ನವದೆಹಲಿ: ಕರೊನಾ ಸೋಂಕು ತಡೆಗೆ ಘೋಷಿಸಿದ್ದ 21 ದಿನಗಳ ಲಾಕ್​ಡೌನ್ ಕೊನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಮತ್ತೆ 19 ದಿನಗಳಿಗೆ ಅದನ್ನು ವಿಸ್ತರಿಸಿದ್ದಾರೆ. ಅಲ್ಲದೆ ಕರೊನಾ ತಡೆಯುವ ನಿಟ್ಟಿನಲ್ಲಿ ಸಪ್ತಪದಿ ಅನುಸರಿಸಲು ಕರೆ ಕೊಟ್ಟಿದ್ದಾರೆ. ಅಲ್ಲದೆ ವಿಸ್ತೃತ ಮಾರ್ಗಸೂಚಿಯನ್ನು ನಾಳೆ ಪ್ರಕಟಿಸುವುದಾಗಿಯೂ ಹೇಳಿದ್ದಾರೆ.
ದೇಶಾದ್ಯಂತ ಮೇ 3ರ ತನಕ ಲಾಕ್​ಡೌನ್ ಮುಂದುವರಿಯಲಿದೆ. ಇಡೀ ದೇಶ ಕರೊನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದ್ದು, ಹಾಟ್​ಸ್ಪಾಟ್​ಗಳಲ್ಲಿ ಕಠಿಣ ನಿಯಮಗಳ ಪಾಲನೆ ಮಾಡಬೇಕಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. #COVID19 ಟೆಸ್ಟ್​ಗಾಗಿ ದೇಶಾದ್ಯಂತ 220ಕ್ಕೂ ಹೆಚ್ಚು ಲ್ಯಾಬ್​ ಸ್ಥಾಪನೆ ಕೆಲಸ ಪ್ರಗತಿಯಲ್ಲಿದೆ. ಜಗತ್ತಿನ ವಿದ್ಯಮಾನಗಳ ಅನುಭವದ ಪ್ರಕಾರ ಪ್ರತಿ 10,000 ಕೇಸ್​ಗಳನ್ನು ನಿಭಾಯಿಸಲು 1,500-1,600 ಬೆಡ್​ಗಳ ಅವಶ್ಯಕತೆ ಇದೆ. ನಮಲ್ಲಿ ಈಗ 1 ಲಕ್ಷಕ್ಕೂ ಹೆಚ್ಚು ಬೆಡ್​ಗಳಿವೆ, 600ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವುಗಳನ್ನು ಇನ್ನೂ ವಿಸ್ತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಸಪ್ತಪದಿ ಸೂತ್ರ:1.ಕಟ್ಟುನಿಟ್ಟಾಗಿ ಲಾಕ್​ಡೌನ್ ನಿಯಮ ಪಾಲಿಸಬೇಕು. ಯಾರಿಗೆ ನೆರವು ಬೇಕೋ ಅವರಿಗೆ ನೆರವು ನೀಡಿ.2ಮನೆಯಲ್ಲಿ ಇರುವ ಹಿರಿಯರನ್ನು ಹೆಚ್ಚುವರಿ ಕಾಳಜಿಯಿಂದ ನೋಡಿಕೊಳ್ಳಿ.3ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲಿಸಿ, ಮನೆಯಲ್ಲೇ ತಯಾರಿಸಿದ ಮುಖದ ಮಾಸ್ಕ್​ ಧರಿಸಿ4ಆಯುಷ್ ಸಚಿವಾಲಯದ ನಿರ್ದೇಶನಗಳನ್ನು ನಿಮ್ಮ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಸಲುವಾಗಿ ಪಾಲಿಸಬೇಕು.5ಆರೋಗ್ಯ ಸೇತು ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಿ.6ನಿಮ್ಮಲ್ಲಿ ಕೆಲಸ ಮಾಡುವವರನ್ನು ವಜಾಗೊಳಿಸಬೇಡಿ. ಅವರ ಅಗತ್ಯಗಳಿಗೆ ಸೂಕ್ಷ್ಮವಾಗಿ ಸ್ಪಂದಿಸಿ.7ಡಾಕ್ಟರ್ಸ್ ಮತ್ತು ನರ್ಸ್​​ಗಳಿಗೆ ಹಾಗೂ ಯಾರೆಲ್ಲ ಕರೊನಾ ಸೋಂಕು ಹರಡದಂತೆ ತಡೆಯಲು ಹೋರಾಡುತ್ತಿದ್ದಾರೋ ಅವರಿಗೆಲ್ಲ ಗೌರವಿಸಿ.
ಈ ಏಳು ಸೂತ್ರಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಬೇಕು ಎಂದು ಹೇಳಿದ ಪ್ರಧಾನಿ ಮೋದಿ, ನಾವು ಹೊಸ ಮಾರ್ಗಸೂಚಿಯನ್ನು ಮಾಡುತ್ತಿದ್ದೇವೆ.  ಈ ಸಂದರ್ಭದಲ್ಲಿ ದೇಶದ ಎಲ್ಲ ಬಡವರ ಮತ್ತು ದಿನಗೂಲಿ ಕಾರ್ಮಿಕರ ಹಿತವನ್ನೂ ಗಮನದಲ್ಲಿ ಇರಿಸಿಕೊಂಡಿದ್ದೇವೆ. ದೇಶದಲ್ಲಿ ರಬಿ ಬೆಳೆ ಕೊಯ್ಲು ಪ್ರಗತಿಯಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೃಷಿಕರು ಸಮಸ್ಯೆಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ. ವಿಸ್ತೃತ ಮಾರ್ಗಸೂಚಿಯನ್ನು ಸದ್ಯವೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
LIVE: ಮೇ 3ರ ತನಕ ಲಾಕ್​ಡೌನ್ ಮುಂದುವರಿಯಲಿದೆ – ಪ್ರಧಾನಿ ನರೇಂದ್ರ ಮೋದಿ

ಒಂದೇ ಒಂದು ಆ್ಯಪಲ್​ – 2 ಕೋಟಿ ಪರಿಹಾರ!

ಸಾವು ಕಣ್ಮುಂದೆ ಕುಣೀತಿತ್ತು- ಆದ್ರೂ ಬದುಕಿ ಉಳಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
