ರಾಜಸ್ಥಾನ:ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಸಾಸಿವೆ ಎಣ್ಣೆ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಹಿನ್ನಲೆ ಲೀಟರ್ ಗಟ್ಟಲೆ ತೈಲ ರಸ್ತೆಯ ಪಾಲಾಗಿದೆ. ಈ ವೇಳೆ ಘಟನೆ ಬಗ್ಗೆ ಅರಿತ ಸ್ಥಳೀಯರು ಬಕೆಟ್​, ಬಾಟಲಿ ಹಿಡಿದು ಲಾರಿಯಿಂದ ಎಣ್ಣೆಯನ್ನು ದೋಚಲು ಭಾರೀ ಪೈಪೋಟಿ ನಡೆಸಿರುವ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಬೆಕ್ಕನ್ನು ಗುರುತಿಸಬಲ್ಲರು!
ರಸ್ತೆಯ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾದ ಸಾಸಿವೆ ಎಣ್ಣೆಯಿಂದ ತುಂಬಿದ್ದ ಲಾರಿಯನ್ನು ಕಂಡ ಸ್ಥಳೀಯರು, ಕೂಡಲೇ ಬಾಟಲಿ ಮತ್ತು ಡಬ್ಬಗಳನ್ನು ಹಿಡಿದು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ತೈಲವನ್ನು ಸಂಗ್ರಹಿಸಲು ನಾ ಮುಂದು ತಾ ಮುಂದು ಎಂದು ತಮ್ಮಲ್ಲೇ ಪೈಪೋಟಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪೊಲೀಸ್​ ಅಧಿಕಾರಿಯೊಬ್ಬರು, “ಲಾರಿಯು ಗುಜರಾತ್‌ನ ಗಾಂಧಿಧಾಮದಿಂದ ಮಧ್ಯಪ್ರದೇಶಕ್ಕೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಟ್ಯಾಂಕರ್​ ಪಲ್ಟಿಯಾಗುತ್ತಿದ್ದಂತೆ ತೈಲ ರಸ್ತೆಯಲ್ಲಿ ಸೋರಿಕೆಯಾಗಿದೆ. ಕೂಡಲೇ ಸ್ಥಳೀಯರು ಬಾಟಲಿಗಳು ಮತ್ತು ಕಂಟೈನರ್‌ಗಳೊಂದಿಗೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಇದರಿಂದ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಕೂಡ ಎದುರಾಯಿತು” ಎಂದು ಹೇಳಿದ್ದಾರೆ,(ಏಜೆನ್ಸೀಸ್).
ರಿಲೀಸ್ ಆಯ್ತು ‘ಚಂದ್ರಮುಖಿ -2’ ಪೋಸ್ಟರ್​​; ಆಕರ್ಷಕ ಲುಕ್​​ನಲ್ಲಿ ನಟಿ ಕಂಗನಾ ರಣಾವತ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 6 =
Remember me
