ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಶಿಕ್ಷಕರ ದಿನವಾದ ಇಂದು ರಾಷ್ಟ್ರೀಯ ಶಿಕ್ಷಕ ಪುರಸ್ಕಾರವನ್ನು ಘೋಷಿಸುತ್ತಿದ್ದಾರೆ. ಪ್ರತಿಭಾವಂತ ಶಿಕ್ಷಕರನ್ನು ಪ್ರತಿವರ್ಷದಂತೆ ಈ ವರ್ಷವೂ ಗುರುತಿಸ ಗೌರವಿಸಲಾಗುತ್ತಿದ್ದು, ಈ ಸಲದ ಕಾರ್ಯಕ್ರಮ ವರ್ಚುವಲ್ ರೂಪದಲ್ಲಿ ನಡೆಯುತ್ತಿದೆ. ಇದರ ನೇರ ಪ್ರಸಾರ ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ ಮಾಡಿ.
ಕರ್ನಾಟಕದ ಕಲಬುರಗಿಯ ಅಫ್ಜಲಪುರದ ಬಂದರವಾಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ ಅವರು ಶಾಲೆಯಲ್ಲಿ ಮಕ್ಕಳಿಗೆ ಸೈನ್ಸ್ ಎಜುಕೇಶನ್​ನಲ್ಲಿ ಪ್ರಾಯೋಗಿಕ ಪಾಠ ಹೇಳುವ ಮೂಲಕ ಬದಲಾವಣೆ ತಂದಿದ್ದಾರೆ. ಈ ಸಲದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಅವರೂ ಭಾಜನರಾಗಿದ್ದಾರೆ. (ಪಿಐಬಿ)
ಶಾಕಿಂಗ್- ಅರುಣಾಚಲದ ಐವರು ಯುವಕರನ್ನು ಅಪಹರಿಸಿದ ಚೀನಾ ಸೇನೆ !

Sign in to your account
Please enter an answer in digits:11 − 3 =
Remember me
