ಲಖನೌ:ಉತ್ತರ ಪ್ರದೇಶದ ಕಾಸ್​ಗಂಜ್​ ಜಿಲ್ಲೆಯಲ್ಲಿನ ಲಿಕ್ಕರ್​ ಮಾಫಿಯಾ ಮಟ್ಟಹಾಕಲು ಹೋಗಿ ದುಷ್ಕರ್ಮಿಗಳಿಂದ ಕಾನ್ಸ್​ಟೇಬಲ್ ಹತ್ಯೆಯಾಗಿದ್ದು, ಪ್ರಕರಣದ ಪ್ರಮುಖ ಆರೋಪಿಯನ್ನು ಎನ್​ಕೌಂಟರ್​ನಲ್ಲಿ ಹೊಡೆದುರುಳಿಸಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಲಿಕ್ಕರ್​ ಮಾಫಿಯಾ ಕಿಂಗ್​ಪಿನ್​ಗೆ ವಾರೆಂಟ್​ ನೀಡಲು ಪೊಲೀಸ್​ ತಂಡವೊಂದು ಕಾಸ್​ಗಂಜ್​ ಜಿಲ್ಲೆಯ ಗ್ರಾಮವೊಂದಕ್ಕೆ ತೆರಳಿತ್ತು. ಈ ವೇಳೆ ದುಷ್ಕರ್ಮಿಗಳು ಕಾನ್ಸ್​ಟೇಬಲ್​ ಹತ್ಯೆ ಮಾಡಿದ್ದು, ಸಬ್​ ಇನ್ಸ್​ಪೆಕ್ಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆಂದು ಕಾಸ್​ಗಂಜ್​ ಪೊಲೀಸ್​ ವರಿಷ್ಠಾಧಿಕಾರಿ ಮನೋಜ್​ ಸೊಂಕರ್​ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ:ತುಂಬಿದ ಶಾಲೆಯಲ್ಲಿ ಮಕ್ಕಳ ಮುಂದೆ ಹಸ್ತಮೈಥುನ ಮಾಡಿ, ವಿಡಿಯೋ ಹರಿಬಿಟ್ಟ ಶಿಕ್ಷಕಿ..!
ಪ್ರಕರಣದ ಪ್ರಮುಖ ಆರೋಪಿಯನ್ನು ಎನ್​ಕೌಂಟರ್​ನಲ್ಲಿ ಹೊಡೆದುರುಳಿಸಲಾಗಿದೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮನೋಜ್​ ತಿಳಿಸಿದ್ದಾರೆ.
ಕಾಸ್​ಗಂಜ್​ನಲ್ಲಿ ನಡೆದಿದ್ದೇನು?ಅಕ್ರಮ ಲಿಕ್ಕರ್​ ಕಾರ್ಖಾನೆ ಮೇಲೆ ದಾಳಿ ಮಾಡಲು ಮತ್ತು ಕಿಂಗ್​ಪಿನ್​ಗೆ ವಾರೆಂಟ್​ ನೀಡಲು ತೆರಳಿದ ಪೊಲೀಸ್​ ತಂಡದ ಮೇಲೆ ಗೂಂಡಾಗಳು ಮಂಗಳವಾರ ಸಂಜೆ ಕಾಸ್​ಗಂಜ್​ ಏರಿಯಾದಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆ ಕಾನ್ಸ್​ಟೇಬಲ್​ ದೇವೇಂದ್ರ ಮೃತಪಟ್ಟಿದ್ದು, ಎಸ್​ಐ ಅಶೋಕ್​ ಕುಮಾರ್​ಗೆ ಗಂಭೀರ ಗಾಯವಾಗಿದೆ. ಮೂಲಗಳ ಪ್ರಕಾರ ಗೂಂಡಾಗಳು ಪೇದೆಯನ್ನು ಹಿಡಿದು ಬಟ್ಟೆಯನ್ನು ಕಿತ್ತೆಸೆದು ದೊಣ್ಣೆ ಮತ್ತು ಶಸ್ತ್ರಾಸ್ತ್ರಾಗಳಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆನ್ನಲಾಗಿದೆ.
ಇದನ್ನೂ ಓದಿರಿ:ಭೂಮಂಡಲದಲ್ಲಿ ನನ್ನಂಥ ನಟಿಯಿಲ್ಲ!; ಸುಳ್ಳಾದರೆ ಅಹಂಕಾರ ಬಿಡ್ತಾರಂತೆ ಕಂಗನಾ..
ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದೇನು?ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಿಎಂ ಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಮೃತ ಕಾನ್ಸ್​ಟೇಬಲ್​ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದು, ಗಾಯಾಳು ಎಸ್​ಐಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.(ಏಜೆನ್ಸೀಸ್​)
ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ರೂ. ದೇಣಿಗೆ ನೀಡಿ ಕಾಂಗ್ರೆಸ್​ ಶಾಸಕಿ ಕೊಟ್ಟ ಕರೆ ಹೀಗಿದೆ…

ಪೊಲೀಸ್ ಪರೀಕ್ಷೆ ನಕಲಿಗೆ ಬೇಲಿ; ಇಲಾಖೆಯಿಂದ ಬಯೋಮೆಟ್ರಿಕ್ ಅಸ್ತ್ರ

ಹಿಮ ಕರಗಿ ದುರಂತ?; ವಿಜಯವಾಣಿ ಪ್ರತ್ಯಕ್ಷ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
