ಲಖನೌ:ಕಾಸ್ಗಂಜ್ ಹತ್ಯಾಕಾಂಡದ ಮುಖ್ಯ ಆರೋಪಿ ಮತ್ತು ಸಾರಾಯಿ ಮಾಫಿಯಾ ನಾಯಕ ಮೋತಿ ಸಿಂಗ್​ನನ್ನು ಉತ್ತರಪ್ರದೇಶ ಪೊಲೀಸರು ಭಾನುವಾರ ಗುಂಡಿಕ್ಕಿ ಕೊಂದಿದ್ದಾರೆ. ಮೃತ ಆರೋಪಿಯು ಹಿಸ್ಟರಿಶೀಟರ್ ಆಗಿದ್ದು, 11 ಕ್ರಿಮಿನಲ್ ಪ್ರಕರಣಗಳು ಅವನ ವಿರುದ್ಧ ದಾಖಲಾಗಿದ್ದವು ಎನ್ನಲಾಗಿದೆ.
ಫೆಬ್ರವರಿ 9 ರಂದು, ಮೋತಿ ಮತ್ತು ಅವನ ಸಹಚರರು ಕಾಸ್ಗಂಜಿನ ನಾಗ್ಲಾ ಧೀಮರ್ ಹಳ್ಳಿಗೆ ವಾರಂಟ್ ಹಿಡಿದು ರೇಡ್ ಮಾಡಲು ಹೋದ ಪೊಲೀಸರ ಮೇಲೆ ಗುಂಡಿನ ಚಕಮಕಿ ನಡೆಸಿದ್ದರು. ಸಿದ್ಧಪುರ ಠಾಣೆಯ ಪೊಲೀಸ್​ ಪೇದೆ ದೇವೇಂದ್ರ ಮೃತಪಟ್ಟಿದ್ದಲ್ಲದೆ, ಸಬ್ಇನ್ಸ್​ಪೆಕ್ಟರ್​ ಗಾಯಗೊಂಡಿದ್ದರು. ಮೋತಿ ಸಿಂಗ್​ನ ಸೋದರ ಎಲ್ಕಾರ್​ ಕೂಡ ಸಾವಪ್ಪಿದ್ದ. ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಮೋತಿ ಸಿಂಗ್​ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಕೂಡ ಘೋಷಿಸಲಾಗಿತ್ತು.
ಇದನ್ನೂ ಓದಿ:ಮನೆಯಲ್ಲೇ ಆರ್​.ಟಿ.ಒ. ಕಛೇರಿ ನಡೆಸುತ್ತಿದ್ದ ಖದೀಮರು !
ಕಾಳಿ ನದಿ ತೀರದಲ್ಲಿರುವ ಕಾಡಿನಲ್ಲಿ ಮೋತಿ ಸಿಂಗ್ ಬಚ್ಚಿಟ್ಟುಕೊಂಡಿರುವುದಾಗಿ ಸುಳಿವು ಸಿಕ್ಕ ಪೊಲೀಸರು, ಅವನನ್ನು ಬಂಧಿಸಲು ತೆರಳಿದ್ದರು. ಮತ್ತೆ ಪೊಲೀಸರ ಮೇಲೆ ಆಕ್ರಮಣ ನಡೆಸಿದ ಮೋತಿ ಸಿಂಗ್​ಗೆ ಪೊಲೀಸರ ಗುಂಡು ತಾಗಿತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬದುಕುಳಿಯಲಿಲ್ಲ ಎಂದು ಕಾಸ್ಗಂಜ್ ಎಸ್ಪಿ ಮನೋಜ್ ಸೋನ್ಕರ್ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಹೆಚ್ಚು ಹರಡುವ ಹೊಸ ರೂಪ ತಾಳುತ್ತಿದೆ ಕರೊನಾ : ವಹಿಸಿರಿ ಕಟ್ಟೆಚ್ಚರ
“ಲಿಂಗ, ವಯಸ್ಸು, ವೃತ್ತಿ ಕೇಳಿಕೊಂಡು ಅಪರಾಧ ನಿರ್ಧಾರ ಆಗುತ್ತಾ…?” – ಅಮಿತ್ ಷಾ ಪ್ರಶ್ನೆ
ಉನ್ನಾವ್‌ ಬಾಲಕಿಯರ ಸಾವಿನ ಪ್ರಕರಣ: ಆರೋಪಿ ವಿನಯ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + four =
Remember me
