ಬೆಂಗಳೂರು:ಅದು ಮನುಷ್ಯನಿರಲಿ, ಕ್ರೂರಮೃಗವೇ ಇರಲಿ ತಾಯಿ ಹೃದಯವೇ ಹಾಗೇ..ಅದಕ್ಕೆ ಈ ಜಗತ್ತಿನಲ್ಲಿ ಬೆಲೆಕಟ್ಟಲಿಕ್ಕೆ ಆಗದು..ಹೌದು ತನ್ನ ಮಕ್ಕಳು ಅಪಾಯದಲ್ಲಿದ್ದಾರೆ ಎಂದು ತಿಳಿದರೆ ತಾಯಿ ಸಹಿಸಲ್ಲ. ತನ್ನ ಪ್ರಾಣ ಒತ್ತೆಯಿಟ್ಟಾದರೂ ತನ್ನ ಸಂತಾನವನ್ನು ರಕ್ಷಿಸುವುದನ್ನು ಕಾಣಬಹುದು. ಇಂತಹದ್ದೇ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಮೃಗಾಲಯವೊಂದರಲ್ಲಿ ಸಿಂಹದ ಮರಿ ನೀರಿಗೆ ಬಿದ್ದಿದ್ದು, ತಾಯಿ ಸಿಂಹ ಎರಡುಮೂರು ಬಾರಿ ಪ್ರಯತ್ನಪಟ್ಟು ಮರಿಯನ್ನು ಸಂರಕ್ಷಿಸಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಸಿಂಹಕ್ಕೂ ತಾಯಿಮನಸ್ಸಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣ: ಆರೋಪಿ ಮೊಹಮ್ಮದ್ ಜಾವೇದ್‌ಗೆ ಜಾಮೀನು
ವೈರಲ್ ವಿಡಿಯೋದಲ್ಲಿ, ಮೃಗಾಲಯದ ಆವರಣದಲ್ಲಿ ಆಟವಾಡುತ್ತಿದ್ದ ಮರಿಸಿಂಹ ಆಕಸ್ಮಿಕವಾಗಿ ಹೊಂಡದ ನೀರಿಗೆ ಬೀಳುತ್ತದೆ. ತಾಯಿ ಸಿಂಹ ಕೂಡಲೇ ಮರಿಯನ್ನು ರಕ್ಷಿಸಲು ಮುಂದಾಗುತ್ತದೆ. ಕಾಲಿನಿಂದ ಅದನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸುತ್ತದೆ. ಆದರೆ ಅದು ಜಾರಿ ಮತ್ತೆ ನೀರಿಗೆ ಬೀಳುತ್ತದೆ. ಸಿಂಹವು ಹಲವು ಬಾರಿ ಪ್ರಯತ್ನಿಸಿದರೂ ಜಾರಿ ನೀರಿಗೆ ಬೀಳುತ್ತಲೇ ಇರುತ್ತದೆ. ಕೊನೆಗೆ ತನ್ನ ಬಾಯಿಂದ ಕಚ್ಚಿಕೊಂಡು ಮೇಲಕ್ಕೆ ಎತ್ತುತ್ತದೆ.
Morher Lion is eager to save her cubpic.twitter.com/HxsWAcR9HQ
— Visual feast (@visualfeastwang)August 11, 2024

ನೀರಿನಿಂದ ಮೇಲೆ ಬರುತ್ತಿದ್ದಂತೆ ಎದ್ದೆನೋ ಬಿದ್ದೆನೋ ಎಂದು ಸಿಂಹದ ಮರಿ ಗುಹೆಗೆ ಓಡುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು “ಸಿಂಹವನ್ನು ನೋಡುತ್ತಾ.. ಅಯ್ಯೋ ಪಾಪ..” ಎಂದಿದ್ದಾರೆ. ಇನ್ನೂ ಕೆಲವರು ಸಿಂಹಕ್ಕೂ ಮಾತೃಹೃದಯವಿದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಬದುಕಿದೆ ಬಡ ಜೀವ ಎಂದು ಮತ್ತೂ ಕೆಲವರು ಹೇಳುತ್ತಿದ್ದಾರೆ. ಈ ವೀಡಿಯೊ ಪ್ರಸ್ತುತ 10 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ಅಧಿಕ ಲಾಭದ ಹೆಸರಿನಲ್ಲಿ ವಂಚನೆ.. ಅಸ್ಸಾಂನಲ್ಲಿ ಬೆಳಕಿಗೆ ಬಂತು 2200 ಕೋಟಿ ಹಗರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
