ನವದೆಹಲಿ:ಅಮ್ಮ ಅಂದರೆ ಎಲ್ಲರಿಗೂ ಅಷ್ಟೇ. ತುಂಬಾ ಪ್ರೀತಿ. ಅದರಲ್ಲೂ ಎಳೆಯ ಮಕ್ಕಳಿಗೆ ಅಮ್ಮನೇ ಸರ್ವಸ್ವ. ಆಕೆಯೊಂದಿಗೆ ಆಟವಾಡುವುದು ಎಂದರೆ ತುಂಬಾ ಇಷ್ಟ. ವನ್ಯಪ್ರಾಣಿಗಳು ಕೂಡ ಈ ಮನೋಭಾವದಿಂದ ಹೊರತಲ್ಲ.
ಇಲ್ಲೊಂದು ಸಿಂಹದ ಮರಿಗೆ ಅಮ್ಮನೊಂದಿಗೆ ಚಿನ್ನಾಟ ಆಡುವ ಉಮೇದು. ಆದರೆ, ಗಡದ್ದಾಗಿ ತಿಂದಿರುವ ಅಮ್ಮನಿಗೋ ನಿದ್ದೆ ಮಾಡುವ ಮೂಡು. ಆದರೇನು. ಚಿನ್ನಾಟದ ಮೂಡಿನಲ್ಲಿದ್ದ ಸಿಂಹದ ಮರಿ ಅಮ್ಮನ ಮೈಮೇಲೆ ಹತ್ತಿ, ಕುಣಿದು, ಆಕೆಯ ಕತ್ತು ಹಿಡಿದು ಹೊರಳಾಡಿ, ಆಟವಾಡಲು ಬಾ ಎಂದು ಕರೆಯಲು ಪ್ರಯತ್ನಿಸುತ್ತಿತ್ತು. ಆದರೆ ಅಮ್ಮನೋ ಮಲಗಿಕೊಂಡೇ ಮರಿಯ ಚಿನ್ನಾಟವನ್ನು ಆಸ್ವಾದಿಸುತ್ತಿತ್ತು.
ಇದನ್ನೂ ಓದಿ:ಕ್ಯಾನ್ಸರ್​ ಗೆದ್ದ ಭಾರತ ಪುರುಷರ ಹಾಕಿ ತಂಡದ ಮಾಜಿ ಕೋಚ್​ ಮೈಕಲ್​ ನೊಬ್ಸ್​..!
ವೆಲ್​ಕಂ ಟು ನೇಚರ್​ ಎಂಬ ಟ್ವಿಟ್ಟರ್​ ಖಾತೆಯಲ್ಲಿ ಸಿಂಹಗಳ ಅಮ್ಮ ಮತ್ತು ಮರಿಯ ಚಿನ್ನಾಟದ 21 ಸೆಕೆಂಡ್​ಗಳ ವಿಡಿಯೋ ಬಿಡುಗಡೆಯಾಗಿದೆ. ಇದನ್ನು ಈಗಾಗಲೆ ಸಹಸ್ರಾರು ಸಂಖ್ಯೆಯ ಜನರು ನೋಡಿ ಆನಂದಿಸಿದ್ದಾರೆ.
https://twitter.com/welcomet0nature/status/1291633171830697984?s=20
ಅಷ್ಟೇ ಅಲ್ಲ. ಇದನ್ನು ಕಂಡು ಬಾಲ್ಯದಲ್ಲಿ ತಾವು ಅಮ್ಮನಿಗೆ ತಕ್ಕೆ ಬಿದ್ದು ಆಟವಾಡಿದ ದೃಶ್ಯಗಳು ನೆನಪಾಗಿ ಕೆಲವರು ಮುದಗೊಂಡಿದ್ದಾರೆ. ಇದೇ ಭಾವವನ್ನು ತಮ್ಮ ಕಮೆಂಟ್​ಗಳಲ್ಲೂ ಉಕ್ಕಿಸಿದ್ದಾರೆ.
VIDEO: ಸುಶಾಂತ್​ ಸಿಂಗ್ ಕ್ಯಾಮರಾ ಎದುರಿಸಿದ ಮೊದಲ ದೃಶ್ಯ ವೈರಲ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
