ನವದೆಹಲಿ:ನಾಳೆ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಶ್ರೀರಾಮ ದೇವಸ್ಥಾನ ನಿರ್ಮಾಣವಾಗುತ್ತಿರುವಲ್ಲಿ ಬಿಜೆಪಿ ಹಿರಿಯ ನಾಯಕ ಎಲ್​.ಕೆ.ಅಡ್ವಾಣಿ ಅವರ ಪಾತ್ರ ತುಂಬ ಮುಖ್ಯವಾದದ್ದು. ಆದರೆ ಕರೊನಾ ಕಾರಣದಿಂದ ಸಮಾರಂಭದಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ.
ಹೀಗಿರುವಾಗ ಅಡ್ವಾಣಿಯವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಭಾರತ ಪ್ರಬಲ, ಸಮೃದ್ಧ, ಶಾಂತಿ ಹಾಗೂ ಸಾಮರಸ್ಯ ರಾಷ್ಟ್ರವೆಂಬುದನ್ನು ಶ್ರೀರಾಮಮಂದಿರ ಪ್ರತಿನಿಧಿಸುತ್ತದೆ. ಇದು ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತದೆ. ಯಾರೊಬ್ಬರನ್ನೂ ಹೊರಗಿಡುವುದಿಲ್ಲ. ಅತ್ಯುತ್ತಮ ಆಡಳಿತದ ತಿರುಳಾಗಿರುವ ರಾಮರಾಜ್ಯವನ್ನು ಪ್ರವೇಶಿಸಲು ನಮಗೆ ದಾರಿ ತೋರುತ್ತದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ರಾಮಮಂದಿರ ಭೂಮಿಪೂಜೆಗಾಗಿ ಬಿಎಸ್‌ವೈ ಮಾಡಿಕೊಂಡರೊಂದು ಮನವಿ…
ಶ್ರೀರಾಮ ಅನುಗ್ರಹ, ಘನತೆ ಮತ್ತು ಮರ್ಯಾದೆಯ ಮೂರ್ತರೂಪ. ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸುತ್ತಿರುವುದು ಒಂದು ಐತಿಹಾಸಿಕ ಹಾಗೂ ಭಾವನಾತ್ಮಕ ದಿನ. ಇದು ನನ್ನ ಪಾಲಿಗೆ ಮಾತ್ರವಲ್ಲ. ಇಡೀ ದೇಶದ ಜನರಿಗೆ ಮಹತ್ವವಾದ ದಿನ ಎಂದು ಅಡ್ವಾಣಿ ಹೇಳಿದ್ದಾರೆ.
ಭಾರತೀಯ ಸಾಂಸ್ಕೃತಿಕ ಹಾಗೂ ನಾಗರಿಕ ಪರಂಪರೆಯಲ್ಲಿ ಶ್ರೀರಾಮನಿಗೆ ಗೌರವಯುತ ಸ್ಥಾನವಿದೆ. ಅವನ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಈ ದೇವಾಲಯ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಇಂದಿನವರೆಗೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಸಂಗ್ರಹಿಸಿದ್ದು 30 ಕೋಟಿ ರೂ.ದೇಣಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eight =
Remember me
