ಮುಂಬೈ:ಚಿರತೆಯೊಂದು ತನ್ನ ಮರಿಗಳೊಂದಿಗೆ ಮರಾಠಿ ಟಿವಿ ಸೀರಿಯಲ್​ ಸೆಟ್​ಗೆ ನುಗ್ಗಿರುವ ಆಘಾತಕಾರಿ ಘಟನೆ ಮುಂಬೈನ ಗೊರೆಂಗಾವ್​ ಫಿಲ್ಮ್​ ಸಿಟಿಯಲ್ಲಿ ಬುಧವಾರ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ಸೆಟ್​ನಲ್ಲಿ 200ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಯಾರಾದರೂ ಪ್ರಾಣ ಕಳೆದುಕೊಳ್ಳುವ ಸಂಭವವೂ ಇತ್ತು. ಕೇವಲ 10 ದಿನಗಳ ಅಂತರದಲ್ಲಿ ಮೂರು ಅಥವಾ ನಾಲ್ಕನೇ ಬಾರಿ ಈ ರೀತಿಯ ಘಟನೆ ನಡೆಯುತ್ತಿದೆ. ಆದರೂ ಸರ್ಕಾರ ಮಾತ್ರ ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅಖಿಲ ಭಾರತೀಯ ಸಿನಿ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತ ತಿಳಿಸಿದರು.
ಇದನ್ನೂ ಓದಿ:ತನಗಿಂತ 46 ವರ್ಷ ಚಿಕ್ಕವನ ಜತೆ ಮದುವೆ! 2 ವರ್ಷದ ಬಳಿಕ 83ರ ವೃದ್ಧೆಯ ಪಶ್ಚಾತಾಪದ ಮಾತುಗಳು
#WATCH| A leopard, along with its cub, entered the sets of a Marathi TV serial in Goregaon Film City, Mumbai yesterday.
All Indian Cine Workers Association president Suresh Shyamlal Gupta says, "More than 200 people were present at the set, someone could have lost life. This…pic.twitter.com/m1YgSXARl6
— ANI (@ANI)July 27, 2023

ಮುಂಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜೀವ ಸಂಕುಲ ತಮ್ಮ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿವೆ. ಇದರ ಪರಿಣಾಮ ಪ್ರಾಣಿಗಳು ನಗರದತ್ತ ಮುಖ ಮಾಡುತ್ತಿವೆ. ಮುಂಬೈನಲ್ಲಿ ಜುಲೈ ತಿಂಗಳಲ್ಲಿ 1557.8 ಮಿಮೀ ದಾಖಲೆ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಮುಂಬೈನಲ್ಲಿ ದಿನವಿಡೀ ಭಾರೀ ಮಳೆ ಸುರಿದಿದ್ದು, ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದವರೆಗೂ ಅನ್ವಯವಾಗುವಂತೆ ಹವಾಮಾನ ಇಲಾಖೆ ರೆಡ್​ ಅಲರ್ಟ್​ ಘೋಷಿಸಿದೆ.
2014ರಿಂದ ದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಚಿರತೆಗಳ ಜನಸಂಖ್ಯೆಯು ಸುಮಾರು 63ರಷ್ಟು ಹೆಚ್ಚಳವನ್ನು ಕಂಡಿದೆ. 2014ರಲ್ಲಿ 7910 ಇದ್ದ ಚಿರತೆಗಳ ಸಂಖ್ಯೆ 2018ರಲ್ಲಿ 12,852 ಕ್ಕೆ ಏರಿಕೆಯಾಗಿದೆ.
ಕಳೆದವಾರ ಗೊರೆಗಾಂವ್​ ಫಿಲ್ಮ್​ ಸಿಟಿಯಲ್ಲಿ ಶೋಯೆಬ್​ ಇಬ್ರಾಹಿಂ ಮತ್ತು ಆಯುಶಿ ಖುರಾನ್​ ಅವರ ಅಜೂನಿ ಶೋ ವೇಳೆ ಚಿರತೆ ಸೆಟ್​ಗೆ ಎಂಟ್ರಿ ಕೊಟ್ಟಿತ್ತು. ಈ ವೇಳೆ ಸೆಟ್​ನಲ್ಲಿದ್ದ 200 ಕಾರ್ಮಿಕರ ಮುಂದೆಯೇ ನಾಯಿಯೊಂದರ ಮೇಲೆ ಚಿರತೆ ದಾಳಿ ಮಾಡಿತ್ತು. ಇದಕ್ಕೂ ಹಿಂದೆ ಕಾಮ್ಯ ಪಂಜಾಬಿಯ ಹೊಸ ಶೋ ನೀರಜ್​ ಏಕ್​ ನಯಿ ಪೆಚಹಾನ್​ ಸೆಟ್​ಗೆ ಚಿರತೆ ಎಂಟ್ರಿ ಕೊಟ್ಟಿತ್ತು.(ದಿಗ್ವಿಜಯ ನ್ಯೂಸ್​)
ಸಹೋದರನ ಆರೈಕೆಗೆ ನೇಮಿಸಿದ ಮಹಿಳೆಯಿಂದ ಯುವಿ ತಾಯಿಗೆ ಬೆದರಿಕೆ: ವಂಚಕಿ ಸಿಕ್ಕಿಬಿದ್ದಿದ್ದೇ ರೋಚಕ!

ಮಂಡ್ಯ ರೈತನಿಗೆ ಬಂಪರ್​: ಹಳ್ಳಿಕಾರ್ ತಳಿಯ ಈ ಎತ್ತು ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − three =
Remember me
