ನವದೆಹಲಿ: ಬಿಹಾರ ವಿಧಾನ ಸಭಾ ಚುನಾವಣೆ ಘೋಷಣೆಯಾಗಿದ್ದು, ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫಲಿತಾಂಶ ನವೆಂಬರ್ 10 ರಂದು ಪ್ರಕಟವಾಗಲಿದೆ. ಬಿಹಾರ ವಿಧಾನ ಸಭೆಯ 243 ಕ್ಷೇತ್ರಗಳ ಪೈಕಿ 38 ಸ್ಥಾನಗಳು ಎಸ್​ಸಿ, 2 ಸ್ಥಾನ ಎಸ್​ಟಿಗೆ ಮೀಸಲು. ಅಕ್ಟೋಬರ್ 1ರಂದು ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 8 ಕೊನೇ ದಿನ. ಅಕ್ಟೋಬರ್ 9ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 12ರಂದು ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿರಲಿದೆ.
ಮೂರು ಹಂತಗಳ ಚುನಾವಣೆ
ಮೊದಲ ಹಂತ (ಅಕ್ಟೋಬರ್ 28) – 16 ಜಿಲ್ಲೆಗಳ 71 ಕ್ಷೇತ್ರಗಳು – 31,000 ಮತಗಟ್ಟೆಗಳು
ಎರಡನೇ ಹಂತ (ನವೆಂಬರ್ 3) – 17 ಜಿಲ್ಲೆಗಳ 94 ಕ್ಷೇತ್ರಗಳು – 42,000 ಮತಗಟ್ಟೆಗಳು
ಮೂರನೇ ಹಂತ(ನವೆಂಬರ್ 7) – 15 ಜಿಲ್ಲೆಗಳ 78 ಕ್ಷೇತ್ರಗಳು- 33,500 ಮತಗಟ್ಟೆಗಳು
ಕೋವಿಡ್ 19 ಸೋಂಕು ಬಂದ ನಂತರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು. ಜಗತ್ತಿನ 70 ರಾಷ್ಟ್ರಗಳು ಕೋವಿಡ್ ಕಾರಣಕ್ಕೆ ಚುನಾವಣೆಯನ್ನೇ ಮುಂದೂಡಿವೆ. ಇಂದು ದೇಶದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾದ ಬಿಹಾರದ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಕೋವಿಡ್​ 19 ಮಾರ್ಗಸೂಚಿ ಪಾಲಿಸುವುದಕ್ಕಾಗಿ ನೋಡಲ್ ಹೆಲ್ತ್ ಆಫೀಸರ್​ಗಳನ್ನು ನೇಮಕ ಮಾಡಲಾಗುತ್ತಿದೆ. ಪ್ರತಿ ಮತಗಟ್ಟೆಯಲ್ಲಿ 1,500 ಮತದಾರರ ಬದಲು 1,000 ಮತದಾರರಷ್ಟೇ ಮತಚಲಾಯಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದೆ. ಅಂದರೆ ಬೆಳಗ್ಗೆ 6ರಿಂದ ರಾತ್ರಿ 7 ರ ತನಕ ಮತದಾನಕ್ಕೆ ಅವಕಾಶ ದೊರೆಯಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿದರು.
ಇದನ್ನೂ ಓದಿ:ತನಿಖಾ ಸಂಸ್ಥೆಗಳ ಅವಸ್ಥೆ ! ; ವಿಶೇಷ ಟೀಂಗಳಿಗೆ ನೂರೆಂಟು ಕಷ್ಟ
ಚುನಾವಣೆಗಾಗಿ 7 ಲಕ್ಷಕ್ಕೂ ಹೆಚ್ಚು ಹ್ಯಾಂಡ್ ಸ್ಯಾನಿಟೈಸರ್, 46 ಲಕ್ಷ ಮಾಸ್ಕ್, 6 ಲಕ್ಷ ಪಿಪಿಇ ಕಿಟ್​, 6.7 ಲಕ್ಷ ಫೇಸ್​ ಶೀಲ್ಡ್​, 23 ಲಕ್ಷ ಜೋಡಿ ಕೈಗವಸುಗಳನ್ನು ಹೊಂದಿಸಲಾಗಿದೆ. ವಿಶೇಷವಾಗಿ ಮತದಾರರಿಗೆ ಕೊಡುವುದಕ್ಕಾಗಿ 7.2 ಕೋಟಿ ಏಕಬಳಕೆಯ ಕೈಗವಸು ಹೊಂದಿಸಲಾಗಿದೆ ಎಂದು ಅರೋರಾ ತಿಳಿಸಿದರು.
ಪತ್ರಿಕಾಗೋಷ್ಠಿಯ ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ಕಿಸಬಹುದು.
ನಟಿಯರಿಗೆ ಡ್ರಗ್ಸ್ ಪೂರೈಸ್ತಿದ್ದ 4ನೇ ಪೆಡ್ಲರ್ ಸಿಸಿಬಿ ಬಲೆಗೆ

Sign in to your account
Please enter an answer in digits:ten + two =
Remember me
