ಅಹಮದಾಬಾದ್:ಗುಜರಾತ್​ ಹೈಕೋರ್ಟ್​ ದೇಶದಲ್ಲಿ ಇದೇ ಮೊದಲ ಬಾರಿಗೆ ಕೋರ್ಟ್ ಕಲಾಪವನ್ನು ಯೂಟ್ಯೂಬ್​ನಲ್ಲಿ ನೇರ ಪ್ರಸಾರ ಮಾಡಿ ಹೊಸ ದಾಖಲೆ ನಿರ್ಮಿಸಿದೆ. ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರ ನೇತೃತ್ವದ ವಿಚಾರಣೆ ಸೋಮವಾರದಿಂದಲೇ ಯೂಟ್ಯೂಬ್​ನಲ್ಲಿ 5 ಗಂಟೆಗೂ ಅಧಿಕ ಕಾಲ ನೇರಪ್ರಸಾರವಾಗಿದೆ.
ಇಂದು ಪ್ರಾಯೋಗಿಕ ಪ್ರಸಾರ ನಡೆದಿದ್ದು, ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಸಾರ ಮಾಡುವ ಚಿಂತನೆಯಲ್ಲಿದೆ ಹೈಕೋರ್ಟ್​. ಕಲಾಪಗಳನ್ನು ನೇರ ಪ್ರಸಾರ ಮಾಡುವ ವಿಧಾನವನ್ನು ಮುಂದುವರಿಸುವ ಅಥವಾ ಅಳವಡಿಸಿಕೊಳ್ಳುವ ಕುರಿತು ಪ್ರಾಯೋಗಿಕ ಪ್ರಸಾರದ ಫಲಿತಾಂಶದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಹೈಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಪಂಜಾಬ್ ತಂಡ ಪುಟಿದೇಳಲು ಇವರಿಬ್ಬರು ಕನ್ನಡಿಗರೇ ಕಾರಣ ಎಂದ ಗಾವಸ್ಕರ್
ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಾರ್ವಜನಿಕರಿಗೆ ವಿಚಾರಣೆಗಳನ್ನು ವೀಕ್ಷಿಸಲು ಅವಕಾಶ ನೀಡಬೇಕು ಎಂಬ ಸುಪ್ರೀಂಕೋರ್ಟ್​ನ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗುಜರಾತ್ ಹೈಕೋರ್ಟ್​ನ ಎಲ್ಲ ಪೀಠಗಳು ಕಳೆದ ಮಾರ್ಚ್​ನಿಂದಲೇ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ವಿಚಾರಣೆ ನಡೆಸುತ್ತಿವೆ. ವಿಚಾರಣೆ ಮರುವೀಕ್ಷಣೆಗೆ ಮೇಲಿನ ವಿಡಿಯೋ ಲಿಂಕ್​ ಕ್ಲಿಕ್ಕಿಸಬಹುದು. (ಏಜೆನ್ಸೀಸ್)
ಪಬ್​ಜಿಗೆ ಪರ್ಯಾಯವಾಗಿ ಬರಲಿದೆ ಫೌಜಿ; ಟೀಸರ್​ 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ

Sign in to your account
Please enter an answer in digits:eighteen + seventeen =
Remember me
