಿದ್ದಾರೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯೂ ಅನಿರ್ದಿಷ್ಟಾವಧಿಗೆ ಮುಂದೂಡಿಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 4 =
Remember me
