ಲಖನೌ:ಉತ್ತರಪ್ರದೇಶದ ಸಂಭಾಲ್‌ನಲ್ಲಿ ಮನೆಗೆ ನುಗ್ಗಿದ್ದ ಚಿರತೆಯನ್ನು ಬಲೆಬೀಸಿ ಸೆರೆಹಿಡಿಸ ಅರಣ್ಯ ಸಿಬ್ಬಂದಿ ಕಡೆಗೆ ಅದನ್ನು ಕದಲದಂತೆ ಮಾಡುವಾಗ ಅದರ ಮೇಲೆ ಹತ್ತಕ್ಕೂ ಹೆಚ್ಚು ಮಂದಿ ಹತ್ತಿದ್ದು, ಮೂಕ ಪ್ರಾಣಿ ಉಸಿರುಗಟ್ಟಿ ಅಸುನೀಗಿದೆ.
ಇದನ್ನೂ ಓದಿ:ಪ್ರಿಯಕರನ ಕಾಟಕ್ಕೆ ನಿಶ್ಚಿತಾರ್ಥ ಆಗಿದ್ದ ಯುವತಿ ಆತ್ಮಹತ್ಯೆ!
ಸಂಭಾಲ್‌ನ ರಸುಲ್‌ಪುರ ಧಾತ್ರಾ ಗ್ರಾಮದಲ್ಲಿ ಚಿರತೆ ಮನೆಯೊಂದಕ್ಕೆ ನುಗ್ಗಿದೆ. ಮನೆಯಲ್ಲಿದ್ದವರು ಕೂಡಲೇ ಅಡಗಿ ಕುಳಿತು ಪೊಲೀಸರು ಮತ್ತು ಅರಣ್ಯಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮಂಚವನ್ನು ಪಲ್ಟಿ ಮಾಡಿದ್ದು ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ಚಿರತೆ ತನ್ನ ಪಂಜದಿಂದ ಪೊಲೀಸ್ ಅಧಿಕಾರಿ ಮೇಲೆ ದಾಳಿ ಮಾಡಿದ್ದು, ಅವರಿಗೆ ಗಾಯಗಳಾಗಿವೆ.
ಬಳಿಕ ಚಿರತೆ ಬಲೆಯಲ್ಲಿ ಸಿಕ್ಕಿಬಿದ್ದಿದೆ. ಆಗ ಸಾಕಷ್ಟು ಹೊಡೆತ ತಿಂದಿತ್ತು. ಎಲ್ಲಾ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಅದರ ಮೇಲೆ ನಿಂತಿದ್ದು, ಭಾರ ತಾಳಲಾರದೆ ಚಿರತೆ ಸಾವನ್ನಪ್ಪಿದೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ದೃಶ್ಯಾವಳಿಗಳಲ್ಲಿ ಖಾಕಿ ಉಡುಪಿನಲ್ಲಿರುವ ವ್ಯಕ್ತಿಗಳು ಮಂಚದ ಮೇಲೆ ನಿಂತಿರುವುದನ್ನು ಗಮನಿಸಬಹುದಾಗಿದೆ. ಅದರ ಕೆಳಗೆ ಪ್ರಜ್ಞಾಹೀನ ಚಿರತೆ ಗೋಚರಿಸುತ್ತದೆ.
ಕಡಲ ತೀರದಲ್ಲಿ ಆತಂಕ ಸೃಷ್ಟಿಸಿದ ಚೀನಾ ಬೋಟ್ ಸಂಚಾರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:18 − twelve =
Remember me
