ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗರೀಬ್ ಕಲ್ಯಾಣ್ ರೋಜ್​ಗಾರ್ ಯೋಜನೆಯನ್ನು ಜೂನ್ 20ರಂದು ಉದ್ಘಾಟಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಘೋಷಿಸಿದ್ದರು. ಇದರ ಬೆನ್ನಿಗೆ ಈ ಯೋಜನೆಯ ವಿವರಗಳನ್ನು ನೀಡುವ ಸಲುವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಏನಿದು ಗರೀಬ್ ಕಲ್ಯಾಣ್​ ರೋಜ್​ಗಾರ್ ಯೋಜನೆ:ವಲಸೆ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ 125 ದಿನಗಳ ಅವಧಿಯಲ್ಲಿ 50,000 ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ನಿಮಿರ್ಸುವ ಉದ್ದೇಶ ಇದರಲ್ಲಿದೆ. ಇದಕ್ಕಾಗಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್​ ಮತ್ತು ಒಡಿಶಾಗಳ 116 ಜಿಲ್ಲೆಗಳ ಪೈಕಿ ಪ್ರತಿ ಜಿಲ್ಲೆಯಲ್ಲಿ ತಲಾ 25,000ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಆಯ್ಕೆ ಮಾಡಿಕೊಂಡಿದೆ. ಕೆಲಸ ಒದಗಿಸುವ ಮೂಲಕ ಅವರ ಬದುಕಿಗೆ ಒಂದು ದಾರಿ ಮಾಡಿಕೊಡುವ ಉದ್ದೇಶ ಸರ್ಕಾರದ್ದು.
ಈ ಕಾಮಗಾರಿಗಳೆಲ್ಲವೂ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್​, ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ, ಗಣಿ, ಕುಡಿವ ನೀರು ಮತ್ತು ನೈರ್ಮಲ್ಯ, ಪರಿಸರ, ರೈಲ್ವೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗಡಿ ರಸ್ತೆಗಳು, ಟೆಲಿಕಾಂ, ಕೃಷಿ ಇಲಾಖೆ ಸೇರಿ 12 ವಿವಿಧ ಸಚಿವಾಲಯಗಳ ಸಹಯೋಗದಲ್ಲಿ ನಡೆಯಲಿವೆ ಎಂದು ಸರ್ಕಾರ ತಿಳಿಸಿದೆ.
Sign in to your account
Please enter an answer in digits:18 − two =
Remember me
