ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು ಪಕ್ಷದ ಸಂಘಟನಾತ್ಮಕ ವ್ಯವಸ್ಥೆಯಹಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕೆಂದು ಬಯಸಿದ್ದ ಪಕ್ಷದ 23 ಹಿರಿಯ ನಾಯಕರಲ್ಲಿ ಆನಂದ ಶರ್ಮ ಕೂಡ ಒಬ್ಬರು.
ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇಕೆ ಎಂಬುದಕ್ಕೆ ಆನಂದ ಶರ್ಮ ವಿವರಣೆ ನೀಡಿದ್ದಾರೆ. ದೇಶದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಎಲ್ಲರ ಮನದಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸುವುದು ಇದರ ಉದ್ದೇಶವಾಗಿತ್ತು. ಎಲ್ಲರೂ ಪಕ್ಷದ ಬಗ್ಗೆ ಹೃದಯದಲ್ಲಿ ಒಳ್ಳೆಯ ಭಾವನೆಯನ್ನಿಟ್ಟುಕೊಂಡೇ ಇದನ್ನು ಬರೆದಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ;ಶಾಲಾ- ಕಾಲೇಜು ಮತ್ತೆ ಬಂದ್​; ಫ್ಯಾನ್​ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ…!
ಸೋನಿಯಾ ಗಾಂಧಿಗೆ ಪತ್ರ ಬರೆದ ವಿಚಾರ ಕಾಂಗ್ರೆಸ್​ ಕಾರ್ಯಕಾರಿ ಸಭೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಜತೆಗೆ ಹಲವು ಇದನ್ನು ಟೀಕಿಸಿದ್ದರು. ಸ್ವತಃ ರಾಹುಲ್​ ಗಾಂಧಿ ಕೂಡ ಈ ಬೆಳವಣಿಗೆ ಬಗ್ಗೆ ಕೆಂಡವಾಗಿದ್ದರು.
ಆದರೆ, ನಾವು ಬಂಡಾಯಗಾರರಲ್ಲ, ಪಕ್ಷದ ಪುನಶ್ಚೇತನ ಬಯಸುತ್ತಿರುವವರು ಎಂದು ಪತ್ರ ಬರೆದವರು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. ಪಕ್ಷಕ್ಕೆ ಪೂರ್ಣಕಾಲಿಕ, ಸಕ್ರಿಯ ಹಾಗೂ ಗೋಚರ ವ್ಯಕ್ತಿತ್ವದ ನಾಯಕತ್ವ ಅಗತ್ಯವಿದೆ. ರಾಜ್ಯ ಘಟಕಗಳಿಗೆ ಹೆಚ್ಚಿನ ಅಧಿಕಾರ, ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯ ಪುನಾರಚನೆ ಮೊದಲಾದ ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ;ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….!
ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದದ್ದು ಬಂಡಾಯವಲ್ಲ, ಪಕ್ಷದ ಪುನಶ್ಚೇತನಕ್ಕೆ ಪ್ರಾಮಾಣಿಕವಾಗಿ ನೀಡಲಾದ ಸಲಹೆಗಳಾಗಿದ್ದವು. ಎಲ್ಲರೂ ಇದನ್ನು ಓದಿದ್ದಾರೆ ಎಂದು ಭಾವಿಸಿರುವುದಾಗಿ ಆನಂದ ಶರ್ಮ ಹೇಳಿದ್ದಾರೆ.
Well said. The letter was written with the best interest of the party in our hearts and conveying shared concerns over the present environment in the country and sustained assault on the foundational values of the constitution.https://t.co/SoH725j5Ve
— Anand Sharma (@AnandSharmaINC)August 25, 2020

ಮೆಟ್ರೋ ರೈಲು ಶುರುವಾಗುತ್ತೆ, ಶಾಲಾ- ಕಾಲೇಜುಗಳು ಮುಚ್ಚಿರುತ್ತೆ; ಅನ್​ಲಾಕ್​ 4.0 ಹೀಗಿರುತ್ತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 3 =
Remember me
