ಹುಟ್ಟಿನಿಂದ ಚಟ್ಟದವರೆಗಿನ ಪ್ರತಿ ಕ್ಷಣವೂ ಪ್ರತಿಯೊಬ್ಬನಿಗೂ ಪಾಠವೇ ಆಗಿರುತ್ತದೆ. ಆ ಪಾಠದ ಮೂಲಕ ಜೀವನಾನುಭವ ದೊರೆಯುತ್ತದೆ. ಶಿಕ್ಷಕರು, ಮಾರ್ಗದರ್ಶಕರು, ಯಶಸ್ಸು ಸಾಧಿಸಿದವರು ನೀಡುವ ಪಾಠದಿಂದಷ್ಟೇ ನಮಗೆ ಯಶಸ್ಸು ಲಭಿಸುತ್ತದೆ ಎಂಬುದು ಸುಳ್ಳು. ಮತ್ತೊಬ್ಬರ ಜೀವನ, ನಡೆ ನುಡಿ, ಅವರ ಕಠಿಣ ಶ್ರಮ, ಪ್ರಯತ್ನದಿಂದ ಕೂಡ ಕಲಿತುಕೊಳ್ಳುವಂಥದ್ದು ಬಹಳಷ್ಟು ಇರುತ್ತದೆ.ಕಠಿಣ ಪರಿಶ್ರಮ ಯಶಸ್ಸಿನ ಕೀಲಿಯಾಗಿದೆ ಮತ್ತು ಪರಿಶ್ರಮವೇ ಪ್ರತಿಫಲಕ್ಕೆ ಕಾರಣವಾಗುತ್ತದೆ ಎಂದು ಕೇಳಿದ್ದೇವೆ. ಅದೇ ಅರ್ಥವನ್ನು ಬಿಂಬಿಸುವಂತಿರುವ ಪುಟ್ಟ ಮಗುವಿನ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
Perseverance…🌎❤️https://t.co/0zw4bFjHuU— Rex Chapman🏇🏼 (@RexChapman)June 8, 2020
Perseverance…🌎❤️https://t.co/0zw4bFjHuU
ಇದನ್ನೂ ಓದಿ:ಗುಡ್​​ನ್ಯೂಸ್..! ವನ್ಯಜೀವಿ ಪ್ರಿಯರಿಗೆ ಶೀಘ್ರವೇ ತೆರೆದುಕೊಳ್ಳಲಿವೆ ಹುಲಿ ಅಭಯಾರಣ್ಯಗಳು
ಈ ವೀಡಿಯೊವನ್ನು ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಪುಟ್ಟ ಮಗು ಮೆಟ್ಟಿಲುಗಳ ಮೇಲೆ ಒಂದು ಹೆಜ್ಜೆಯೂ ತಪ್ಪದಂತೆ ಸ್ಕೇಟಿಂಗ್ ಆಡಲು ಪ್ರಯತ್ನಿಸುತ್ತಿದೆ. ಮಗು ಪದೆ ಪದೆ ತಪ್ಪಿದರೂ ನಿರಂತರವಾಗಿ ಪ್ರಯತ್ನಿಸಿ ಕೊನೆಗೂ ಜಯ ಸಾಧಿಸಿರುವುದನ್ನು ಇಲ್ಲಿ ಕಾಣಬಹುದು.
“ಪರಿಶ್ರಮ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಹಂಚಿಕೊಂಡ ರೆಕ್ಸ್ ಚಾಪ್ಮನ್ ಕ್ಲಿಪ್, ಯಶಸ್ಸು ಮತ್ತು ಹೃದಯ ಎರಡನ್ನೂ ತಟ್ಟುವಂತಿರುವ ಪರಿಶ್ರಮ ಭಾವನಾತ್ಮಕ ಸನ್ನಿವೇಶ ಎಂದಿದ್ದಾರೆ.
ಇದನ್ನೂ ಓದಿ:ಕಾಣೆಯಾಗಿದ್ದ ಕರೊನಾ ರೋಗಿ ಶೌಚಾಲಯದಲ್ಲಿ ಶವವಾಗಿ ಪತ್ತೆ
34 ಸೆಕೆಂಡುಗಳ ಈ ದೃಶ್ಯಾವಳಿಯಲ್ಲಿ ಮೆಟ್ಟಿಲುಗಳ ಮೇಲಿಂದ ಮಗುವಿನ ಸ್ಕೇಟ್ ಬೋರ್ಡಿಂಗ್ ಆರಂಭವಾಗುತ್ತದೆ. ಮೊದಲ ಹೆಜ್ಜೆಯಲ್ಲೇ ಆ ಪ್ರಯತ್ನ ತಪ್ಪುತ್ತಿರುತ್ತದೆ. ಬಾರಿ ಬಾರಿ ಪ್ರಯತ್ನಿಸಿದಾಗ್ಯೂ ವಿಫಲಗೊಳ್ಳುತ್ತದೆ. ಕೊನೆಗ ಐದನೇ ಪ್ರಯತ್ನದಲ್ಲಿ, ಮಗು ಸ್ಕೇಟ್ ಬೋರ್ಡಿಂಗ್​​​ನಲ್ಲಿ ಯಶಸ್ವಿಯಾಗುತ್ತದೆ. ಸುರಕ್ಷಿತವಾಗಿ ನೆಲಕ್ಕಿಳಿಯುತ್ತದೆ.  ಈ ದೃಶ್ಯಾವಳಿ ಭಾರೀ ವೈರಲ್ ಆಗಿ 2.1 ದಶಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ.
ಮಿತಿಮೀರುತ್ತಿರುವ ಕರೊನಾ ಆತಂಕದ ನಡುವೆ ಆದಿತ್ಯ ಠಾಕ್ರೆ ಕೊಟ್ರು ಗುಡ್​ನ್ಯೂಸ್​; ಇನ್ನು ಭಯ ಪಡುವ ಅಗತ್ಯವಿಲ್ಲ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 5 =
Remember me
