ನವದೆಹಲಿ:ಕರೊನಾ ವೈರಸ್​ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಜನತಾ ಕರ್ಪ್ಯೂ ರಾಷ್ಟ್ರದೆಲ್ಲೆಡೆ ಉತ್ತಮ ಆರಂಭ ಪಡೆದುಕೊಂಡಿದೆ. ಇದಕ್ಕೂ ಮುನ್ನ ಟ್ವೀಟ್​ ಮಾಡಿರುವ ಪ್ರಧಾನಿ ನಾವೆಲ್ಲರೂ ಇದರಲ್ಲಿ ಭಾಗವಹಿಸೋಣ ಎಂದು ಮತ್ತೊಮ್ಮೆ ದೇಶದ ಜನತೆಯನ್ನು ಹುರಿದುಂಬಿಸಿದ್ದಾರೆ.
ನಾವೆಲ್ಲರೂ ಜನತಾ ಕರ್ಪ್ಯೂನಲ್ಲಿ ಭಾಗವಾಗುವುದರಿಂದ ಕಿಲ್ಲರ್​​ ಕರೊನಾ ವೈರಸ್​ ವಿರುದ್ಧ ಹೋರಾಡಲು ನಮಗೆಲ್ಲ ಅದ್ಭುತ ಶಕ್ತಿ ಬರಲಿದೆ. ನಾವು ಈಗ ತೆಗೆದುಕೊಳ್ಳುವ ಕ್ರಮ ಮುಂದಿನ ದಿನದಲ್ಲಿ ಸಹಕಾರಿಯಾಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಕೊನೆಯಲ್ಲಿ ಮನೆಯಲ್ಲಿಯೇ ಆರೋಗ್ಯವಾಗಿ ಉಳಿಯಿರಿ ಎನ್ನವ ಮೂಲಕ ಪ್ರಧಾನಿ ದೇಶದ ಜನತೆಯ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
ಗುರುವಾರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಮಾರ್ಚ್​ 22ರ ಭಾನುವಾರದಂದು ಜನರು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಮನೆಯಲ್ಲಿ ಉಳಿದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದಕ್ಕೆ ಜನತಾ ಕರ್ಪ್ಯೂ ಎಂದು ಹೆಸರಿಟ್ಟಿದ್ದರು. ಸಾಂಕ್ರಮಿಕ ಕರೊನಾ ಸರಪಳಿಗೆ ಬ್ರೇಕ್​ ಹಾಕಲು ಪ್ರಧಾನಿ ಮೋದಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರ.
ಪ್ರಧಾನಿ ಅವರ ಆಶಯಕ್ಕೆ ಜನರು ಕೈಜೋಡಿಸಿದ್ದು ಮನೆಯಲ್ಲಿಯೇ ಉಳಿಯುವ ಮೂಲಕ ಜನತಾ ಕರ್ಪ್ಯೂಗೆ ಬಲ ತುಂಬಿದ್ದಾರೆ. ಇಡೀ ರಾಷ್ಟ್ರವೇ ಅಕ್ಷರಶಃ ಸ್ತಬ್ಧವಾಗಿದೆ.(ಏಜೆನ್ಸೀಸ್​)
ಪ್ರಧಾನಿ ಮೋದಿ ಕರೆಕೊಟ್ಟಿರುವ ಜನತಾ ಕರ್ಪ್ಯೂಗೆ ರಾಜ್ಯದಲ್ಲಿ ಉತ್ತಮ ಆರಂಭ: ಇಡೀ ಕರ್ನಾಟಕವೇ ಸ್ತಬ್ಧ

In a few minutes from now, the#JantaCurfewcommences.
Let us all be a part of this curfew, which will add tremendous strength to the fight against COVID-19 menace. The steps we take now will help in the times to come.
Stay indoors and stay healthy.#IndiaFightsCoronapic.twitter.com/11HJsAWzVf
— Narendra Modi (@narendramodi)March 22, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
