ತಿರುವನಂತಪುರ:ಕೇರಳ ಪೊಲೀಸರು ಹಾಗೂ ವೈದ್ಯರ ಜಂಟಿ ಪ್ರಯತ್ನದಿಂದ ಶನಿವಾರ ಹೃದಯ ಕಸಿ ಚಿಕಿತ್ಸೆಗಾಗಿ ತಿರುವನಂತಪುರದಿಂದ ಕೊಚ್ಚಿಗೆ 40 ನಿಮಿಷದಲ್ಲಿ ಹೃದಯವನ್ನು ಯಶಸ್ವಿಯಾಗಿ ಸಾಗಿಸಲಾಗಿದೆ.ಲಾಕ್​ಡೌನ್​​ನಿಂದಾಗಿ ಎಲ್ಲ ಜಿಲ್ಲೆಗಳ ಗಡಿ ಭಾಗಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ರಾಜ್ಯ ಪೊಲೀಸ್ ಇಲಾಖೆಯ ಹೆಲಿಕಾಪ್ಟರ್​ ಅನ್ನು ಬಾಡಿಗೆ ಪಡೆದುಕೊಂಡು ಹೃದಯವನ್ನು ಸಾಗಿಸಲಾಯಿತು.ಕೇರಳ ಪೊಲೀಸರು ಹಾಗೂ ವೈದ್ಯಕೀಯ ತಂಡದ ನೆರವಿನಿಂದ ಈ ಕಾರ್ಯ ಸಾಧ್ಯವಾಗಿದೆ. ಇದೇ ಮೊದಲ ಬಾರಿಗೆ ಕೇರಳ ಪೊಲೀಸ್ ಪ್ರಾಣ ಉಳಿಸುವ ಮಹಾನ್​ ಕಾರ್ಯಕ್ಕೆ ತಮ್ಮ ಹೆಲಿಕಾಪ್ಟರ್​ ಅನ್ನು ಬಾಡಿಗೆಗೆ ಕೊಟ್ಟಿದ್ದಾರೆ ಎನ್ನಲಾಗಿದೆ.ಮೊದಲು ಅಂಬುಲೆನ್ಸ್​ನಲ್ಲಿ ಹೃದಯವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಬಳಿಕ ಹೆಲಿಕಾಪ್ಟರ್ ಮೂಲಕ ಕೊಚ್ಚಿಗೆ ತಲುಪಿಸಲಾಯಿತು. ಹೃದಯ ಕಸಿ ಶಸ್ತ್ರಚಿಕಿತ್ಸೆ ಶನಿವಾರವೇ ನಡೆಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
‘ಟೆಸ್ಟ್ ಕ್ರಿಕೆಟ್‌ನ ದ್ವಿತೀಯ ಇನಿಂಗ್ಸ್‌ನಂತಿದೆ ಕರೊನಾ’ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + sixteen =
Remember me
