ಮಿರ್ಜಾಪುರ:ಬರೋಬ್ಬರಿ ಒಂದೂವರೆ ತಿಂಗಳ ನಂತರ ಇಂದು ದೇಶಾದ್ಯಂತ ಮದ್ಯದ ಅಂಗಡಿಗಳು ಬಾಗಿಲು ತೆರೆದಿವೆ.
ಮೇ 4ರಂದು ದೇಶದಲ್ಲಿ ಗ್ರೀನ್​ ಝೋನ್​ಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಟ್ಟಿತ್ತು. ಸಾಮಾಜಿಕ ಅಂತರ ನಿಯಮ ಪಾಲನೆಯ ಷರತ್ತು ವಿಧಿಸಿತ್ತು.
ಇದನ್ನೂ ಓದಿ:‘ಅವರ ಹೊಟ್ಟೆಗೆ ಎಣ್ಣೆ ಇಳಿದಿತ್ತು..ಇವರು ಸುಮ್ಮನೆ ಹೋಗಿ ಸಿಕ್ಕಿಬಿದ್ರು…’; ಮಾಗಡಿ ಶಾಸಕನಿಗೆ ಕುಡುಕರ ಆವಾಜ್​…!
ಮೇ 3ರ ಸಂಜೆಯಿಂದಲೇ ಅಂಗಡಿ ಮಾಲೀಕರ ಭರ್ಜರಿ ಸಿದ್ದತೆ ಶುರುವಾಗಿತ್ತು. ಹಾಗೇ ಇಂದು ಮುಂಜಾನೆಯಿಂದಲೇ ಎಣ್ಣೆಪ್ರಿಯರು ಅಂಗಡಿಗಳ ಎದುರು ಸಾಲುಸಾಲಾಗಿ ನಿಂತು, ಬೇಕಾದಷ್ಟು ಖರೀದಿಸಿಯೂ ಆಯ್ತು. ಕೆಲವು ಕಡೆಯಂತೂ ಕುಡುಕರು ಫುಲ್​ ಟೈಟ್​ ಆಗಿ ಪಬ್ಲಿಕ್​ನಲ್ಲಿ ಡ್ಯಾನ್ಸ್​ ಮಾಡಿದ್ದಾರೆ. ಮತ್ತೆ ಹಲವರು ರೋಡ್​, ಫುಟ್​ಪಾತ್​ನಲ್ಲಿ ತಣ್ಣಗೆ ಮಲಗಿದ್ದಾರೆ. ಒಟ್ಟಾರೆ ಇಡೀ ದೇಶದಲ್ಲಿ ಇಂದು ಎಣ್ಣೆ ಪ್ರಹಸನ ವಿವಿಧ ರೀತಿಯಲ್ಲಿ ನಡೆದಿದೆ.
ಈ ಮಧ್ಯೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಎಣ್ಣೆ ಅಂಗಡಿಯೊಂದರ ಮಾಲೀಕ ಒಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಬೆಳ್ಳಂಬೆಳಗ್ಗೆ ತಮ್ಮ ಅಂಗಡಿಗೆ ಬಂದ ಮದ್ಯದ ಗ್ರಾಹಕರ ಮೇಲೆ ಹೂವಿನ ಎಸಳುಗಳನ್ನು ಹಾಕಿ ಸ್ವಾಗತಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ ಶರಾವತಿ ನಗರದ ಎಂಎಸ್​ಐಎಲ್ ಮಳಿಗೆ ಮುಂದೆ ಕ್ಯೂ ನಿಂತ್ರು ಕುಡುಕರು…
ಸಾಮಾಜಿಕ ಅಂತರ ಕಾಯ್ದುಕೊಂಡು, ಕೈಗವಸು, ಮಾಸ್ಕ್​ಗಳನ್ನು ಹಾಕಿಕೊಂಡು ಸಾಲಾಗಿ ನಿಂತ ಕುಡುಕರ ಮೇಲೆ ಮಾಲೀಕ ಪುಷ್ಪಗಳ ಸುರಿಮಳೆಗೈದಿದ್ದಾರೆ. ಎಲ್ಲ ಕಡೆ ಕರೊನಾ ವಾರಿಯರ್ಸ್​ಗಳ ಮೇಲೆ ಪುಷ್ಪವೃಷ್ಟಿ ಸುರಿಸಿದರೆ, ಇಲ್ಲಿ ಮಾಲೀಕ ಕುಡುಕರ ಮೇಲೆ ಹೂವಿನ ಎಸಳು ಹಾಕಿದ್ದಾರೆ.
ಇದನ್ನೂ ಓದಿ:VIDEO| ಅಥಣಿಯಲ್ಲಿ ಮದ್ಯದ ಅಂಗಡಿ ಮುಂದೆ ಸಾಲಿನಲ್ಲಿ ನಿಂತ ಎಮ್ಮೆ
ಈ ವಿಡಿಯೋವನ್ನು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ. ಗ್ರಾಹಕರೇ ದೇವರು ಎಂದು ಕಾಮೆಂಟ್​ಗಳು ಬಂದಿವೆ..!
https://twitter.com/scribe_prashant/status/1257212136041771009?s=20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
