ನವದೆಹಲಿ: ನಿರೀಕ್ಷೆಯಂತೆ ದೇಶದ ಆರ್ಥಿಕತೆ ಚೇತರಿಕೆಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ಕರೊನಾ ಮಹಾಮಾರಿಯ ಆರ್ಭಟ ತೀವ್ರವಿರುವ ಕಂಟೇನ್ಮೆಂಟ್ ಪ್ರದೇಶಗಳಿಗೆ ಸೀಮಿತವಾಗಿ ಜೂ.30ರವರೆಗೆ ಲಾಕ್​ಡೌನ್ ವಿಸ್ತರಿಸಿ ಶನಿವಾರ ಲಾಕ್​ಡೌನ್-5.0 ಮಾರ್ಗಸೂಚಿ ಬಿಡುಗಡೆ ಮಾಡಿದೆ. ಉಳಿದಂತೆ ದೇಶಾದ್ಯಂತ ಹೊಸ ಜೀವನ ಆರಂಭಿಸಲು ಮುನ್ನುಡಿ ಬರೆದಿರುವ ಕೇಂದ್ರ ಸರ್ಕಾರ ಒಟ್ಟು ಮೂರು ಹಂತಗಳಲ್ಲಿ ನಿರ್ಬಂಧ ತೆರವುಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಜೂ.8ರಂದು ಮೊದಲ ಹಂತದಲ್ಲಿ ಹೋಟೆಲ್, ಮಾಲ್, ದೇವಸ್ಥಾನಗಳು ಆರಂಭಗೊಂಡರೆ, 2ನೇ ಹಂತದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾದ ಸಮಾಲೋಚನೆ ಬಳಿಕ ಶಾಲಾ, ಕಾಲೇಜುಗಳ ಆರಂಭದ ಮುಹೂರ್ತ ನಿಗದಿಯಾಗಲಿದೆ. ಅಂತಾರಾಷ್ಟ್ರೀಯ ವಿಮಾನ, ಮೆಟ್ರೋ ರೈಲು, ಜಿಮ್ಳ ಆರಂಭ ಮೂರನೇ ಹಂತದಲ್ಲಿ ಪರಿಸ್ಥಿತಿ ಆಧರಿಸಿ ನಿಗದಿಯಾಗಲಿದೆ.
ಸದ್ಯ ದೇಶಾದ್ಯಂತ ಜಾರಿಯಲ್ಲಿರುವ ಲಾಕ್​ಡೌನ್ 4.0 ಭಾನುವಾರ (ಮೇ 31) ಅಂತ್ಯಗೊಳ್ಳಲಿದೆ. ಕೇಂದ್ರದ ಹೊಸ ಮಾರ್ಗಸೂಚಿ ಪ್ರಕಾರ ಕಂಟೇನ್ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದೆಲ್ಲ ಕಡೆ ನಿರ್ಬಂಧಗಳು ಭಾಗಶಃ ತೆರವುಗೊಳ್ಳಲಿದೆ. ಈ ಹೊಸ ನಿಯಮಗಳು ಜೂನ್ 1ರಿಂದ ಅನ್ವಯವಾದರೂ ಜೂ.8ರವರೆಗೆ ಲಾಕ್​ಡೌನ್ 4.0 ಮಾರ್ಗಸೂಚಿ ಪ್ರಕಾರವೇ ಮುಂದುವರಿಯಲಿದೆ.

