ಮುಂಬೈ:ವಾಣಿಜ್ಯ ನಗರಿಯ ಮೇಲೆ 2008 ನವೆಂಬರ್ 26ರಂದು ನಡೆದ ಉಗ್ರ ದಾಳಿ ಯೋಜನೆಯಂತೆಯೇ ಸಾಗಿದ್ದರೆ ಹಿಂದು ಉಗ್ರವಾದವನ್ನು ಜಗತ್ತಿಗೆ ಬಿಂಬಿಸುವಲ್ಲಿ ಲಷ್ಕರ್ ಏ ತೊಯ್ಬಾ (ಎಲ್​ಇಟಿ) ಯಶಸ್ವಿಯಾಗಿರುತ್ತಿತ್ತು!
ಮುಂಬೈನ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಅವರ ‘Let Me Say It Now’ ಎಂಬ ಪುಸ್ತಕದಲ್ಲಿ ಈ ಅಂಶವಿದ್ದು, ಸಂಚಲನ ಮೂಡಿಸಿದೆ. ಮುಂಬೈ ದಾಳಿ 26/11ರ ಇನ್ನೊಂದು ಮುಖದ ಚಿತ್ರಣವನ್ನು ಓದುಗರಿಗೆ ಉಣಬಡಿಸಿದ್ದಾರೆ. ಅದರ ಸಾರ ಇಲ್ಲಿದೆ.
ಪಾಕಿಸ್ತಾನದ ಉಗ್ರ ಮೊಹಮ್ಮದ್ ಅಜ್ಮಲ್ ಕಸಬ್​ ಎಂಬ ಉಗ್ರನನ್ನು ಭಾರತಕ್ಕೆ ಕಳುಹಿಸಿದ್ದ ಎಲ್​ಇಟಿ, ಉಗ್ರ ದಾಳಿಗೆ ಸರಿಯಾದ ಯೋಜನೆಯನ್ನೂ ರೂಪಿಸಿಕೊಂಡಿತ್ತು. ಅದರಂತೆಯೇ ಎಲ್ಲವೂ ಅನುಷ್ಠಾನಗೊಂಡಿದ್ದರೆ, ಹಿಂದು ಉಗ್ರವಾದ ಇದೆ ಎಂಬ ಅಂಶವನ್ನು ಅದು ಜಾಗತಿಕ ಮಟ್ಟದಲ್ಲಿ ನಿರೂಪಿಸುವಲ್ಲಿ ಯಶಸ್ವಿಯಾಗುತ್ತಿತ್ತು. ಕಸಬ್​ ಬಂಧನಕ್ಕೆ ಸಿಲುಕಿದ ಕಾರಣ ಆತನನ್ನು ಮುಗಿಸುವುದಕ್ಕೆ ಪಾಕ್​ನ ಬೇಹುಗಾರಿಕಾ ಏಜೆನ್ಸಿ ಐಎಸ್​ಐ ಮತ್ತು ಉಗ್ರ ಸಂಘಟನೆ ಎಲ್​ಇಟಿ ಶತಾಯ ಗತಾಯ ಪ್ರಯತ್ನಿಸುತ್ತಿತ್ತು. ದಾವೂದ್ ಇಬ್ರಾಹಿಂನ ಗ್ಯಾಂಗ್​ಗೆ ಈ ಬಗ್ಗೆ ಸುಪಾರಿಯನ್ನೂ ಅವುಗಳು ನೀಡಿದ್ದವು.
ಎಲ್​ಇಟಿ ಯೋಜನೆ ಪ್ರಕಾರವೇ ದಾಳಿ ನಡೆದಿದ್ದರೆ, ಉಗ್ರ ಅಜ್ಮಲ್ ಕಸಬ್ ಬೆಂಗಳೂರಿನ ಸಮೀರ್ ಚೌಧರಿ ಆಗಿ ಸಾಯುತ್ತಿದ್ದ!. ಅದಕ್ಕೆ ಬೇಕಾದ ಫೇಕ್ ಐಡಿ ಕಾರ್ಡ್ ಅನ್ನು ಎಲ್​ಇಟಿ ಸಿದ್ಧಪಡಿಸಿತ್ತು. ಉಗ್ರ ದಾಳಿಯ ನಂತರದಲ್ಲಿ ಬಿಡುಗಡೆ ಮಾಡಲ್ಪಟ್ಟ ಕಸಬ್​ ಚಿತ್ರ ಗಮನಿಸಿದರೆ, ಆತನ ಬಲಗೈಗೆ ಕೆಂಪು ದಾರ ಕಟ್ಟಿಕೊಂಡಿದ್ದ. ಇದನ್ನು ಹೈಲೈಟ್ ಮಾಡಲು ಮಾಧ್ಯಮಗಳಿಗೆ ಸುಳಿವು ನೀಡುವ ಕೆಲಸವನ್ನು ಸಂಚುಕೋರರು ಮಾಡಿಕೊಂಡಿದ್ದರು. ಇದು ಯಶಸ್ವಿಯಾಗಿದ್ದರೆ, ಮಾಧ್ಯಮಗಳೆಲ್ಲವೂ ಬೆಂಗಳೂರಿನಲ್ಲಿ ಚೌಧರಿ ಮನೆಯ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದವು. ಜಗತ್ತಿನಾದ್ಯಂತ ಹಿಂದು ಭಯೋತ್ಪಾದನೆ ಸುದ್ದಿ ಆಗಿರುತ್ತಿತ್ತು.
ಆದರೆ, ಅದಾವುದೂ ನಡೆಯಲಿಲ್ಲ.ಅಜ್ಮಲ್ ಅಮೀರ್ ಕಸಬ್ ಜೀವಂತವಾಗಿ ಸೆರೆ ಸಿಕ್ಕ ಕಾರಣ ಪಾಕಿಸ್ತಾನ ಫರೀದ್ ಕೋಟ್​ನವನು ಎಂಬುದು ಬಯಲಾಗಿತ್ತು. ಎಲ್​ಇಟಿ ಆಟ ನಡೆಯಲಿಲ್ಲ. ಈ ಕಾರ್ಯಾಚರಣೆಯಲ್ಲಿ ಮುಂಬೈನ ಪೇದೆ ತುಕಾರಾಮ್​ ಓಂಬ್ಲೆ ಅವರ ಹೀರೋಯಿಸಂ ಅನ್ನು ಸ್ಮರಿಸಲೇಬೇಕು ಎಂದು ರಾಕೇಶ್ ಮರಿಯಾ ಬರೆದುಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − four =
Remember me
