ಚಂಡಿಗಢ:ನಿಂಬೆಹಣ್ಣಿನಿಂದಾಗಿ ಪಂಜಾಬ್​​ನ ಜೈಲು ಅಧಿಕಾರಿ ಕೆಲಸವೇ ಕಳೆದುಕೊಳ್ಳುವಂತಾಗಿದೆ. ಅರೆ ಏನಿದು, ನಿಂಬೆಹಣ್ಣಿಗೂ ಕೆಲಸಕ್ಕೂ ಏನು ಸಂಬಂಧ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಕಾರಣ.
ಇತ್ತೀಚಿನ ದಿನಗಳಲ್ಲಿ ಹಗರಣಳದ್ದೇ ಸುದ್ದಿ ಎಲ್ಲಿ ನೋಡಿದರೂ, ಯಾವ ಕ್ಷೇತ್ರದಲ್ಲಾದರೂ ಸರಿ ಹಗರಣ ಎನ್ನುವುದು ಸಾಮಾನ್ಯವಾಗಿದೆ ಎಂಬಂತಾಗಿದೆ. ಆದರಿಲ್ಲಿ ನಿಂಬೆ ಹಣ್ಣಿನಲ್ಲೂ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ.ಇಲ್ಲಿ ಕಾಪುರ್ತಲಾ ಮಾಡ್ರನ್​ ಜೈಲಿನಲ್ಲಿ ನಿಂಬೆಹಣ್ಣು ಖರೀದಿಯಲ್ಲಿ ಹಗರಣ ನಡೆದಿದೆಯಂತೆ. ಅದಕ್ಕಾಗಿ ಜೈಲು ಅಧಿಕಾರಿ ಗುರ್ನಾಮ್​ ಲಾಲ್​ನನ್ನು ಶನಿವಾರ ಅಮಾನತುಗೊಳಿಸಲಾಗಿದೆ.
50 ಕೆಜಿ ನಿಂಬೆ ಖರೀದಿಯಲ್ಲಿ ಅಕ್ರಮ ನಡೆದಿರುವುದು ಬಯಲಾಗಿದೆ. ಜೈಲಿನಲ್ಲಿ ತಯಾರಿಸುವ ಆಹಾರಕ್ಕೆ 50 ಕೆಜಿ ನಿಂಬೆಹಣ್ಣು ಖರೀದಿಸಲಾಗಿದೆ ಎಂದು ದಾಖಲೆಗಳಲ್ಲಿ ಬರೆಯಲಾಗಿದೆ. ಆದರೆ ಖರೀದಿಸಿರುವ ನಿಂಬೆಹಣ್ಣು ಕಾಣದಿದ್ದಾಗ ಅನುಮಾನಗೊಂಡ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ನಿಜ ಸಂಗತಿ ಹೊರಬರುತ್ತಿದ್ದಂತೆ ಜೈಲು ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಉತ್ತರ ಭಾರತದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕಳೆದೆರಡು ತಿಂಗಳಿನಿಂದ ನಿಂಬೆಹಣ್ಣಿನ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಕೆಜಿ ನಿಂಬೆ ಹಣ್ಣು 200 ರಿಂದ 250 ರೂ.ಗಳಿಗೆ ಮಾರಾಟವಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಜೈಲಧಿಕಾರಿ ನಿಂಬೆಹಣ್ಣಿನಲ್ಲೂ ದುಡ್ಡು ಮಾಡಿಕೊಳ್ಳಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಜೈಲಿನಲ್ಲಾಗುತ್ತಿರುವ ಅಕ್ರಮಗಳ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪಂಜಾಬ್​ನ ಗಣಿ ಮತ್ತು ಪ್ರವಾಸೋದ್ಯಮ ಸಚಿವ ಹರ್ಜೀರ್​ ಸಿಂಗ್​ ಬೈನ್ಸ್​ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + thirteen =
Remember me
