ಹೈದರಾಬಾದ್​:ಕೆರೆಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ ಎಂದು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ದೊಡ್ಡ ಸೆರ್ಪ್ರೈಸ್ ಕಾದಿತ್ತು. ಅಷ್ಟಕ್ಕೂ ಆ ಸರ್ಪ್ರೈಸ್​ ಏನು ಎಂಬುದನ್ನು ನಾವೀಗ ವಿವರವಾಗಿ ತಿಳಿಯೋಣ.
ತೆಲಂಗಾಣದ ಹನಮಕೊಂಡದ ರೆಡ್ಡಿಪುರಂನಲ್ಲಿ ಈ ಘಟನೆ ನಡೆದಿದೆ. ಸರ್​ ಕೆರೆಯಲ್ಲಿ ವ್ಯಕ್ತಿಯೊಬ್ಬನ ಶವ ತೇಲುತ್ತಿದೆ ಎಂದು ಸ್ಥಳೀಯ ಜನರು ತಮ್ಮ ವ್ಯಾಪ್ತಿಯ ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಕೂಡಲೇ ಸ್ಥಳಕ್ಕೆ ಧಾವಿಸುವ ಪೊಲೀಸರು ಕೆರೆಯ ದಡಕ್ಕೆ ಹೋಗಿ ಸತ್ತಂತೆ ಬಿದ್ದಿರುವ ವ್ಯಕ್ತಿಯ ಕೈಹಿಡಿದು ಎಳೆಯುತ್ತಾರೆ. ಆದರೆ, ಇದ್ದಕ್ಕಿದ್ದಂತೆ ಆ ವ್ಯಕ್ತಿ ಎಚ್ಚರಗೊಳುತ್ತಾನೆ. ಇದರಿಂದ ಒಂದು ಕ್ಷಣ ಪೊಲೀಸರೇ ದಂಗಾಗುತ್ತಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?ಶರ್ಟ್​ ಇಲ್ಲದೇ ಕೇವಲ ನೀಲಿ ಜೀನ್ಸ್ ಧರಿಸಿ ಕೆರೆಯಲ್ಲಿ ಮಲಗಿರುವ ವ್ಯಕ್ತಿಯನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲಿಗೆ ಪೊಲೀಸ್​ ಅಧಿಕಾರಿ ಬಂದು ನೀರಿನಲ್ಲಿ ಶವದಂತೆ ಬಿದ್ದಿರುವ ವ್ಯಕ್ತಿಯ ಕೈಹಿಡಿದು ಮೇಲಕ್ಕೆ ಎಳೆಯುತ್ತಾರೆ. ಈ ವೇಳೆ ಆತ ಎದ್ದು ಕುಳಿತುಕೊಳ್ಳುತ್ತಾನೆ. ಬಳಿಕ ಕೆರೆಯಿಂದ ಎದ್ದು ಬಂದು ಪೊಲೀಸರ ಜತೆ ಮಾತನಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮೂಲಗಳ ಪ್ರಕಾರ ಕುಡಿದು ಮತ್ತಿನಲ್ಲಿ ಈ ರೀತಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ನೆಲ್ಲೂರು ಜಿಲ್ಲೆಯ ಕವಲಿ ಮೂಲದ ವ್ಯಕ್ತಿಯಾಗಿದ್ದು, ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ.
Drunk Man Mistaken for Dead, Found Alive in Hanumakonda Pond
Residents of Reddypuram Kovelakunta in Hanumakonda were taken aback today after discovering what they initially believed to be a dead body floating in the local pond.The man, later identified as a quarry worker from…pic.twitter.com/3koRv6iCai
— Sudhakar Udumula (@sudhakarudumula)June 10, 2024

ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಸಿಲಿನ ತಾಪ ತಾಳಲಾರದೆ ಈ ರೀತಿ ಕೆರೆಯಲ್ಲಿ ಬಿದ್ದಿರುವುದಾಗಿ ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. ವಿಡಿಯೋ ವೈರಲ್ ಆದ ನಂತರ ಅನೇಕ ನೆಟ್ಟಿಗರು ಹಾಸ್ಯಮಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದನ್ನು ನೋಡಿ ನಗು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್​)
ಹುಡುಗರಿಗೆ ಪೈಪೋಟಿ… ವೇದಿಕೆ ಮೇಲೆಯೇ ಬಟ್ಟೆ ಬಿಚ್ಚಿದ ನಟಿ, ನಿರೂಪಕಿ ಅನಸೂಯ ಭಾರದ್ವಜ್​!

ಅಫ್ಘಾನಿಸ್ತಾನ ಎದುರು ಹೀನಾಯ ಸೋಲು: ಭಾರತದ ವಿರುದ್ಧ ಚೀಪ್​ ಕಾಮೆಂಟ್​ ಮಾಡಿದ ಆಸಿಸ್ ಕ್ಯಾಪ್ಟನ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 6 =
Remember me
