ನವದೆಹಲಿ:ಇತ್ತೀಚೆಗೆ ನಡೆದ ಕೋಪಾ ಅಮೆರಿಕ ಫೈನಲ್ಸ್​ನಲ್ಲಿ ಅರ್ಜೆಂಟೀನಾ ವಿಜಯ ಸಾಧಿಸಿದೆ. ಅದೇ ಖುಷಿಯಲ್ಲಿ ಅಲ್ಲಿನ ಫುಟ್​ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಇದ್ದಾರೆ. ಸದ್ಯ ಅರ್ಜೆಂಟೀನಾದಲ್ಲಿ ಅವರದ್ದೇ ಸುದ್ದಿ ಓಡಾಡುತ್ತಿದೆ. ಹೀಗಿರುವಾಗ ಭಾರತದಲ್ಲೂ ಮೆಸ್ಸಿ ವೈರಲ್ ಆಗಿದ್ದಾರೆ. ಅದು ಹೇಗೆ? ಏನು? ಎನ್ನುವುದು ಮುಂದಿದೆ ನೋಡಿ..
ಭಾರತದಲ್ಲಿ ಸಿಗರೇಟ್​ನಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿರುವುದು ಬೀಡಿ. ಪಶ್ಚಿಮ ಬಂಗಾಳದ ಧುಲಿಯನ್ ನ ಆರಿಫ್ ಬೀಡಿ ಕಾರ್ಖಾನೆಯಲ್ಲಿ ಬೀಡಿ ತಯಾರಿಕೆ ನಡೆಯುತ್ತಿದೆ. ಈ ಕಾರ್ಖಾನೆ ಇತ್ತೀಚೆಗೆ ತನ್ನ ಬೀಡಿ ಪ್ಯಾಕೆಟ್​ನಲ್ಲಿ ಮೆಸ್ಸಿಯ ಫೋಟೋ ಹಾಕಿದೆ. ಅಷ್ಟೇ ಅಲ್ಲದೆ ಬೀಡಿ ಹೆಸರನ್ನೇ ಮೆಸ್ಸಿ ಬೀಡಿ ಎಂದು ನಮೂದಿಸಿದೆ. ಅದರ ಫೋಟೋಗಳನ್ನು ತೆಗೆದುಕೊಂಡಿರುವ ನೆಟ್ಟಿಗರು ಅದನ್ನು ಎಲ್ಲೆಡೆ ಹಾಕಿ ಟ್ರೋಲ್ ಮಾಡಲಾರಂಭಿಸಿದ್ದಾರೆ.
Messi's first endorsement in India☺️☺️☺️☺️☺️pic.twitter.com/07vh7bTMwC
— Rupin Sharma IPS (@rupin1992)July 13, 2021

ವಿದೇಶಿ ಆಟಗಾರನ ಹೆಸರು ಮತ್ತು ಫೋಟೋ ಭಾರತದಲ್ಲಿ ಈ ರೀತಿ ಬಳಕೆಯಾಗಿರುವ ಬಗ್ಗೆ ಅನೇಕ ರೀತಿಯ ಚರ್ಚೆ ನಡೆಯುತ್ತಿದೆ. ಅವರೇನು ಈ ಬ್ರ್ಯಾಂಡ್​ ನೋಡುವುದಿಲ್ಲ ಎಂದು ಈ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅನೇಕರು ಹೇಳುತ್ತಿದ್ದರೆ, ನಮ್ಮ ಭಾರತದಲ್ಲಿ ಮಾತ್ರ ಇಂತಹ ವಿಚಿತ್ರಗಳನ್ನು ನೋಡಲು ಸಾಧ್ಯ ಎಂದು ನೆಟ್ಟಿಗರು ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್)
ಜೈಲಲ್ಲಿ ಸಿಗಲಿದೆ ಬಿಸಿ ಬಿಸಿ ಚಿಕನ್ ಖಾದ್ಯ; ಹೇಗಾಗಲಿವೆ ಗೊತ್ತಾ ಮಹಾರಾಷ್ಟ್ರದ ಜೈಲುಗಳು?

ಕರೊನಾ ಲಸಿಕೆಯ ಎರಡೂ ಡೋಸ್ ಆಯ್ತು, ಇನ್ನೂ ಮಾಸ್ಕ್ ಹಾಕಿಕೊಳ್ಳಬೇಕಾ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ

ರೈಲ್ವೆ ನಿಲ್ದಾಣದ ಮೇಲೇ ಫೈವ್​ ಸ್ಟಾರ್ ಹೋಟೆಲ್! ವಿನೂತನ ನಿರ್ಮಾಣಕ್ಕೆ ದೇಶದ ಮೆಚ್ಚುಗೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:14 − 13 =
Remember me
