ಬೆಂಗಳೂರು:ಬಹು ನಿರೀಕ್ಷಿತ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೇ 4 ರಿಂದ ಮಾರುಕಟ್ಟೆ ಪ್ರವೇಶಿಸಲಿದ್ದು, ದೇಶದ ಜನರಿಗೆ ಎಲ್‌ಐಸಿ ಷೇರು ಖರೀದಿಸಲು ಅವಕಾಶ ದೊರೆಯಲಿದೆ. ಈ ಮೂಲಕ ಗ್ರಾಹಕರಿಗೆ ಎಲ್‌ಐಸಿ ಷೇರು ಮೇಲೆ ಬಂಡವಾಳ ಹೂಡಿಕೆಗೆ ಅಧಿಕೃತವಾಗಿ ಕೇಂದ್ರ ಅವಕಾಶ ನೀಡಿದಂತಾಗಿದೆ.
ಪ್ರತಿ ಷೇರುಗಳ ಬೆಲೆ 902 ರೂ.ನಿಂದ 949 ರೂ.ವರೆಗೆ ನಿಗದಿ ಮಾಡಲಾಗಿದೆ. ಐಪಿಒ ಬಿಡುಗಡೆಯಾದ ಒಂದು ವಾರದ ಬಳಿಕ ಅಂದರೆ ಮೇ 17ರಂದು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಲಿದೆ. ಪಾಲಿಸಿದಾರರ ವರ್ಗಕ್ಕೆ ಪ್ರತಿ ಷೇರಿಗೆ 60 ರೂ. ಹಾಗೂ ಅರ್ಹ ಉದ್ಯೋಗಿಗಳ ವರ್ಗಕ್ಕೆ 45 ರೂ. ರಿಯಾಯಿತಿ ಲಭಿಸಲಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಪಟ್ನಾಯಕ್ ಮಾತನಾಡಿ, ವಿಮಾ ಕಂಪನಿಯ ಒಟ್ಟು ಷೇರುಗಳ ಪೈಕಿ ಶೇ.3.5 ಮಾರಾಟ ಮಾಡಿ 21 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಷೇರು ಚಂದದಾರರಿಗೆ ಮೇ 4ರಂದು ಎಲ್‌ಐಸಿ ಐಪಿಒ ತೆರೆಯಲಿದ್ದು, ಮೇ 9ರಂದು ಮುಕ್ತಯವಾಗಲಿದೆ.ಬಿಡ್ ಸಲ್ಲಿಸಿದವರಿಗೆ ಷೇರುಗಳು ದೊರೆತರೆ ಮೇ 16ರಂದು ಡಿ ಮ್ಯಾಟ್ ಖಾತೆಗಳಿಗೆ ವರ್ಗಾವಣೆ ಆಗಲಿವೆ. ಕನಿಷ್ಠ 15 ಷೇರುಗಳಿಗೆ ಬಿಡ್ ಸಲ್ಲಿಸಬೇಕು. 2 ವರ್ಷದಿಂದ ಎಲ್‌ಐಸಿ ಐಪಿಒ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿತ್ತು. ಅಂತಿಮವಾಗಿ ಕೇಂದ್ರ ದೀರ್ಘಾವಧಿ ಅಂಶ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲು ಯಶಸ್ವಿಯಾಗಿದೆ. ಇದರಿಂದ ಸಂಸ್ಥೆಯ ಮೌಲ್ಯವೂ ವೃದ್ಧಿಸಲಿದೆ ಎಂದರು.
