ನವದೆಹಲಿ:ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಮಧ್ಯೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಬಹುಜನ ಸಮಾಜ ಪಕ್ಷದಿಂದ (ಬಿಎಸ್​ಪಿ) ಉಚ್ಚಾಟನೆಗೊಂಡಿದ್ದ ಶಾಸಕರ ಪೈಕಿ ಆರು ಮಂದಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ರನ್ನು ಭೇಟಿಮಾಡಿದ್ದು, ಕೆಲ ದಿನಗಳಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಅಖಿಲೇಶ್​ ಭೇಟಿ ಬಗ್ಗೆ ಖಚಿತಪಡಿಸಿರುವ ಶಾಸಕಿ ಸುಷ್ಮಾ ಪಟೇಲ್​, “ನಮ್ಮ ಭವಿಷ್ಯದ ಬಗ್ಗೆ ಚರ್ಚಿಸಲೆಂದೇ ಭೇಟಿ ಮಾಡಿದ್ದೆವು. ನಾನಂತೂ ಎಸ್ಪಿ ಟಿಕೆಟ್​ನಿಂದ ಮುಂದಿನ ಚುನಾವಣೆ ಸ್ಪರ್ಧಿಸಲಿದ್ದೇನೆ’ ಎಂದು ಹೇಳಿದ್ದಾರೆ.
ಬಿಎಸ್​ಪಿ ನಾಯಕಿ ಮಾಯಾವತಿ ಕಳೆದ ಅಕ್ಟೋಬರ್​ನಲ್ಲಿ ರಾಜ್ಯಸಭೆ ಚುನಾವಣೆಗೆ ಪಕ್ಷದ ಮುಖಂಡ ರಾಮ್​ಜೀ ಗೌತಮ್​ರನ್ನು ಆಯ್ಕೆ ಮಾಡಿದ್ದನ್ನು 7 ಶಾಸಕರು ವಿರೋಧಿಸಿದ್ದರು. ಇದರಿಂದ ಸಿಟ್ಟಾಗಿದ್ದ ಮಾಯಾವತಿ ಏಳೂ ಮಂದಿಯನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಏತನ್ಮಧ್ಯೆ, ಜೂನ್​ 3ರಂದು ಬಿಎಸ್​ಪಿ ಹಿರಿಯ ಮುಖಂಡರಾದ ಲಾಲ್​ಜೀ ವರ್ಮ ಮತ್ತು ಅರಮ್​ ಅಚಲ್​ ರಾಜ್​ಭರ್​ ಅವರನ್ನು ಪಂಚಾಯತ್​ ಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಉಚ್ಚಾಟಿಸಲಾಗಿತ್ತು. 2017ರ ವಿಧಾನಸಭೆ ಚುನಾವಣೆಯಲ್ಲಿ 19 ಸೀಟುಗಳನ್ನು ಬಿಎಸ್​ಪಿ ಗೆದ್ದಿತ್ತು. ಉಪ ಚುನಾವಣೆಯಲ್ಲಿ ಒಂದು ಸೀಟನ್ನು ಕಳೆದುಕೊಂಡರೆ, 11 ಮಂದಿ ವಿವಿಧ ಕಾರಣಗಳಿಗಾಗಿ ಉಚ್ಚಾಟನೆಗೊಂಡಿದ್ದಾರೆ. ಸದ್ಯ ಬಿಎಸ್​ಪಿ 7 ಶಾಸಕರನ್ನು ಹೊಂದಿದೆ. ಜೂನ್​ 3ರಂದು ಪಕ್ಷದಿಂದ ಹೊರಬಿದ್ದ ಇಬ್ಬರು ಕೂಡ ಎಸ್​ಪಿ ಜತೆಗೆ ಸಂಪರ್ಕದಲ್ಲಿದ್ದು, ಶ್ರೀದಲ್ಲೇ ಅಖಿಲೇಶ್​ ಕೈಹಿಡಿವ ಸಾಧ್ಯತೆ ಹೆಚ್ಚಿದೆ. ಕಳೆದ ಪಂಚಾಯತ್​ ಚುನಾವಣೆಯಲ್ಲಿ ಬಿಜೆಪಿಗಿಂತ ಉತ್ತಮ ನಿರ್ವಹಣೆ ತೋರಿ ಉತ್ಸಾಹದಲ್ಲಿರುವ ಸಮಾಜವಾದಿ ಪಾರ್ಟಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ಪ್ರತಿಸ್ಪರ್ಧಿ ಆಗಲಿರುವುದರಿಂದ ಬಿಎಸ್​ಪಿ ಮುಖಂಡರು, ಕಾರ್ಯಕರ್ತ ರನೇಕರು ಎಸ್​ಪಿ ಕಡೆ ಮುಖ ಮಾಡುತ್ತಿದ್ದಾರೆ.
