ನವದೆಹಲಿ:ಭಾರತೀಯ ಜೀವ ವಿಮಾ ನಿಗಮದ (ಎಲ್​ಐಸಿ) ಆರಂಭಿಕ ಷೇರು ಮಾರಾಟ (ಐಪಿಒ) ಪ್ರಕ್ರಿಯೆ ಬುಧವಾರ ಆರಂಭವಾಗಿದ್ದು, ಮೊದಲ ದಿನವೇ 5,627 ಕೋಟಿ ರೂ. ಬಿಡ್​ ಸಲ್ಲಿಕೆ ಆಗಿದೆ. ಸಂಜೆ 5ರವರೆಗೆ 10 ಕೋಟಿ ಈಕ್ವಿಟಿ ಷೇರುಗಳಿಗೆ ಬೇಡಿಕೆ ಸಲ್ಲಿಕೆ ಆಗಿದ್ದು, ಏಳು ತಾಸಿನಲ್ಲಿ ಶೇ. 67ರಷ್ಟು ಗ್ರಾಹಕರು ಷೇರು ಕೊಳ್ಳಲು ಆಸಕ್ತಿ ತೋರಿದರು.
ರಿಟೇಲ್​ ಹೂಡಿಕೆ ವಿಭಾಗದಲ್ಲಿ ಶೇ. 0.55, ಸಾಂಸ್ಥಿಕೇತರ ಹೂಡಿಕೆಯಲ್ಲಿ ಶೇ. 0.33, ಎಲ್​ಐಸಿ ಉದ್ಯೋಗಿಗಳ ಕೊಟಾದಲ್ಲಿ ಶೇ. 1.02 ಮತ್ತು ಪಾಲಿಸಿದಾರರ ಕೋಟಾದಲ್ಲಿ ಶೇ. 1.82 ಬಿಡ್​ಗಳು ಸಲ್ಲಿಕೆ ಆಗಿವೆ. ಬೇಡಿಕೆ ಹೆಚ್ಚಿರುವ ಕಾರಣ ಶನಿವಾರವೂ (ಮೇ 7) ಷೇರು ಖರೀದಿಗೆ ಬಿಡ್​ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೇ 9ಕ್ಕೆ ಐಪಿಒ ಬಿಡ್​ ಕೊನೆಗೊಳ್ಳಲಿದೆ. ಪ್ರತಿ ಷೇರಿಗೆ 902ರಿಂದ 949 ರೂಪಾಯಿ ಒಳಗೆ ದರ ನಿಗದಿ ಮಾಡಲಾಗಿದ್ದು, 22.14 ಕೋಟಿ ಷೇರುಗಳನ್ನು (ಶೇ. 3.5) ಮಾರಾಟ ಮಾಡಲು ಸರ್ಕಾರ ಉದ್ದೇಶಿಸಿದೆ. ಈ ಮೂಲಕ 21 ಸಾವಿರ ಕೋಟಿ ರೂಪಾಯಿ ಹೂಡಿಕೆ ಸಂಗ್ರಹಿಸುವ ಗುರಿ ಇರಿಸಿಕೊಂಡಿದೆ. ಎಲ್​ಐಸಿ ಉದ್ಯೋಗಿಗಳಿಗೆ ಪ್ರತಿ ಷೇರಿನಲ್ಲಿ 45 ರೂ. ಮತ್ತು ಪಾಲಿಸಿದಾರರಿಗೆ 60 ರೂ. ರಿಯಾಯಿತಿ ಇದೆ.
ನಟ ಮಹೇಶ್​ ಬಾಬುಗೆ ಕಪಾಳ ಮೋಕ್ಷ ಮಾಡಿ ಕ್ಷಮೆಯಾಚಿಸಿದ ಕೀರ್ತಿ ಸುರೇಶ್​! ನಡೆದಿದ್ದೇನು? ಇಲ್ಲಿದೆ ಸ್ಫೋಟಕ ಮಾಹಿತಿ

ತುಂಬಿದ ಗ್ರಾಮ ಸಭೆಯಲ್ಲಿ ಸರ್ಕಾರಿ ಅಧಿಕಾರಿಗೆ ಚಪ್ಪಲಿಯಲ್ಲಿ ಬಾರಿಸಿದ ಗ್ರಾ.ಪಂ ಉಪಾಧ್ಯಕ್ಷೆಗೆ ಮರುಕ್ಷಣವೇ ಶಾಕ್!​

ಸುಳ್ಳು ಮಾಹಿತಿ ನೀಡಿದ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿದ ಚಾಮರಾಜನಗರದ ಜಿಲ್ಲಾಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
