ಮುಂಬೈ:ಐಪಿಒ ಮಾರುಕಟ್ಟೆಯ ಇದುವರೆಗಿನ ಅತಿದೊಡ್ಡ ಐಪಿಒ ಎಂದೇ ಖ್ಯಾತಿಪಡೆದಿರುವ ಎಲ್​ಐಸಿ ಷೇರು ಮೌಲ್ಯ ಗುರುವಾರವೂ ಶೇ.4 ಕುಸಿತ ಕಂಡು, 804.2ಕ್ಕೆ ಇಳಿದಿದೆ. ಮಂಗಳವಾರವಷ್ಟೇ ಲಿಸ್ಟಿಂಗ್​ ಆಗಿದ್ದ ಎಲ್​ಐಸಿ ಷೇರು ಮೌಲ್ಯ ವಿತರಣಾ ದರಕ್ಕಿಂತಲೂ ಕೆಳಕ್ಕೆ ಕುಸಿದು ಹೂಡಿಕೆದಾರರಿಗೆ ಬರೋಬ್ಬರಿ 68,100 ಕೋಟಿ ರೂಪಾಯಿ ನಷ್ಟ ಉಂಟುಮಾಡಿದೆ. ಷೇರುಪೇಟೆಯಲ್ಲಿ ಭಾರಿ ಏರಿಳಿತ ಇರುವ ಸಂದರ್ಭದಲ್ಲೇ ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಿದ ಎಲ್​ಐಸಿಯ ಮಾರುಕಟ್ಟೆ ಮೌಲ್ಯ ದಿನೇದಿನೆ ಕುಸಿಯುತ್ತಿದೆ. ಎಲ್​ಐಸಿ ಷೇರಿನ ಹಂಚಿಕೆ ದರ 949 ರೂ. ಇತ್ತು. ಆಗ ಎಲ್​ಐಸಿಯ ಮಾರುಕಟ್ಟೆ ಬಂಡವಾಳ 6,00,242 ಕೋಟಿ ರೂ.ಇತ್ತು. ಗುರುವಾರದ ನಷ್ಟದ ಬಳಿಕ ಮಾರುಕಟ್ಟೆ ಬಂಡವಾಳ 5,31,932.31 ಕೋಟಿ ರೂ.ಆಗಿದೆ.
ಮೊದಲ ದಿನದ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್​ನಲ್ಲಿ ಎಲ್​ಐಸಿ ಷೇರು ಮೌಲ್ಯ ಐಪಿಒ ವಿತರಣಾ ದರ 949 ರೂ.ಗಿಂತ ಶೇಕಡ 7.75 ಕುಸಿದು 875.45 ರೂ.ನಲ್ಲಿ ವಹಿವಾಟು ಮುಗಿಸಿದೆ. ಆದಾಗ್ಯೂ, ಇದು ಲಿಸ್ಟಿಂಗ್​ ಸಂದರ್ಭದ ಷೇರು ಮೌಲ್ಯ 867.20 ರೂ.ಗಿಂತ ಶೇ.0.95 ಹೆಚ್ಚಾಗಿದೆ. ಮೊದಲ ದಿನದ ವಹಿವಾಟಿನ ಬಳಿಕ, ಬಿಎಸ್​ಇನಲ್ಲಿ ಎಲ್​ಐಸಿ ಮಾರುಕಟ್ಟೆ ಬಂಡವಾಳ 5.53 ಲ ಕೋಟಿ ರೂ.ಆಗಿತ್ತು. ಎಲ್​ಐಸಿಯು 27.53 ಲ ಷೇರುಗಳನ್ನು ಹಸ್ತಾಂತರಿಸಿದ್ದು, 245.34 ಕೋಟಿ ರೂ. ವಹಿವಾಟು ನಡೆಸಿದೆ. ಕಂಪನಿ ಷೇರು ಮೌಲ್ಯ 902ರಿಂದ 949 ರೂಪಾಯಿ ನಿಗದಿ ಆಗಿತ್ತು. ಮೇ 4ರಂದು ಐಪಿಒ ಓಪನ್​ ಆಗಿದ್ದು, ಮೇ 9ರಂದು ಕೊನೆಗೊಂಡಿತ್ತು. ಐಪಿಒ 2.95 ಪಟ್ಟು ಹೆಚ್ಚು ಸಬ್​ಸ್ಕ್ರಿಪ್ಶನ್​ ಹೊಂದಿತ್ತು. ಸರ್ಕಾರ ತನ್ನಪಾಲಿನ ಷೇರು ಮಾರಾಟ ಮಾಡಿ 20,557 ಕೋಟಿ ರೂ. ಸಂಗ್ರಹಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fourteen =
Remember me
