ಚಂಡೀಗಢ:ಪ್ರೀತಿಸುವ ಹುಡುಗ-ಹುಡುಗಿ ಮನೆ ಬಿಟ್ಟು ಓಡಿಹೋಗುವುದು, ಬಳಿಕ ಮದುವೆಯಾಗುವುದು ಅಥವಾ ಆ ಪ್ರೀತಿ ದುರಂತ ಅಂತ್ಯ ಕಾಣುವುದೆಲ್ಲ ಏನೂ ಹೊಸದೇನಲ್ಲ. ಅದೇ ರೀತಿ ಇಲ್ಲೊಂದು ಜೋಡಿ ಮನೆ ಬಿಟ್ಟು ಓಡಿ ಹೋಗಿದ್ದಲ್ಲದೆ ಹೈಕೋರ್ಟ್ ಮೆಟ್ಟಿಲನ್ನೂ ಏರಿದ್ದಾರೆ.
ಚಂಡೀಗಢದ 22 ವರ್ಷದ ಗುರ್​ವಿಂದರ್ ಸಿಂಗ್, 19 ವರ್ಷದ ಗುಲ್ಜಾ ಕುಮಾರಿ ಪರಸ್ಪರ ಪ್ರೀತಿಸುತ್ತಿದ್ದಾರೆ. ಮಾತ್ರವಲ್ಲ, ಮದುವೆಯಾಗಬೇಕು, ಅದಕ್ಕೆ ಮನೆಯವರು ಅಡ್ಡಿ ಆಗಬಾರದು ಎಂದು ಮನೆ ಬಿಟ್ಟು ಓಡಿಹೋಗಿದ್ದಾರೆ. ಆದರೆ ಮದುವೆಗೆ ಹುಡುಗಿ ಮನೆಯವರ ವಿರೋಧವಿದ್ದು, ಮದುವೆಯಾಗಲು ಬೇಕಾಗಿರುವ ಆಧಾರ್ ಕಾರ್ಡ್​ ಮುಂತಾದ ಕೆಲವು ದಾಖಲೆಗಳು ಹುಡುಗಿಯ ಮನೆಯಲ್ಲೇ ಇರುವುದರಿಂದ ಇವರ ಮದುವೆಗೆ ಹಿನ್ನಡೆಯಾಗಿದೆ. ಹೀಗಾಗಿ ಅಲ್ಲಿಯವರೆಗೂ ಲಿವಿಂಗ್ ಟುಗೆದರ್ ರೀತಿ ಇರಲು ಇಬ್ಬರೂ ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಆದರೆ ಈ ಮಧ್ಯೆ ಹುಡುಗಿಯ ಮನೆಯವರ ಕಡೆಯಿಂದ ಅಪಾಯ ಇರುವ ಹಿನ್ನೆಲೆಯಲ್ಲಿ ರಕ್ಷಣೆ ಒದಗಿಸುವಂತೆ ಆದೇಶಿಸಲು ಕೋರಿ ಈ ಜೋಡಿ ಪಂಜಾಬ್​-ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದೆ. ಆದರೆ ಇವರ ಕೋರಿಕೆಯನ್ನು ಹೈಕೋರ್ಟ್ ನಿರಾಕರಿಸಿದೆ. ಲಿವ್​-ಇನ್​ ರಿಲೇಷನ್​ಷಿಪ್​ ನೈತಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ. ಅದಕ್ಕಾಗಿ ನಿಮಗೆ ರಕ್ಷಣೆ ನೀಡುವಂತೆ ಸೂಚಿಸಲೂ ಸಾಧ್ಯವಿಲ್ಲ ಎಂಬುದಾಗಿ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಎಚ್​.ಎಸ್. ಮದನ್​ ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿ ಪ್ರೇಮಿಗಳ ಅರ್ಜಿ ಇತ್ಯರ್ಥಗೊಳಿಸಿದ್ದಾರೆ.
ಕರೊನಾದಿಂದ ಸತ್ತ 300ಕ್ಕೂ ಹೆಚ್ಚು ಜನರ ಶವಸಂಸ್ಕಾರ ಮಾಡಿದ್ದವ ಕೊನೆಗೆ ಕೋವಿಡ್​ಗೇ ಬಲಿಯಾದ!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 17 =
Remember me
