ತಿರುವನಂತಪುರಂ:ತಮಿಳುನಾಡಿನ ಊಟಿಯಲ್ಲಿ ದುಷ್ಕರ್ಮಿಗಳು ಆನೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆಯ ಬೆನ್ನಲ್ಲೇ ಮತ್ತೊಂದು ಮೂಕ ಪ್ರಾಣಿಯ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ. ಕಾಡಿನಲ್ಲಿ ಓಡಾಡಿಕೊಂಡಿದ್ದ ಚಿರತೆಯನ್ನು ಬಲೆ ಹಾಕಿ ಹಿಡಿದ ಪಾಪಿಗಳು ಅದರ ಮಾಂಸವನ್ನೂ ತಿಂದು ತೇಗಿದ್ದಾರೆ.
ಇದನ್ನೂ ಓದಿ:ಆನೆಗೇ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಕೊನೆಯುಸಿರೆಳೆದ ಆನೆ
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇಂತದ್ದೊಂದು ಕ್ರೂರ ಘಟನೆ ನಡೆದಿದೆ. ವಿನೋದ್​ ಹೆಸರಿನ ವ್ಯಕ್ತಿಯ ಹೊಲದಲ್ಲಿ ಬಲೆ ಹಾಕಿಡಲಾಗಿದೆ. ಆ ಬಲೆಗೆ ಚಿರತೆ ಸಿಕ್ಕುಬಿದ್ದಿದೆ. ಅದನ್ನು ಕಂಡ ವಿನೋದ್​, ತಕ್ಷಣ ತನ್ನ ಸ್ನೇಹಿತರಾದ ಕುರಿಕೋಸ್, ಬೀನು, ಕುಂಜಪ್ಪನ್​ನನ್ನು ಕರೆಸಿಕೊಂಡಿದ್ದಾನೆ. ಎಲ್ಲರು ಒಟ್ಟಾಗಿ ಸೇರಿ ಚಿರತೆಯನ್ನು ಕೊಂದಿದ್ದಾರೆ. ಸುಮಾರು 50 ಕೆಜಿ ತೂಕವಿದ್ದ ಚಿರತೆಯ ಮಾಂಸವನ್ನು ಅಡುಗೆ ಮಾಡಿಕೊಂಡು ತಿಂದಿದ್ದಾರೆ. ಅದರ ಚರ್ಮ, ಉಗುರು, ಹಲ್ಲನ್ನು ತೆಗೆದಿಟ್ಟುಕೊಂಡಿದ್ದಾರೆ. ಅದನ್ನೆಲ್ಲ ಮಾರಾಟ ಮಾಡಿ ಹಣ ಸಂಪಾದಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ ಕ್ರಷರ್​ ಸ್ಫೋಟ; ಬುಲೆರೋ ಚಾಲಕ ಸುರಕ್ಷಿತ! ಪ್ರಕರಣಕ್ಕೆ ಟ್ವಿಸ್ಟ್
ಈ ವಿಚಾರ ಅರಣ್ಯಾಧಿಕಾರಿಗಳಿ ತಿಳಿದುಬಂದಿದ್ದು, ತಕ್ಷಣವೇ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ 10 ಕೆಜಿ ಚಿರತೆ ಮಾಂಸ, ಅದರ ಹಲ್ಲು, ಉಗುರು ಮತ್ತು ಚರ್ಮವನ್ನು ವಶ ಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)
ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

ನಾನ್​ವೆಜ್​ ಪ್ರಿಯರಿಗೆ ಶುಭ ಸುದ್ದಿ! 1 ಗಂಟೆಯಲ್ಲಿ ಇಷ್ಟು ತಿಂದರೆ ನಿಮಗೆ ಸಿಗುತ್ತೆ ಬುಲೆಟ್​ ಬೈಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
