ಲಖನೌ:ಉತ್ತರಪ್ರದೇಶ ಸರ್ಕಾರದ ಸಾಮೂಹಿಕ ವಿವಾಹ ಯೋಜನೆಯಲ್ಲಿ ವಂಚನೆ ನಡೆದಿರುವುದು ಇತ್ತೀಚೆಗೆ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆಗೆ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ. ವಂಚನೆ ತಡೆಯುವ ನಿಟ್ಟಿನಲ್ಲಿ ಸ್ಥಳದಲ್ಲೇ ವಿವಾಹ ನೋಂದಣಿ, ಫೋಟೋಗ್ರಫಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಅಸೀಮ್​ ಅರುಣ್​ ತಿಳಿಸಿದ್ದಾರೆ.
ಸ್ಥಳದಲ್ಲೇ ವಿವಾಹ ನೋಂದಣಿ ಮಾಡಿಸಿ ಪ್ರಮಾಣಪತ್ರ ವಿತರಿಸಲಾಗುತ್ತದೆ. ನವವಿವಾಹಿತರ ಮಾಹಿತಿ ಡೈರೆಕ್ಟ್​ ಬೆನಿಫಿಟ್​ ಟ್ರಾನ್ಸ್​ರ್​ ಮತ್ತು ಆಧಾರ್​ ಜತೆ ಲಿಂಕ್​ ಮಾಡಲಾಗುತ್ತದೆ. ಎಲ್ಲ ವಿಧಿ&ವಿಧಾನಗಳನ್ನು ವಿಡಿಯೋ ಮಾಡಿ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ “ವಧು&ವರರು ಈಗಾಗಲೇ ಮದುವೆ ಆಗಿದ್ದರೇ?’ ಎಂಬುದನ್ನು ಸ್ಥಳಿಯ ಪಂಚಾಯತ್​ ಕಾರ್ಯದರ್ಶಿಯಿಂದ ಪರಿಶೀಲಿಸುವ ಜತೆಗೆ ವಿವಿಧ ಹಂತದಲ್ಲಿ ದೃಢೀಕರಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.
ಸದ್ಯ ಸಾಮೂಹಿಕ ವಿವಾಹದಲ್ಲಿ ಒಮ್ಮೆಗೆ 100ಕ್ಕಿಂತ ಹೆಚ್ಚು ಮದುವೆ ಆಯೋಜಿಸುವಂತಿಲ್ಲ. ಒಂದು ವೇಳೆ ಸಾಮೂಹಿಕ ವಿವಾಹದಲ್ಲಿ ಸಿಎಂ&ಸಚಿವರು ಅತಿಥಿ ಆಗಿ ಆಗಮಿಸುವುದಿದ್ದರೆ ಈ ಮಿತಿಯಲ್ಲಿ ಸ್ವಲ್ಪ ವಿನಾಯಿತಿ ಇರುತ್ತದೆ ಎಂದಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × three =
Remember me
