ಮುಂಬೈ:ಲೈಫ್ ಇನ್ಶೂರೆನ್ಸ್ ಕಾರ್ಪೋರೇಷನ್ (ಎಲ್​ಐಸಿ)ನ ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಮೇ 4ರಂದು ಚಿಲ್ಲರೆ ಹೂಡಿಕೆದಾರರಿಗೆ ಓಪನ್ ಆಗಲಿದೆ. ಮೇ 9ರಂದು ಕೊನೆಗೊಳ್ಳಲಿದ್ದು, ಮೇ 15ರಂದು ಬಿಡ್ ಇಶ್ಶೂ್ಯ ಮತ್ತು ಮೇ 17ರಂದು ಷೇರುಪೇಟೆಯಲ್ಲಿ ಇದು ಲಿಸ್ಟಿಂಗ್ ಆಗಲಿದೆ. ಇದಕ್ಕಾಗಿ ಪ್ರತಿ ಷೇರಿನ ದರವನ್ನು 902-949 ರೂಪಾಯಿ ಪ್ರೖೆಸ್ ಬ್ಯಾಂಡ್ ನಿಗದಿ ಮಾಡಿ ಬುಧವಾರ ದಿನಾಂಕವನ್ನು ಎಲ್​ಐಸಿ ಘೊಷಿಸಿತು.
ಗರಿಷ್ಠ ಪ್ರೖೆಸ್ ಬ್ಯಾಂಡ್ ಪ್ರಕಾರ ಸರ್ಕಾರ 21,000 ಕೋಟಿ ರೂ. ಸಂಗ್ರಹಿಸಲಿದೆ. ಆಫರ್ ಫಾರ್ ಸೇಲ್ (ಒಎಫ್​ಎಸ್) ಮಾದರಿಯಲ್ಲಿ ಸರ್ಕಾರವು ತನ್ನ ಪಾಲಿನ ಶೇಕಡ 3.5 ಷೇರುಗಳನ್ನು (22.13 ಕೋಟಿ) ಮಾರಾಟ ಮಾಡಿ ಕಂಪನಿಯಿಂದ 21 ಕೋಟಿ ರೂಪಾಯಿ ಹೂಡಿಕೆ ಹಿಂಪಡೆಯಲಿದೆ.
ಬಂಡವಾಳ ಮಾರುಕಟ್ಟೆಯ ಪರಿಸರವನ್ನು ಗಮನಿಸಿದರೆ, ಎಲ್​ಐಸಿ ಐಪಿಒ ಸರಿಯಾದ ಗಾತ್ರದ್ದಾಗಿದೆ. ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಇದು ಪ್ರತ್ಯೇಕವಾಗಿ ನಿಲ್ಲದು. ಸದ್ಯ ಇದರ ಗಾತ್ರವನ್ನು 20,557 ಕೋಟಿ ರೂಪಾಯಿಗೆ ಇಳಿಸಿದ ಬಳಿಕವೂ, ಇದುವರೆಗೆ ಬಿಡುಗಡೆಯಾದ ಐಪಿಒಗಳ ಪೈಕಿ ಇದುವೇ ದೊಡ್ಡದು. ಎಲ್​ಐಸಿಯಿಂದ ಹೂಡಿಕೆ ಹಿಂಪಡೆಯುವ ಸರ್ಕಾರದ ನಡೆ, ಅದರ ದೀರ್ಘಕಾಲದ ವ್ಯೂಹಾತ್ಮಕ ದೃಷ್ಟಿಯದ್ದಾಗಿದೆ. ಅದೇ ರೀತಿ ಕಾರ್ಪೆರೇಶನ್​ನ ಮೌಲ್ಯವನ್ನು ಹೆಚ್ಚಿಸುವಂಥದ್ದಾಗಿದೆ ಎಂದು ಡಿಪಾರ್ಟ್​ವೆುಂಟ್ ಆಫ್ ಇನ್​ವೆಸ್ಟ್​ಮೆಂಟ್ ಆಂಡ್ ಪಬ್ಲಿಕ್ ಅಸೆಟ್ ಮ್ಯಾನೇಜ್​ವೆುಂಟ್ ಸೆಕ್ರೆಟರಿ ತುಹಿನ್ ಕಾಂತ ಪಾಂಡೆ ಹೇಳಿದರು.