ಅನ್​ಲಾಕ್ 1(ಜೂ.8ರಿಂದ ಜಾರಿ)
ದೇವಸ್ಥಾನ, ಹೋಟೆಲ್, ರೆಸ್ಟೋರೆಂಟ್, ಶಾಪಿಂಗ್ ಮಾಲ್, ಆತಿಥ್ಯ ವಲಯ, ಎಲ್ಲ ವೈದ್ಯಕೀಯ ಸೇವೆ ಶುರುವಾಗಲಿದೆ. ಕರೊನಾ ಪಸರಿಸುವಿಕೆ ತಡೆಗಟ್ಟಲು ದೈಹಿಕ ಅಂತರ ಸೇರಿದಂತೆ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕೇಂದ್ರ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆ ನೀಡುವ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್​ಒಪಿ) ನಿಯಮ ಅನುಸರಿಸುವುದು ಕಡ್ಡಾಯ

ಅನ್​ಲಾಕ್ 2
ಶಾಲೆ, ಕಾಲೇಜು, ಎಲ್ಲ ಶೈಕ್ಷಣಿಕ ಸಂಸ್ಥೆಗಳು ಆರಂಭವಾಗಲಿದೆ. ಇದಕ್ಕೂ ಮೊದಲು ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಮತ್ತು ಪಾಲಕರೊಂದಿಗೆ ರಾಜ್ಯ ಸರ್ಕಾರಗಳು ಸಮಾಲೋಚಿಸಬೇಕು. ಈ ಪ್ರಕ್ರಿಯೆ ಬಳಿಕ ಕೇಂದ್ರ ಸರ್ಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ರ್ಚಚಿಸಿ ಜುಲೈನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಅನ್​ಲಾಕ್ 3
ಚಿತ್ರಮಂದಿರ, ಜಿಮ್ ಈಜುಕೊಳ, ಮೆಟ್ರೋ ರೈಲು, ಅಂತಾರಾಷ್ಟ್ರೀಯ ವಿಮಾನ, ಮನರಂಜನಾ ಪಾರ್ಕ್, ಬಾರ್, ಆಡಿಟೋರಿಯಂ, ಸಾಮಾಜಿಕ, ರಾಜಕೀಯ, ಕ್ರೀಡಾ, ಸಾಂಸ್ಕೃತಿಕ, ಧಾರ್ವಿುಕ ಸಭೆ, ಸಮಾರಂಭ ಆರಂಭಿಸುವ ಸಂಬಂಧ ಕರೊನಾ ಪರಿಸ್ಥಿತಿ ಅವಲೋಕಿಸಿ ಕೇಂದ್ರ ಸರ್ಕಾರ ಮೂರನೇ ಹಂತದಲ್ಲಿ ತೀರ್ಮಾನ ಕೈಗೊಳ್ಳಲಿದೆ.
ಕರ್ಫ್ಯೂ ಅವಧಿ ಸಡಿಲ
ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಜಾರಿಯಲ್ಲಿರುವ ಕರ್ಫ್ಯೂ ಅವಧಿಯನ್ನುರಾತ್ರಿ 9ರಿಂದ ಬೆಳಗ್ಗೆ 5ಗಂಟೆವರೆಗೆ ಸೀಮಿತಗೊಳಿಸಿ ಸಡಿಲಿಸಲಾಗಿದೆ.
ಪ್ರಯಾಣಕ್ಕಿಲ್ಲ ನಿರ್ಬಂಧಆಂತರಿಕ, ಅಂತಾರಾಜ್ಯ ಪ್ರಯಾಣದ ಜತೆಗೆ ಸರಕು ಸಾಗಣೆ ಮೇಲಿನ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಈ ಪ್ರಯಾಣಕ್ಕೆ ಯಾವುದೇ ಪ್ರತ್ಯೇಕ ಅನುಮತಿ ಅಥವಾ ಇ-ಪರ್ವಿುಟ್​ನ ಅವಶ್ಯಕತೆ ಇರುವುದಿಲ್ಲ. ಆದರೆ ಕರೊನಾ ಪರಿಸ್ಥಿತಿಗೆ ಅನುಗುಣವಾಗಿ ನಿರ್ಬಂಧ ವಿಧಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ರಾಜ್ಯ ಸರ್ಕಾರಗಳೂ ತೀರ್ಮಾನ ಕೈಗೊಳ್ಳಬಹುದಾಗಿದೆ. ಆದಾಗ್ಯೂ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳಿಗೆ ಅನುಗುಣವಾಗಿ ನೆರೆಯ ರಾಷ್ಟ್ರಗಳ ಜತೆಗಿನ ಸರಕು ಸಾಗಣೆಗೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ನಿರ್ಬಂಧ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈಗಾಗಲೇ ಸಂಚರಿಸುತ್ತಿರುವ ಶ್ರಮಿಕ ವಿಶೇಷ ರೈಲುಗಳು, ಜೂ.1ರಿಂದ ಸಂಚರಿಸಲಿರುವ ವಿಶೇಷ ರೈಲುಗಳು ಹಾಗೂ ದೇಶಿಯ ವಿಮಾನಯಾನ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