ಎಲ್​ಜೆಪಿ ಜಟಾಪಟಿ ಜೋರುಕೇಂದ್ರದ ಮಾಜಿ ಸಚಿವ, ದಿವಂಗತ ರಾಮ್​ ವಿಲಾಸ್​ ಪಾಸ್ವಾನ್​ ಪುತ್ರ ಚಿರಾಗ್​ ಪಾಸ್ವಾನ್​ರನ್ನು ಲೋಕಜನ ಶಕ್ತಿ ಪಕ್ಷದ (ಎಲ್​ಜೆಪಿ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಕೆಲವೇ ಗಂಟೆಗಳಲ್ಲಿ ಎಲ್​ಜೆಪಿ ಸಂಸದ, ಪಶುಪತಿನಾಥ ಪರಸ್​ ಸೇರಿ ಐವರು ಬಂಡಾಯ ಸಂಸದರನ್ನು ಚಿರಾಗ್​ ಪಾಸ್ವಾನ್​ ಉಚ್ಚಾಟನೆ ಮಾಡಿದ್ದಾರೆ. ಚಿರಾಗ್​ ಮತ್ತು ಪಶುಪತಿನಾಥ ಬೆಂಬಲಿಗ ಗುಂಪುಗಳೀಗ ಪಕ್ಷದ ಮೇಲೆ ನಿಯಂತ್ರಣ ಸಾಧಿಸಲು ಹೋರಾಟ ನಡೆಸುತ್ತಿದ್ದು, ಪ್ರಕರಣ ಚುನಾವಣಾ ಆಯೋಗದ ಮೆಟ್ಟಿಲೇರುವುದು ಬಹುತೇಕ ಖಚಿತ. ಪರಸ್​ ಅವರನ್ನು ಪಕ್ಷದ ಲೋಕಸಭೆ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಲೋಕಸಭೆ ಸ್ಪೀಕರ್​ ಸೋಮವಾರ ಖಚಿತಪಡಿಸಿದ್ದರು. ಸಂಸದರು ಹಾಗೂ ಪಕ್ಷ ಸಂಟನೆ ಪಶುಪತಿನಾಥ್​ ಪರಸ್​ ಬೆನ್ನಿಗೆ ನಿಂತಿರುವುದರಿಂದ ಕಾನೂನು ಹೋರಾಟದಲ್ಲೂ ಚಿರಾಗ್​ಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಈ ಮಧ್ಯೆ ತಮ್ಮ ಸಂಬಂಧಿಯೂ ಆದ ಪಶುಪತಿನಾಥ ವಿರುದ್ಧ ಕಿಡಿಕಾರಿರುವ ಚಿರಾಗ್​, “ಪಕ್ಷ ತಾಯಿ ಇದ್ದಂತೆ. ಅದಕ್ಕೆ ದ್ರೋಹ ಬಗೆದ ನೀವು ನನ್ನ ರಕ್ತಸಂಬಂಧಿಯೇ ಅಲ್ಲ’ ಎಂದಿದ್ದಾರೆ. ಚಿರಾಗ್​ ಸೋಮವಾರ 45 ನಿಮಿಷ ಪಶುಪತಿನಾಥರ ಮನೆ ಬಾಗಿಲು ಕಾದರೂ ಅವರ ಭೇಟಿಯಾಗಲು ಅವಕಾಶ ಸಿಗಲಿಲ್ಲ.
ಒಪ್ಪಂದ ವಿಸ್ತರಣೆಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತನ್ನ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದ ಪ್ರಶಾಂತ್​ ಕಿಶೋರ್​ ನೇತೃತ್ವದ ಐ&ಪ್ಯಾಕ್​ ಸಂಸ್ಥೆ ಜತೆಗಿನ ಒಪ್ಪಂದವನ್ನು ತೃಣಮೂಲ ಕಾಂಗ್ರೆಸ್​ ಪಕ್ಷ 2026ರವರೆಗೆ ವಿಸ್ತರಣೆ ಮಾಡಿದೆ. ಆದರೆ, ಈ ತಂಡದಲ್ಲಿ ಪ್ರಶಾಂತ್​ ಕಿಶೋರ್​ ಇಲ್ಲ. 2021ರ ಚುನಾವಣೆ ಲಿತಾಂಶ ಬಳಿಕ ಈ ಕೆಲಸ ಬಿಡುವುದಾಗಿ ಪ್ರಶಾಂತ್​ ಘೋಷಿಸಿದ್ದರು. ಹೀಗಾಗಿ ಐ& ಪ್ಯಾಕ್​ ಅನ್ನು ಇತರ ಸದಸ್ಯರು ಮುನ್ನಡೆಸ ಲಿದ್ದಾರೆ. ಬಂಗಾಳದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಟಿಎಂಸಿಗೆ ಐ&ಪ್ಯಾಕ್​ ಕಾರ್ಯತಂತ್ರ ರೂಪಿಸುವ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ.
ರಾಜಸ್ಥಾನದಲ್ಲಿ ನಿಲ್ಲದ ಬಿಕ್ಕಟ್ಟುರಾಜಸ್ಥಾನ ಕಾಂಗ್ರೆಸ್​ನಲ್ಲಿ ಸಿಎಂ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್​ ನಡುವಿನ ಬಿಕ್ಕಟ್ಟು ಸದ್ಯಕ್ಕೆ ಅಂತ್ಯವಾಗುವ ಲಕ್ಷಣ ಕಾಣುತ್ತಿಲ್ಲ. “ಕೆಲ ದಿನಗಳ ಕಾಲ ಜನರನ್ನು ಭೇಟಿ ಮಾಡುವುದು ಬೇಡ, ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆಗಳನ್ನು ನಡೆಸಿ’ ಎಂದು ಸಿಎಂಗೆ ವೈದ್ಯರು ಸಲಹೆ ನೀಡಿರುವುದರಿಂದ ಒಂದು ತಿಂಗಳ ಮಟ್ಟಿಗೆ ಗೆಹ್ಲೋಟ್​ ಯಾರನ್ನೂ ಭೇಟಿ ಮಾಡದಿರಲು ನಿರ್ಧರಿಸಿದ್ದಾರೆನ್ನಲಾಗಿದೆ. ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಪೈಲಟ್​ರನ್ನು ಸಮಾಧಾನಪಡಿಸಲು ವರಿಷ್ಠರು ಕೂಡ ಯತ್ನಿಸುತ್ತಿದ್ದಾರೆ. ಆದರೆ, ಈವರೆಗೆ ಯಾವುದೇ ಪರಿಹಾರ ಕಂಡುಕೊಳ್ಳಲಾಗಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 9 =
Remember me