ಯಾರಿಗೆಷ್ಟು ಡಿಸ್ಕೌಂಟ್?:ಎಲ್​ಐಸಿ ಐಪಿಒ ಮೂಲಕ ವಿತರಣೆಯಾಗುವ ಷೇರುಗಳನ್ನು ಖರೀದಿಸುವುದಾದರೆ ಆಯ್ದ ಚಿಲ್ಲರೆ ಹೂಡಿಕೆದಾರರು ಮತ್ತು ಉದ್ಯೋಗಿಗಳಿಗೆ ಡಿಸ್ಕೌಂಟ್ ಸಿಗಲಿದೆ. ಹೂಡಿಕೆದಾರರು ಎಲ್​ಐಸಿ ಪಾಲಿಸಿದಾರರಾಗಿದ್ದರೆ ಅಂಥವರು ಪ್ರತಿ ಷೇರನ್ನು 60 ರೂಪಾಯಿ ವಿನಾಯಿತಿಯಲ್ಲಿ ಖರೀದಿಸಬಹುದು. ಆದರೆ ಇದು 2022ರ ಏಪ್ರಿಲ್ 13ಕ್ಕಿಂತ ಮೊದಲು ಎಲ್​ಐಸಿ ಪಾಲಿಸಿ ಖರೀದಿಸಿದವರಿಗೆ ಮಾತ್ರ ಅನ್ವಯ. ಅದೇ ರೀತಿ, ಎಲ್​ಐಸಿ ಉದ್ಯೋಗಿ ಆಗಿದ್ದರೆ, ಅಂಥವರು ಪ್ರತಿ ಷೇರನ್ನು 45 ರೂಪಾಯಿ ವಿನಾಯಿತಿಯಲ್ಲಿ ಖರೀದಿಸಬಹುದು.
ಭಾರತದ ಅತಿದೊಡ್ಡ ಪಬ್ಲಿಕ್ ಇಶ್ಶೂ್ಯ ಇದಾಗಿದ್ದು, ಪಾಲಿಸಿದಾರರಿಗೆ ಮತ್ತು ಉದ್ಯೋಗಿಗಳಿಗೆ ವಿನಾಯಿತಿ ಸಿಗುತ್ತಿದೆ. ಇದರೊಂದಿಗೆ ಎಲ್​ಐಸಿ 3.0 ರ ಯುಗ ಶುರುವಾಗಲಿದೆ. ಹೊಸ ಮೈಲಿಗಲ್ಲುಗಳೊಂದಿಗೆ ಎಲ್​ಐಸಿ ತನ್ನ ವ್ಯವಹಾರಗಳನ್ನು ಮುಂದುವರಿಸಲಿದೆ.
|ಎಂ.ಆರ್. ಕುಮಾರ್ಎಲ್​ಐಸಿ ಚೇರ್ಮನ್
ವರ್ಷ ವಿಳಂಬ:ಕಳೆದ ಹಣಕಾಸು ವರ್ಷದಲ್ಲೇ ಎಲ್​ಐಸಿ ಐಪಿಒ ಬಿಡುಗಡೆಯಾ ಗಬೇಕಾಗಿತ್ತು. ಎಲ್​ಐಸಿಯಲ್ಲಿದ್ದ ಸರ್ಕಾರದ ಷೇರುಗಳ ಪೈಕಿ ಶೇಕಡ 5 ಅನ್ನು ಐಪಿಒ ಮೂಲಕ ಮಾರಾಟ ಮಾಡಿ 60,000 ಕೋಟಿ ರೂಪಾಯಿ ಸಂಗ್ರಹಿಸು ವುದಕ್ಕೆ ಯೋಜನೆ ಸಿದ್ಧವಾಗಿತ್ತು. ಆದರೆ ಬದಲಾದ ಜಾಗತಿಕ ವಿದ್ಯಮಾನ ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಹೀಗಾಗಿ ಈ ಹಣಕಾಸು ವರ್ಷದಲ್ಲಿ ಐಪಿಒ ಗಾತ್ರ ಕುಗ್ಗಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 18 =
Remember me
