ನವದೆಹಲಿ: ಕರೊನಾ ವೈರಸ್ ನಿಯಂತ್ರಣ ಕ್ರಮ ಹಾಗೂ ಲಾಕ್​ಡೌನ್ ಕುರಿತ ಪರಾಮರ್ಶೆಗಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭವಾಗಲಿದೆ.
ಇದು ಭಾರತದಲ್ಲಿ ಲಾಕ್​ಡೌನ್ ಜಾರಿಯಾದ ಬಳಿಕ ಮೋದಿ ಸಿಎಂಗಳ ಜತೆ ನಡೆಸುತ್ತಿರುವ 3ನೇ ಸಭೆಯಾಗಿದೆ. ಮಹಾರಾಷ್ಟ್ರ ಸೇರಿದಂತೆ ಉತ್ತರದ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಗಂಭೀರಗೊಂಡಿರುವುದರಿಂದ ಐದಕ್ಕೂ ಹೆಚ್ಚು ರಾಜ್ಯಗಳು ಲಾಕ್​ಡೌನ್ ವಿಸ್ತರಣೆ ಬೇಡಿಕೆಯನ್ನು ಪ್ರಧಾನಿ ಮುಂದಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜತೆಗೆ ಏಪ್ರಿಲ್ 20ರ ಬಳಿಕ ಕೆಲ ಪ್ರದೇಶಗಳಲ್ಲಿನ ನಿರ್ಬಂಧ ಸಡಿಲಿಸಿರುವ ಬಗ್ಗೆ ಹಾಗೂ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ, ರಕ್ಷಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.
ಕೈ ರಾಜ್ಯಗಳ ಆಕ್ಷೇಪ:ಲಾಕ್​ಡೌನ್ ನಿಯಮಗಳ ಕುರಿತಂತೆ ಕಾಂಗ್ರೆಸ್ ಆಡಳಿತ ರಾಜ್ಯಗಳು ಈಗಾಗಲೇ ಆಕ್ಷೇಪ ಎತ್ತಿವೆ. ಅನುದಾನ, ಪ್ಯಾಕೇಜ್ ನೀಡದ ಹೊರತು ಕರೊನಾ ವಿರುದ್ಧದ ಹೋರಾಟ ಸಫಲವಾಗದೆಂದು ಈಗಾಗಲೇ ಕಾಂಗ್ರೆಸ್​ನ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದಾರೆ.
https://www.vijayavani.net/politician-locks-people-in-haunted-house-for-breaking-quarantine-rules/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
