ಕೊಲ್ಕತಾ:ಏಳು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ರಸ್ತೆ ತಡೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ವಾಹನಗಳನ್ನ ಜಖಂಗೊಳಿಸಿರುವ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತಾದ ತಿಲಜಾಲ ಪ್ರದೇಶದಲ್ಲಿ ನಡೆದಿದೆ.
ಮೃತ ಬಾಲಕಿಯೂ ಭಾನುವಾರ ಬೆಳ್ಳಗೆಯಿಂದ ಕಾಣೆಯಾಗಿದ್ದಳು ಎಂದು ತಿಳಿದು ಬಂದಿದೆ. ಪೊಲೀಸರು ವ್ಯಾಪಕವಾಗಿ ಹುಡುಕಾಟ ನಡೆಸಿದ ನಂತರ ಕುಸ್ತಿಯಾದ ಶ್ರೀಧರ್​ ರಾಯ್​ ಪ್ರದೇಶದಲ್ಲಿರುವ ಅಪಾರ್ಟ್​​ಮೆಂಟ್​ ಒಂದರಲ್ಲಿ ಬಾಲಕಿಯ ಶವ ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಅಪಾರ್ಟ್​​ಮೆಂಟ್​ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಾಲಕಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕಾಣೆಯಾದ ಬಾಲಕಿಯನ್ನು ಹುಡುಕಿ ಕೊಡುವಲ್ಲಿ ಪೊಲೀಸರು ತಡ ಮಾಡಿದ್ಧಾರೆ ಎಂದು ಆರೋಪಿಸಿ ಸ್ಥಳೀಯರು ತಿಲಜಾಲ ಪೊಲೀಸ್​ ಠಾಣೆ ಎದುರು ಪ್ರತಿಭಟನೆ ನಡೆಸಿ ಠಾಣೆ ಮುಂದೆ ನಿಲ್ಲಿಸಲಾಗಿದ್ದ ವಾಹನಗಳನ್ನು ಜಖಂ ಮಾಡಿದ್ದಾರೆ.
West Bengal | Locals protest against the State Government and Administration over the death of a 7-year-old girl, in Kolkata.pic.twitter.com/ia65jSDxBI
ಇದನ್ನೂ ಓದಿ:ನಾಯಕಿಯಾದ ವೀರಪ್ಪನ್​ ಮಗಳು; ‘ಮಾವೀರನ್​ ಪಿಳ್ಳೈ’ ಚಿತ್ರದಲ್ಲಿ ನಟನೆ
ಪೊಲೀಸ್​ ಠಾಣೆ ಮುಂದೆ ದಾಂಧಲೆ ಮಾಡಿದ ಆರೋಪದ ಮೇಲೆ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸ್ಥಳೀಯರು ರಸ್ತೆ-ರೈಲು ತಡೆದು ಪ್ರತಿಭಟಿಸಿದ್ದಾರೆ.
ಘಟನೆಯಲ್ಲಿ ಮೂರು ಪೊಲೀಸ್​ ವಾಹನಗಳು ಜಖಂಡಗೊಂಡಿದ್ದು ಒಂದನ್ನು ಸುಟ್ಟು ಹಾಕಲಾಗಿದೆ. ಗುಂಪನ್ನು ಚದುರಿಸಲು ಬಂದ ಭದ್ರತಾ ಪಡೆಗಳ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + two =
Remember me
