ಲಕ್ನೌ:ಆಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗ (ಐಸಿಯು) ಎಂದಮೇಲೆ ಸ್ಪೆಷಲಿಸ್ಟ್​ ವೈದ್ಯರೂ ಅಲ್ಲೇ ಇರಬೇಕು. ಇರದಿದ್ದರೆ ಅವಾಂತರ ಉಂಟಾಗಬಹುದು. ಆದರೆ ಉತ್ತರಪ್ರದೇಶದಲ್ಲಿ ಸ್ಪೆಷಲಿಸ್ಟ್​ ಎಲ್ಲೋ, ಐಸಿಯೋ ಎಲ್ಲೋ…
ಹೌದು.. ಐಸಿಯುಗಳಲ್ಲಿ ತಕ್ಷಣಕ್ಕೆ ಸ್ಪೆಷಲಿಸ್ಟ್​ಗಳ ಸಲಹೆ-ಸೇವೆ ಸಿಗದೆ ರೋಗಿಗಳಿಗೆ ಸಮಸ್ಯೆ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೊಸದೊಂದು ವ್ಯವಸ್ಥೆಗೆ ಮುಂದಾಗಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಸಭೆ ನಡೆಸಿದ ಅವರು, ಎಲ್ಲ ಮೆಡಿಕಲ್​ ಕಾಲೇಜುಗಳಿಗೆ ವಿಶೇಷ ಟೆಕ್ನಾಲಜಿ ಮೂಲಕ ವರ್ಚುವಲ್​ ಐಸಿಯು ಲಿಂಕ್​ ಮಾಡುವ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿದ್ದಾರೆ. ಐಸಿಯುನಲ್ಲಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಇದರಿಂದ ಸ್ಟೆಷಲಿಸ್ಟ್​ಗಳ ಸಲಹೆ-ಸೇವೆ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.
ಇನ್ನು ಕಳೆದ ಒಂದು ವಾರದಿಂದ ಪ್ರತಿದಿನ ನೂರಕ್ಕೂ ಹೆಚ್ಚು ಸೋಂಕು ಪ್ರಕರಣ ಪತ್ತೆ ಆಗುತ್ತಿರುವ ಜಿಲ್ಲೆಗಳಲ್ಲಿ ಕರೊನಾ ನಿಯಂತ್ರಣಕ್ಕೆ ವಿಶೇಷ ನಿಗಾ ವಹಿಸುವಂತೆಯೂ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