ಗರಿಷ್ಠ 2 ಲಕ್ಷ ರೂ.ಹೂಡಿಕೆ:ಎಲ್‌ಐಸಿ 30 ಕೋಟಿಕ್ಕಿಂತ ಹೆಚ್ಚು ಪಾಲಿಸಿದಾರರನ್ನು ಹೊಂದಿರುವ ದೇಶದ ಹಳೆಯ ವಿಮಾ ಸಂಸ್ಥೆಯಾಗಿದೆ. 1956ರ ಸೆ.1ರಂದು ಅಸ್ತಿತ್ವಕ್ಕೆ ಬಂದಿರುವ ಎಲ್‌ಐಸಿ, ಈಗ 2,048 ಗಣಕೀಕೃತ ಶಾಖಾ ಕಚೇರಿಗಳು, 113 ವಿಭಾಗೀಯ ಕಚೇರಿಗಳು, 8 ವಲಯವಾರು ಕಚೇರಿಗಳು ಹಾಗೂ 1,381 ಸ್ಯಾಟಲೈಟ್ ಹಾಗೂ ಕಾರ್ಪೋರೇಟ್ ಕಚೇರಿಗಳನ್ನು ಹೊಂದಿದೆ. ಪಾಲಿಸಿದಾರರಿಗೆ ಷೇರು ಹೂಡಿಕೆಗೆ ಉತ್ತೇಜಿಸುವ ಸಲುವಾಗಿ ಕೇಂದ್ರ, ಎಲ್‌ಐಸಿ ಐಪಿಒದಲ್ಲಿ ಶೇ.10 ಷೇರುಗಳನ್ನು ಪಾಲಿಸಿದಾರರಿಗೆ ಮೀಸಲಿಟ್ಟಿದೆ. ಪಾಲಿಸಿದಾರರು ಪ್ರತಿ ಷೇರಿಗೆ 60 ರೂ ಹಾಗೂ ರಿಟೇಲ್ ಹೂಡಿಕೆದಾರರು 45 ರೂ.ಡಿಸ್ಕೌಂಟ್ ಪಡೆಯಲಿದ್ದಾರೆ. ಇವರು ಗರಿಷ್ಠ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು ಎಂದು ಎಲ್‌ಐಸಿ ಎಂಡಿ ಮಿನಿ ಐಪಿಇ ಮಾಹಿತಿ ನೀಡಿದರು.
ಶೇ.47 ಡಿಜಿಟಲ್ ವ್ಯವಹಾರ:ದೇಶದ ಅತಿದೊಡ್ಡ ವಿಮಾ ಕಂಪನಿಯಾದ ಎಲ್‌ಐಸಿ, ಪ್ರೀಮಿಯಂ ಕಲೆಕ್ಷನ್‌ನಲ್ಲಿ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಶೇ.66 ಮಾರುಕಟ್ಟೆ ಷೇರು ಹೊಂದಿದೆ. ದೇಶದ ಬ್ರಾಂಡ್ ಮೌಲ್ಯದಲ್ಲಿ ಎಲ್‌ಐಸಿ 2ನೇ ಸ್ಥಾನ ಹಾಗೂ ವಿಶ್ವದಲ್ಲಿ 10ನೇ ಸ್ಥಾನದಲ್ಲಿದೆ. ಚಿಕ್ಕವರಿಂದ ಹಿಡಿದು ದೊಡ್ಡವರೆಗೆ 42 ಪಾಲಿಸಿಗಳಿವೆ. ಕೋವಿಡ್ ಸಂಕಷ್ಟದಲ್ಲಿಯೂ ಹೆಚ್ಚು ಜನರು ಪಾಲಿಸಿಗಳನ್ನು ಮಾಡಿಸಿದ್ದಾರೆ.
2020-21ರಲ್ಲಿ 2.5 ಕೋಟಿ ಮಂದಿ ಹಾಗೂ 2021-22ರಲ್ಲಿ 2.11 ಕೋಟಿ ಮಂದಿ ಹೊಸದಾಗಿ ಎಲ್‌ಐಸಿ ಪಾಲಿಸಿ ಮಾಡಿಸಿದ್ದಾರೆ. ಗ್ರಾಹಕರಿಗೆ ಇನ್ನಷ್ಟು ಸೇವೆ ಸಲ್ಲಿಸಲು ಸಂಸ್ಥೆ ಬದ್ಧವಾಗಿದ್ದು, ಆಯಾ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು ಸೇವೆ ನೀಡಲಾಗುತ್ತಿದೆ. ದೇಶಾದ್ಯಂತ 13 ಲಕ್ಷ ಏಜೆಂಟ್ ಹೊಂದಿರುವ ಎಲ್‌ಐಸಿ, ಗುಂಪು ವಿಮೆಯಲ್ಲಿ ಹಾಗೂ ವಿಮೆ ಮರು ನವೀಕರಣದಲ್ಲೂ ನಂ.1 ಸ್ಥಾನದಲ್ಲಿದೆ. ಶೇ.62 ಗ್ರಾಹಕರು 5 ವರ್ಷ ಕಳೆದರೂ ತಮ್ಮ ವಿಮೆಗಳನ್ನು ಕಟ್ಟುತ್ತಿದ್ದಾರೆ. ಶೇ.47 ವ್ಯವಹಾರ ಡಿಜಿಟಲ್‌ನಲ್ಲಿ ನಡೆಯುತ್ತಿದೆ ಎಂದು ಬಿ.ಸಿ.ಪಟ್ನಾಯಕ್ ಹೇಳಿದರು.
ನಿಯಮಗಳೇನು?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × one =
Remember me
