ನವದೆಹಲಿ:ಪಶ್ಚಿಮ ದೆಹಲಿಯಲ್ಲಿ ದಿವ್ಯಾಂಶ್ (11) ಎಂಬ ಬಾಲಕನ ಹತ್ಯೆಯ ಮಾಡಿದ ಪ್ರಕರಣದಲ್ಲಿ ಪೂಜಾ ಕುಮಾರಿ ಎಂಬ ಯುವತಿಯನ್ನು ಬಂಧಿಸಲಾಗಿದೆ. ದಿವ್ಯಾಂಶ್, ತನ್ನ ತಂದೆಯೊಂದಿಗೆ ಪೂಜಾ ಕುಮಾರಿ (24) ಮದುವೆಯಾಗುವುದನ್ನು ತಡೆದಿದ್ದನು. ಈ ಹಿನ್ನೆಲೆಯಲ್ಲಿ ಬಾಲಕನನ್ನು ಕೊಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಗಂಡನನ್ನು ತೊರೆದು ಕಿರುತೆರೆ ನಿರ್ದೇಶಕಿ ಜತೆ ಲಿವಿಂಗ್​ ಟುಗೆದರ್​! ದುಷ್ಕೃತ್ಯ ಎಸಗಿ ಸಿಕ್ಕಬಿದ್ದ ಜೋಡಿ
ಪೂಜಾ ಕುಮಾರಿ, ಹುಡುಗನ ತಂದೆ ಜಿತೇಂದ್ರ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರೂ 2019 ರಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಮೂರು ವರ್ಷಗಳ ನಂತರ, ಜಿತೇಂದ್ರ ತನ್ನ ಹೆಂಡತಿ ಮತ್ತು ಮಗನ ಬಳಿಗೆ ವಾಪಸ್‍ ಹೋಗಿದ್ದರು. ಇದು ಪೂಜಾಳಿಗೆ ಸಿಟ್ಟು ತರಿಸಿದೆ. ನಂತರ ಆಕೆ ಮಾಡಿದ್ದು ಘೋರ ಅಪರಾಧ.
ಆಗಸ್ಟ್ 10 ರಂದು, ಇಂದರ್ ಪುರಿಯಲ್ಲಿರುವ ಜಿತೇಂದ್ರ ಅವರ ಮನೆಯ ವಿಳಾಸವನ್ನು ಒದಗಿಸಲು ಅವರು ಕಾಮನ್‍ ಫ್ರೆಂಡ್‍ ಒಬ್ಬರನ್ನು ಕೇಳಿದರು. ಜಿತೇಂದ್ರನ ಮನೆಗೆ ತಲುಪಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭ ಹುಡುಗ ಹಾಸಿಗೆಯ ಮೇಲೆ ಮಲಗಿದ್ದ. ಪೊಲೀಸರಿಗೆ ನೀಡಿದ ತನ್ನ ಹೇಳಿಕೆಯಲ್ಲಿ ಆಕೆ, ಮಲಗಿದ್ದ ಹುಡುಗನ ಕತ್ತನ್ನು ಹಿಸುಕಿ ಪೆಟ್ಟಿಗೆಯಲ್ಲಿ ಹಾಸಿಗೆಯೊಳಗೆ ದೇಹವನ್ನು ಅಡಗಿಸಿದ್ದಾಳೆ ಎಂದು ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ.
ಇದನ್ನೂ ಓದಿ:ರ್ರಿ…. ಲಿವಿಂಗ್ ಟುಗೆದರ್ ಅಂದರ ಏನ್ರಿ?
ಸಿಸಿಟಿವಿ ಕ್ಯಾಮೆರಾಗಳಿಂದ ತುಣುಕಿನ ಸಹಾಯದಿಂದ ಪಶ್ಚಿಮ ದೆಹಲಿ ಪೊಲೀಸರು ಮಹಿಳೆಯನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಆದರೆ ನಂತರ ಅವಳನ್ನು ಹುಡುಕುವ ಕಾರ್ಯ ಮುಂದಿತ್ತು. ಆಕೆಯ ಮನೆಯಲ್ಲಿ ನಡೆಸಿದ ವಿಚಾರಣೆಗಳು ಪ್ರಯೋಜನಕ್ಕೆ ಬರಲಿಲ್ಲ. ಏಕೆಂದರೆ ಆಕೆ ತನ್ನ ಹೆತ್ತವರೊಂದಿಗೆ ವಾಸಿಸುತ್ತಿರಲಿಲ್ಲ.
ಇದನ್ನೂ ಓದಿ:2 ಮದ್ವೆ, 3ನೇ ವ್ಯಕ್ತಿ ಜತೆ ಲಿವಿಂಗ್‌ ಟುಗೆದರ್​​, ಪೇದೆಯ ಜತೆ ಅಕ್ರಮ ಸಂಬಂಧ ಹೊಂದಿದ್ದವಳ ದುರಂತ ಕತೆಯಿದು ​
ಪೊಲೀಸರು ನಂತರ ಇಂದರ್ ಪುರಿ ಮತ್ತು ಅದರ ನೆರೆಯ ಪ್ರದೇಶಗಳಾದ್ಯಂತ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲು ಪ್ರಾರಂಭಿಸಿದರು. ಅವಳು ಇನ್ನೂ ಅದೇ ಪ್ರದೇಶದಲ್ಲಿದ್ದಾಳೆ ಎಂದು ಪೊಲೀಸರು ಅರಿತುಕೊಂಡರು. ಆದರೆ ಆಕೆ ಆಗಾಗ್ಗೆ ತನ್ನ ಅಡಗುತಾಣಗಳನ್ನು ಬದಲಾಯಿಸುತ್ತಿದ್ದಳು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪೊಲೀಸರು ಮೂರು ದಿನಗಳ ನಂತರ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − four =
Remember me
