ವಿಶಾಖಪಟ್ಟಣ:ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಆರ್​.ಆರ್​.ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್​ ಕೆಮಿಕಲ್​ ಫ್ಯಾಕ್ಟರಿಯಲ್ಲಿ ಸ್ಟೈರೀನ್ ಗ್ಯಾಸ್ ಸೋರಿಕೆಯಾಗಿ 9 ಜನರು ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಘಟನೆಗೆ ಸಂಬಂಧಪಟ್ಟಂತೆ ಎಲ್ಲ ವರದಿಯನ್ನೂ ಕೇಳಿದ್ದಾರೆ. ಆಂಧ್ರ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿಯವರೂ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಸಿದ್ದಾರೆ. ಅಲ್ಲಿ ಜನರ ರಕ್ಷಣಾ ಕಾರ್ಯ ನಡೆಯುತ್ತಿದ್ದರೂ, ಪರಿಸ್ಥಿತಿ ಭೀಕರವಾಗಿದೆ. ಪ್ರಾಣಿಗಳೂ ಸಹ ತಲೆ ಸುತ್ತಿ ಬಿದ್ದು, ಪ್ರಾಣ ಕಳೆದುಕೊಳ್ಳುತ್ತಿವೆ.
ಇದನ್ನು ಓದಿ:ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆ ಇತಿಹಾಸ ಗೊತ್ತಾ?
ಇಷ್ಟೆಲ್ಲ ಅವಾಂತರ ಆಗುತ್ತಿದ್ದರೂ ಮಧ್ಯಾಹ್ನದವರೆಗೂ ಒಂದು ಮಾತನಾಡದೆ ಇದ್ದ ಕೆಮಿಕಲ್​ ಎಲ್​ಜಿ ಪಾಲಿಮರ್ಸ್​ ಫ್ಯಾಕ್ಟರಿ ಇದೀಗ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ವಿಷ ಅನಿಲ ಸೋರಿಕೆಯಿಂದ ಅವಘಡ ನಡೆದಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಸಿಕ್ಕಿದೆ. ಈ ಗ್ಯಾಸ್​ ಲೀಕ್​ನಿಂದಾಗಿ ಅಸ್ವಸ್ಥರಾಗಿರುವ ಎಲ್ಲರಿಗೂ ಶೀಘ್ರವೇ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ಹಾಗೇ ಸ್ಟೈರೀನ್ ಗ್ಯಾಸ್ ಸೋರಿಕೆಗೆ ಕಾರಣವೇನು ಎಂಬ ಬಗ್ಗೆ ಮತ್ತು ಇದರಿಂದಾದ ಸಾವು-ನೋವಿನ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದು ಫ್ಯಾಕ್ಟರಿ ಹೇಳಿಕೆ ನೀಡಿದೆ.
ಇದನ್ನೂ ಓದಿ:ವಿಷ ಅನಿಲ ಸೋರಿಕೆ ದುರಂತ; ಗೃಹಸಚಿವಾಲಯ, ಎನ್​ಡಿಎಂಎ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಪ್ರಧಾನಿ
ಇಂದು ಮುಂಜಾನೆ 3ಗಂಟೆಯ ನಂತರ ವಿಷ ಅನಿಲ ಸೋರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಒಮ್ಮೆಲೆ ವಿಷದ ಅನಿಲ ಬಿಡುಗಡೆಯಾಗಿದ್ದರಿಂದ ಸುತ್ತಮುತ್ತಲ ಇರುವ ಇಮ್ಹಾಚಲಂ, ಗೋಪಾಲಪಟ್ಟಣಂ, ವೆಪಗುಂಟ ಮತ್ತಿತರ ಹಳ್ಳಿಗಳ ಜನರು ಅಸ್ವಸ್ಥರಾಗಿದ್ದಾರೆ. ಎನ್​ಡಿಆರ್​ಎಫ್​ ಸೇರಿ ಹಲವು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಸುತ್ತಲಿನ ಹಳ್ಳಿಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ. (ಏಜೆನ್ಸೀಸ್)
ಇದನ್ನೂ ಓದಿ:ಐದು ಹಳ್ಳಿಗಳ ಜನರು ದಿಕ್ಕೆಟ್ಟು ಓಡಿದ್ದೇಕೆ? ನಿಂತಲ್ಲಿ, ಕುಳಿತಲ್ಲಿಯೇ ಪ್ರಜ್ಞೆ ತಪ್ಪಿದ್ದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 3 =
Remember me
