ಗಾಜಿಯಾಬಾದ್​:ದೇಶದಲ್ಲಿ ಕಾಡೆಲ್ಲ ನಾಡಾಗಿ ಬದಲಾವಣೆ ಆಗಲಾರಂಭಿಸದಾಗಿಂದ ಕಾಡು ಪ್ರಾಣಿಗಳು ನಾಡಿಗೆ ಬಂದು ಓಡಾಡುವ ಘಟನೆ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಅದೇ ರೀತಿಯಲ್ಲಿ ಚಿರತೆಯೊಂದು ನಗರದ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ.
ಇದನ್ನೂ ಓದಿ:25 ವರ್ಷ ಹಿಂದೆ ಕೊಲೆ ಮಾಡಿದ್ದ ವ್ಯಕ್ತಿ ಈಗ ಸಿಕ್ಕಿಬಿದ್ದ; ಕೇಸ್ ಸಾಲ್ವ್​ ಆದ ಬಗೆಯೇ ರೋಚಕ
ನಗರದ ರಾಜ್ನಾಗರ ರಸ್ತೆಯಲ್ಲಿ ಚಿರತೆ ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಅಭಿಷೇಕ್​ ಪ್ರಸಾದ್​ ಹೆಸರಿನವರು ಟ್ವಿಟ್ಟರ್​ನಲ್ಲಿ ಹಾಕಿದ್ದಾರೆ.
ಕೆಲ ದಿನಗಳ ಹಿಂದೆ ಗಾಜಿಯಾಬಾದ್​ ಅಭಿವೃದ್ಧಿ ಪ್ರಾಧಿಕಾರ (ಜಿಡಿಎ) ಉಪಾಧ್ಯಕ್ಷರ ಕಚೇರಿಯ ಜನರೇಟರ್​ ಕೋಣೆಗೆ ಇದೇ ಚಿರತೆ ನುಗ್ಗಿತ್ತು. ಸಿಬ್ಬಂದಿಯೊಬ್ಬ ಜನರೇಟರ್​ ಪ್ರಾರಂಭಿಸಲು ಕೋಣೆಗೆ ಹೋಗುತ್ತಿದ್ದಂತೆ ಚಿರತೆ ಆತನ ಮೇಲೆ ಎರಗಿತ್ತು. ಆಗ ಇತರೆ ಸಿಬ್ಬಂದಿಗಳು ಕೋಲು ಹಿಡಿದು ಚಿರತೆಗೆ ಹೆದರಿಸಿದ್ದ ಹಿನ್ನೆಲೆಯಲಲ್ಲಿ ಚಿರತೆ ಅಲ್ಲಿಂದ ಓಡಿ ಮರವೊಂದನ್ನು ಹತ್ತಿ ನಂತರ ಕಾಣೆಯಾಗಿತ್ತು. ಇದೀಗ ಅದೇ ಚಿರತೆ ರಸ್ತೆಗಳಲ್ಲಿ ಓಡಾಡುತ್ತಿರುವ ದೃಶ್ಯ ಸಿಕ್ಕಿದೆ.
ಇದನ್ನೂ ಓದಿ:ಇನ್ನು ಮುಂದೆ ಸ್ಯಾನಿಟರಿ ಪ್ಯಾಡ್​ಗಳು ಉಚಿತ; ಹೆಣ್ಣು ಮಕ್ಕಳಿಗಾಗಿ ವಿಶೇಷ ಮಸೂದೆ ತಂದ ಮೊದಲ ದೇಶವಿದು
ಚಿರತೆಯನ್ನು ಸೆರೆಹಿಡಿಯುವುದಕ್ಕಾಗಿ ಅರಣ್ಯ ಇಲಾಖೆಯ ಐದು ತಂಡಗಳನ್ನು ನಿಯೋಜಿಸಲಾಗಿದೆ. ತಂಡವು ಚಿರತೆಯನ್ನು ಹುಡುಕುತ್ತಿದೆ. ಚಿರತೆ ಕಂಡುಬಂದ ನಗರಗಳಲ್ಲಿ ಸ್ಥಳೀಯರಿಗೆ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಜಯ್​ ಶಂಕರ್​ ಪಾಂಡೆ ತಿಳಿಸಿದ್ದಾರೆ. (ಏಜೆನ್ಸೀಸ್​)
A leopard has been spotted in Rajnagar, please do something while walking on the road without any fear 🚧🙏@ghaziabadpolice#leopardinGhaziabad@dm_ghaziabad@UPGovtpic.twitter.com/qFnsgdjKU7
— Abhishek Prasad ♈︎ (@abhishek11__)November 25, 2020

ಟ್ರೋಫಿ ಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ವ್ಯಕ್ತಿಗೇ ಸಿಕ್ಕಿತು ಗ್ರ್ಯಾಮಿ ಅವಾರ್ಡ್ಸ್​​ಗೆ ನಾಮಿನೇಶನ್​ ಭಾಗ್ಯ

ಅಪ್ಪ ಅಮ್ಮನನ್ನು ಕೊಲೆ ಮಾಡುತ್ತೇನೆಂದು ಹೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
