ಭಾರತದ ರಫ್ತು ಪ್ರಮಾಣ ಇದೇ ಮೊದಲ ಸಲ ಸಾರ್ವತ್ರಿಕ ಗರಿಷ್ಠ ಮಟ್ಟ 400 ಶತಕೋಟಿ ಡಾಲರ್ ಗುರಿಯು ಹಣಕಾಸು ವರ್ಷ ಮುಗಿಯುವುದಕ್ಕೆ ಒಂಬತ್ತು ದಿನ ಮುಂಚಿತವಾಗಿಯೇ ಪೂರ್ಣಗೊಂಡಿದೆ. ಈ ವಿಚಾರವನ್ನು ಭಾನುವಾರ ಈ ಸಲದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ರೈತರು, ಕರಕುಶಲಕರ್ವಿುಗಳು, ನೇಕಾರರು, ಇಂಜಿನಿಯರ್​ಗಳು, ಸಣ್ಣ ಉದ್ಯಮಿಗಳು, ಎಂಎಸ್​ಎಂಇ ಸೆಕ್ಟರ್ ಮತ್ತು ವಿವಿಧ ವೃತ್ತಿಪರರ ಕೌಶಲವೇ ಭಾರತದ ಬಲವಾಗಿದೆ. ಇದುವೇ ಭಾರತದ ಸಾಮರ್ಥ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ದೇಶದ 400 ಶತಕೋಟಿ ಡಾಲರ್​ನ (30 ಲಕ್ಷ ಕೋಟಿ ರೂಪಾಯಿ) ರಫ್ತು ಗುರಿ ಅವಧಿ ಪೂರ್ವದಲ್ಲೇ ಈಡೇರಿದೆ. ಈ ಹಣಕಾಸು ವರ್ಷದಲ್ಲಿ ಜಗತ್ತಿನಾದ್ಯಂತ ಭಾರತದ ವಸ್ತುಗಳಿಗೆ ಇದ್ದ ಬೇಡಿಕೆಯನ್ನು ಇದು ತೋರಿಸುತ್ತದೆ. ಭಾರತೀಯ ಜನಶಕ್ತಿ ಈಗ ಜಾಗತಿಕ ಮಾರುಕಟ್ಟೆಯ ಮೂಲೆ ಮೂಲೆಗೂ ತಲುಪಲಾರಂಭಿಸಿದೆ. ಪ್ರತಿಯೊಬ್ಬ ಭಾರತೀಯನೂ ವೋಕಲ್ ಫಾರ ಲೋಕಲ್​ಗೆ ಒತ್ತು ನೀಡಿದರೆ, ಲೋಕಲ್ ಗ್ಲೋಬಲ್ ಆಗುವುದಕ್ಕೆ ಬಹಳಕಾಲ ಬೇಕಾಗದು. ಲೋಕಲ್ ಅನ್ನು ಗ್ಲೋಬಲ್ ಮಾಡುವ ಮೂಲಕ ಭಾರತೀಯ ಉತ್ಪನ್ನಗಳ ಘನತೆಯನ್ನು ಹೆಚ್ಚಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
2014ರಲ್ಲಿ ಆರಂಭ:ದೇಶದ ಜನರನ್ನು ಉದ್ದೇಶಿಸಿ ತಿಂಗಳಿಗೆ ಒಮ್ಮೆ ಬಾನುಲಿ ಮೂಲಕ ಮಾತನಾಡುವ ‘ಮನ್ ಕೀ ಬಾತ್’ ಕಾರ್ಯ ಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ 2014ರ ಅಕ್ಟೋಬರ್ 3ರಂದು ಆರಂಭಿಸಿದರು.
ಭಾರತ 400 ಶತಕೋಟಿ ಡಾಲರ್ ರಫ್ತು ಗುರಿಯನ್ನು ಇದೇ ಮೊದಲ ಸಲ ಸಾಧಿಸಿದೆ. ಈ ವಿಚಾರ ಬರೀ ಆರ್ಥಿಕತೆಗೆ ಸೀಮಿತವಲ್ಲ, ಭಾರತದ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು. ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಸೃಷ್ಟಿಯಾಗುತ್ತಿದೆ. ಭಾರತದ ಸಪ್ಲೈ ಚೇನ್ ಬಲಿಷ್ಠವಾಗುತ್ತಿದೆ.|ನರೇಂದ್ರ ಮೋದಿಪ್ರಧಾನ ಮಂತ್ರಿ
ನವಭಾರತದ ಚಿತ್ರಣ:ಕಳೆದ 1 ವರ್ಷದಲ್ಲಿ ಗವರ್ನಮೆಂಟ್ ಇ-ಮಾರ್ಕೆಟ್ ಪ್ಲೇಸ್ (ಜಿಇಎಂ) ಪೋರ್ಟಲ್ ಮೂಲಕ ಸರ್ಕಾರವು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಖರೀದಿಸಿದೆ. 1.25 ಲಕ್ಷ ಸಣ್ಣ ವ್ಯಾಪರೋದ್ಯಮಿಗಳು ಮತ್ತು ವ್ಯಾಪಾರಿಗಳು ದೇಶದ ಮೂಲೆ ಮೂಲೆಗಳಿಂದ ಈ ಪೋರ್ಟಲ್ ಮೂಲಕ ತಮ್ಮ ಉತ್ಪನ್ನಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಿದ್ದಾರೆ. ನಮ್ಮ ದೇಶ ಈಗ ದೊಡ್ಡ ಕನಸುಗಳನ್ನು ಕಾಣುವುದಷ್ಟೇ ಅಲ್ಲ, ಇದುವರೆಗೆ ಯಾರೂ ಸಾಧಿಸದ್ದನ್ನು ಸಾಧಿಸುವ ಛಾತಿಯನ್ನೂ ತೋರಿಸಿದೆ. ಗ್ರಾಮ ಗ್ರಾಮವೂ ಈಗ ಆತ್ಮನಿರ್ಭರ ಭಾರತದ ಸಂಕಲ್ಪ ಸಾಧಿಸುವ ಕಡೆಗೆ ಮುನ್ನಡೆದಿದೆ ಎಂದು ಪ್ರಧಾನಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
