ಚೆನ್ನೈ:ಲಾಕ್​ಡೌನ್​ ಅವಧಿಯಲ್ಲಿ ಮುಚ್ಚಿದ್ದ ಮದ್ಯದಂಗಡಿಗಳನ್ನು ಇದೀಗ ಬಹುತೇಕ ರಾಜ್ಯಗಳಲ್ಲಿ ತೆರೆಯಲಾಗಿದೆ. ಎಣ್ಣೆಪ್ರಿಯರು ಇದರಿಂದ ಸಂಪೂರ್ಣ ತೃಪ್ತರಾಗಿದ್ದರೆ, ಹಲವು ಕುಟುಂಬಗಳ ಗೋಳು ಹೇಳತೀರದು.
ಅದೇ ಇನ್ನೊಂದೆಡೆ, ಮದ್ಯ ಖರೀದಿಗೆ ಮುಗಿಬಿದ್ದು, ಸಾಮಾಜಿಕ ಅಂತರ ಕಾಪಾಡದೇ ಕರೊನಾ ವೈರಸ್​ ಹರಡುವಲ್ಲಿ ಇವರ ಪಾಲು ದೊಡ್ಡದಿದೆ ಎನ್ನುವ ಭಯ. ಯಾರು ಏನೇ ಗೋಳಾಡಿದರೂ ರಾಜ್ಯ ಸರ್ಕಾರಗಳು ಪುನಃ ಮದ್ಯದಂಗಡಿ ಬಂದ್​ ಮಾಡಲು ಸುತರಾಂ ಒಪ್ಪುತ್ತಿಲ್ಲ. ಆದ್ದರಿಂದ ಬೇರೆ ದಾರಿ ಕಾಣದೇ ಮದ್ಯವಿರೋಧಿಗಳು ನ್ಯಾಯಾಲಯಗಳ ಮೊರೆ ಹೋಗುತ್ತಿದ್ದಾರೆ.
ಇದನ್ನೂ ಓದಿ:ಮನೆ ಬಾಗಿಲಿಗೇ ಮದ್ಯ ಪೂರೈಕೆ ಕುರಿತು ಪರಿಶೀಲಿಸಿ ಎಂದ ಸುಪ್ರೀಂಕೋರ್ಟ್​
ಮದ್ಯದಂಗಡಿ ತೆರೆದಿದ್ದನ್ನು ಪ್ರಶ್ನಿಸಿ ಇದಾಗಲೇ ಸುಪ್ರೀಂಕೋರ್ಟ್​ಗೆ ಅರ್ಜಿಯನ್ನೂ ಸಲ್ಲಿಸಲಾಗಿದೆ. ಆದರೆ ಅಂಗಡಿ ಮುಚ್ಚುವಂತೆ ತಾನು ಆದೇಶ ಹೊರಡಿಸುವುದಿಲ್ಲ ಎಂದು ಕೋರ್ಟ್​ ಹೇಳಿಬಿಟ್ಟಿದೆ. ಮನೆ ಬಾಗಿಲಿಗೇ ಮದ್ಯದ ಪೂರೈಕೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಅದು ಹೇಳಿದೆ.
ಅದರ ಬೆನ್ನಲ್ಲೇ ಇದೀಗ ಮದ್ರಾಸ್​ ಹೈಕೋರ್ಟ್​ ಮದ್ಯದ ವಿಷಯಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದೆ. ಹೈಕೋರ್ಟ್​ ಕೂಡ ತಾನು ಅಂಗಡಿ ತೆರೆದಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ತಾಯಿಯನ್ನು ಜೀವಂತ ಸಮಾಧಿ ಮಾಡಿದ ಮಗ, 3 ದಿನಗಳ ನಂತರ ಕಾದಿತ್ತೊಂದು ಅಚ್ಚರಿ!
ಆದರೆ ಸೋಂಕು ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ಹೈಕೋರ್ಟ್​ ಮಹತ್ವದ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರ ಅನ್ವಯ ಇನ್ನುಮುಂದೆ ತಮಿಳುನಾಡಿನಲ್ಲಿ ಇನ್ನುಮುಂದೆ ಮದ್ಯವನ್ನು ಖರೀದಿಸಿದಾಗ ಬಿಲ್​ ಪಡೆಯುವ ವೇಳೆ ಹೆಸರಿನ ಜತೆ ಆಧಾರ್​ ಕಡ್ಡಾಯವಾಗಿ ನಮೂದಿಸಬೇಕು. ಅಷ್ಟೇ ಅಲ್ಲದೇ, ವಾರಕ್ಕೆ ಎರಡು ದಿನಗಳು ಮಾತ್ರ ಅಂದರೆ ಮೂರು ದಿನಗಳ ಅಂತರದಲ್ಲಿ ಮಾತ್ರ ಮದ್ಯ ಖರೀದಿ ಮಾಡಬೇಕು ಎಂದಿದೆ.
ಆಧಾರ್​ ನಂಬರ್​ ನೀಡುವ ಹಿನ್ನೆಲೆಯಲ್ಲಿ, ವಾರಕ್ಕೆ ಎರಡಕ್ಕಿಂತ ಹೆಚ್ಚಿನ ಬಾರಿ ಒಬ್ಬನೇ ವ್ಯಕ್ತಿ ಮದ್ಯ ಖರೀದಿಗೆ ಹೋದರೆ ಸಿಕ್ಕಿಬೀಳುವುದು ಗ್ಯಾರೆಂಟಿ. ಆದ್ದರಿಂದ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರ್ಟ್​ ಹೇಳಿದೆ. ಇದರ ಜತೆಗೆ, ನಗದು ವ್ಯವಹಾರವನ್ನು ಸ್ಥಗಿತಗೊಳಿಸಬೇಕು ಎಂದಿರುವ ಹೈಕೋರ್ಟ್​, ಡಿಜಿಟಲ್​ ಪೇಮೆಂಟ್​ ವ್ಯವಸ್ಥೆ ಇಲ್ಲದ ಗ್ರಾಹಕರ ಬಳಿ ಮಾತ್ರ ನಗದು ಪಡೆಯಬಹುದಾಗಿದೆ ಎಂದಿದೆ.
ಇದನ್ನೂ ಓದಿ:ಕಂದಮ್ಮಗಳನ್ನೂ ಬಿಡದ ಕರೊನಾ ಮಾರಿ: ಒಂದೇ ದಿನದಲ್ಲಿ ನಾಲ್ಕು ನಗರ ತತ್ತರ!
ಸಾಮಾಜಿಕ ಅಂತರ ಸೇರಿದಂತೆ ಲಾಕ್​ಡೌನ್​ ಸಮಯದಲ್ಲಿ ವಿಧಿಸಲಾಗಿರುವ ಎಲ್ಲಾ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಮದ್ಯದಂಗಡಿಗಳು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ತೆರೆದಿಡಬೇಕು, ಗುಂಪು ಸೇರಬಾರದು, ಟೋಕನ್​ ಸಿಸ್ಟಮ್​ ಜಾರಿಗೆ ತರಬೇಕು ಸೇರಿದಂತೆ ಕೆಲವು ನಿಯಮಾವಳಿಗಳನ್ನು ಕೋರ್ಟ್​ ರೂಪಿಸಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:15 + 18 =
Remember me
