ಕೋಲ್ಕತ್ತ:ಕೇಂದ್ರ ಸರ್ಕಾರ ಎರಡು ದಿನಗಳ ಹಿಂದೆ ಅಂದರೆ ಸೋಮವಾರ ಸಂಜೆ ಚೀನಾದ ಟಿಕ್​ಟಾಕ್​ ಸೇರಿ 59 ಆ್ಯಪ್​​ಗಳನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಬಹುತೇಕ ಪಕ್ಷಗಳೂ ಸ್ವಾಗತಿಸಿವೆ.
ಈ ಮಧ್ಯೆ ತೃಣಮೂಲ ಕಾಂಗ್ರೆಸ್​ನ ಸಂಸದೆ, ನುಸ್ರತ್​ ಜಹಾನ್​ ಅವರು ಚೀನಾ ಆ್ಯಪ್​ಗಳ ನಿಷೇಧ ಅದರಲ್ಲೂ ಟಿಕ್​​​ಟಾಕ್​​ ಬ್ಯಾನ್​ ಮಾಡಿದ್ದನ್ನು, ಕೇಂದ್ರ ಸರ್ಕಾರ 2016ರಲ್ಲಿ ಘೋಷಿಸಿದ್ದ ನೋಟು ಅಮಾನ್ಯೀಕರಣಕ್ಕೆ ಹೋಲಿಸಿದ್ದಾರೆ.
ಚೀನಾ ಆ್ಯಪ್​ ಟಿಕ್​ಟಾಕ್​ ಬ್ಯಾನ್​ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂದೆ ಮುಂದೆ ಯೋಚಿಸದೆ, ಹಠಾತ್​ ಆಗಿ ತೆಗೆದುಕೊಂಡಿದೆ. ಇದರಿಂದಾಗಿ ನಿರುದ್ಯೋಗಕ್ಕೀಡಾಗುವವರ ಮುಂದಿನ ಗತಿಯೇನು? 2016ರಲ್ಲಿ ರಾತ್ರೋರಾತ್ರಿ ನೋಟು ಅಮಾನ್ಯೀಕರಣವಾದಾಗ ಒಂದಷ್ಟು ಜನರು ಹೇಗೆ ಸಂಕಷ್ಟಕ್ಕೀಡಾಗಿದ್ದರೋ, ಅದೇ ರೀತಿ ಈಗಲೂ ಸಹ ಅನೇಕರು ಕಷ್ಟಪಡಲಿದ್ದಾರೆ ಎಂದು ನುಸ್ರತ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಪ್ಮಾಸ್ಮಾದಿಂದಾಗಿ ಬದುಕಿದೆ: ನಾನು ಪ್ಲಾಸ್ಮಾ ದಾನಮಾಡಿರುವೆ, ನೀವೂ ಮಾಡಿ ಎಂದ ಸಚಿವ
ರಾಷ್ಟ್ರದ ಭದ್ರತೆ, ಹಿತಾಸಕ್ತಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಚೀನಾ ಆ್ಯಪ್​​​ಗಳನ್ನು ಬ್ಯಾನ್​ ಮಾಡಿದೆ. ಇದರಿಂದ ನನಗೇನೂ ಸಮಸ್ಯೆ ಇಲ್ಲ. ಆದರೆ ಅದೆಷ್ಟೋ ಜನ ಉದ್ಯೋಗ ಕಳೆದುಕೊಳ್ಳುತ್ತಾರಲ್ಲ, ಅವರ ಬಗ್ಗೆಯೂ ಯೋಚನೆ ಮಾಡಬೇಕು ಎಂದಿದ್ದಾರೆ.ಹಾಗೇ ಚೀನಾ ಆ್ಯಪ್​ಗಳ ಬ್ಯಾನ್​ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಚೀನಾದ ಆ್ಯಪ್​ಗಳನ್ನು ಬ್ಯಾನ್​ ಮಾಡಿದರೆ ಸಾಲದು. ಇನ್ನೂ ಖಡಕ್​ ಪ್ರತಿಕ್ರಿಯೆಯನ್ನು ಆ ದೇಶಕ್ಕೆ ನೀಡಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)
‘ಲಕ್ಷ್ಮೀ ಬಾಂಬ್​’ ಮತ್ತು ‘ಭುಜ್​’, ಓಟಿಟಿಗೆ ಸೇಲ್​ ಆಗಿದ್ದು ಎಷ್ಟಕ್ಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
