ಆಂಧ್ರಪ್ರದೇಶ:ರಾಜ್ಯದ ಕಡಪ ಜಿಲ್ಲೆಯಲ್ಲಿ ಮೇಯರ್​ ಸುರೇಶ್​ ಬಾಬು ವಿರುದ್ಧ ಬೆಳ್ಳಂಬೆಳಗ್ಗೆ ಪ್ರತಿಭಟನೆ ನಡೆಸಿದ ಸ್ಥಳೀಯರು, ಅವರ ನಿವಾಸದ ಮುಂದೆ ರಾಶಿ ರಾಶಿ ಕಸ ಸುರಿದು ಘೋಷಣೆ ಕೂಗಿರುವ ಘಟನೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಸದ ತೆರಿಗೆ ಪಾವತಿಸಿದರೆ ಮಾತ್ರ ನಿಮ್ಮ ಮನೆಯ ಕಸವನ್ನು ಸಂಗ್ರಹಿಸಲಾಗುವುದು ಎಂದು ಮೇಯರ್​ ಹೇಳಿದ್ದಕ್ಕೆ ಗರಂ ಆದ ಸ್ಥಳೀಯ ನಿವಾಸಿಗಳು, ಅವರ ಮನೆ ಮುಂದೆ ತ್ಯಾಜ್ಯಗಳನ್ನು ತಂದು ಸುರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಎಲ್ಲ ಕಾಂಗ್ರೆಸ್​ ನಾಯಕರಿಂದ ಗರ್ವನರ್​ ವಿರುದ್ಧ ಹೋರಾಟಕ್ಕೆ ಡಿಕೆಶಿ ಕರೆ
ಮೇಯರ್ ಸುರೇಶ್ ಬಾಬು ಅವರ ಮನೆ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ ಸ್ಥಳೀಯರು, ಕಸದ ತೆರಿಗೆ ಪಾವತಿಸಿದರೆ ಮಾತ್ರ ಕಸ ಸಂಗ್ರಹಿಸಲಾಗುವುದು ಎಂದು ಮೇಯರ್ ಒತ್ತಾಯಿಸಿದ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ. ಸ್ಥಳೀಯರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಮಧ್ಯಸ್ಥಿಕೆ ವಹಿಸಿದ ಶಾಸಕಿ ಮಾಧವಿ ರೆಡ್ಡಿ, ಕಸದ ತೆರಿಗೆ ಕಟ್ಟುವ ಅವಶ್ಯಕತೆ ಏನಿಲ್ಲ. ಇದನ್ನೆಲ್ಲಾ ಇಲ್ಲಿಗೆ ಕೈಬಿಡಿ ಎಂದು ಮನವಿ ಮಾಡಿದರು.
ಮೇಯರ್ ಮನೆಗೆ ಮುತ್ತಿಗೆ ಹಾಕಿದ ಸ್ಥಳೀಯರು, ತಮ್ಮ ಮನೆಯ ಕಸವನ್ನು ಸುರೇಶ್​ ಬಾಬು ನಿವಾಸದ ಮುಂಭಾಗದಲ್ಲಿ ಸುರಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).
ಮಧ್ಯರಾತ್ರಿ ತಾಯಿ ಜತೆಗೆ ಮಲಗಿದ್ರೂ ಬಿಡಲಿಲ್ಲ! ಆಘಾತಕಾರಿಯಾಗಿದೆ ನಟಿ ಶ್ರೀದೇವಿಕಾ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
