ಕೈರೋ:ಲಿಬಿಯಾದ ಪೂರ್ವ ನಗರವಾದ ಡರ್ನಾದಲ್ಲಿ ಕಳೆದ 24 ಗಂಟೆಗಳಲ್ಲಿ 1500 ಕ್ಕೂ ಹೆಚ್ಚು ಜನರ ಶವಗಳು ಪತ್ತೆಯಾಗಿವೆ. ಚಂಡಮಾರುತದಿಂದ ಉಂಟಾದ ಭೀಕರ ಪ್ರವಾಹಕ್ಕೆ 5300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 10 ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಇದೆ. ಈ ಚಂಡಮಾರುತದ ಹೆಸರು ಸ್ಟಾರ್ಮ್‌ ಡೇನಿಯಲ್. ಇದರಿಂದ ಉಂಟಾದ ಪ್ರವಾಹಕ್ಕೆ ಅಣೆಕಟ್ಟುಗಳೂ ಒಡೆದಿವೆ.ಅಣೆಕಟ್ಟುಗಳು ಒಡೆದ ಪರಿಣಾಮ ನೀರು ಅನೇಕ ನಗರಗಳು ಮತ್ತು ಹಳ್ಳಿಗಳಿಗೆ ಹರಡಿದೆ. ಡರ್ನಾದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆ.

ಇದಕ್ಕೆಲ್ಲ ಕಾರಣ ಮೆಡಿಟರೇನಿಯನ್ ಸಮುದ್ರದಲ್ಲಿನ ಡೇನಿಯಲ್ ಚಂಡಮಾರುತ. ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ದುರ್ಬಲವಾದ ಈ ದೇಶದಲ್ಲಿ ಪ್ರಕೃತಿಯ ಈ ದಾಳಿ ಬಹಳ ಅಪಾಯಕಾರಿಯಾಗಿದ್ದು, ಹಲವೆಡೆ ಮನೆಗಳು ಧ್ವಂಸಗೊಂಡಿವೆ. ಸಮುದ್ರದ ನೀರು ಪ್ರವಾಹದ ರೂಪದಲ್ಲಿ ನಗರವನ್ನು ಪ್ರವೇಶಿಸಿದ್ದು, ಅಣೆಕಟ್ಟುಗಳು, ಸೇತುವೆಗಳು ಒಡೆದಿವೆ. ಇಂತಹ ಭೀಕರ ವಿನಾಶವನ್ನು ಹಿಂದೆ ಯಾರೂ ನೋಡಿರಲಿಲ್ಲ. ಡೇನಿಯಲ್ ಚಂಡಮಾರುತವನ್ನು ಮಡಿಕೇನ್ ಎಂದೂ ಕರೆಯಲಾಗುತ್ತಿದೆ.

ಡರ್ನಾ… ಸಮುದ್ರ ತೀರದಲ್ಲಿ ನೆಲೆಗೊಂಡಿರುವ ನಗರ. ಸುಮಾರು 89 ಸಾವಿರ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಆದರೆ ಚಂಡಮಾರುತದಿಂದ ಉಂಟಾದ ಸಮುದ್ರದ ಪ್ರವಾಹ ಮತ್ತು ಮಳೆಯಿಂದ ಉಂಟಾದ ದಿಢೀರ್ ಪ್ರವಾಹಕ್ಕೆ ಅನೇಕ ರಸ್ತೆಗಳು ಮತ್ತು ನೇತುವೆಗಳು ಮುರಿದುಹೋಗಿವೆ. ಸತ್ತವರು ಮತ್ತು ಕಾಣೆಯಾದವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್‌ನ ಲಿಬಿಯಾದ ರಾಯಭಾರಿ ಟಮರ್ ರಂಜಾನ್ ಹೇಳುತ್ತಾರೆ. ಇಲ್ಲಿ ಕನಿಷ್ಠ 10 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಗೆ ತಿಳಿಸಲಾಗಿದೆ. ಇದೆಲ್ಲವೂ ಹವಾಮಾನ ಬದಲಾವಣೆಯ ಪರಿಣಾಮವಾಗಿದೆ. ಇಲ್ಲಿ ಇಂತಹ ಪ್ರಬಲ ಚಂಡಮಾರುತ ಇಲ್ಲಿಯವರೆಗೆ ಬಂದಿರಲಿಲ್ಲ.
ಅರೆರೆ…ಮೀನು ನಗೋದನ್ನು ನೀವು ಎಂದಾದರೂ ನೋಡಿದ್ದೀರಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − three =
Remember me
