ನವದೆಹಲಿ:ಲಾಕ್​ಡೌನ್ ನಿರ್ಧಾರವನ್ನೇ ಬಂಡವಾಳ ಮಾಡಿಕೊಂಡು ಅಗತ್ಯ ವಸ್ತುಗಳನ್ನು ಅಕ್ರಮ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರುತ್ತಿರುವ ಹಾಗೂ ಕೃತಕ ಅಭಾವ ಸೃಷ್ಟಿಸುತ್ತಿರುವವರಿಗಿನ್ನು ಏಳು ವರ್ಷ ಜೈಲು ಶಿಕ್ಷೆ ನಿಶ್ಚಿತ.
ದೇಶಾದ್ಯಂತ ಇಂತಹ ನೂರಾರು ಪ್ರಕರಣ ವರದಿಯಾಗುತ್ತಿರುವುದರಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಕಾಳಸಂತೆ ದಂಧೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ಕೇಂದ್ರ ಗೃಹ ಇಲಾಖೆ ವಿಪತ್ತು ನಿರ್ವಹಣೆ ಕಾನೂನಿನ ಅನ್ವಯ ಲಾಕ್​ಡೌನ್ ಅವಧಿಯಲ್ಲಿ ಆಹಾರ ಸಾಮಗ್ರಿ, ಔಷಧ ಹಾಗೂ ವೈದ್ಯಕೀಯ ಉಪಕರಣಗಳಂಥ ಅಗತ್ಯ ಸಾಮಗ್ರಿಗಳ ಉತ್ಪಾದನೆ, ಸಾಗಾಟ ಮತ್ತಿತರ ಸರಬರಾಜು ಸಂಬಂಧಿತ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಈ ವಿಷಯ ತಿಳಿಸಿದ್ದಾರೆ.
ಹಲವು ಕಾರಣಗಳಿಂದ, ಮುಖ್ಯವಾಗಿ ಕಾರ್ವಿುಕ ಸರಬರಾಜಿನಲ್ಲಿ ಕಡಿತವಾಗಿರುವುದರಿಂದ ಉತ್ಪಾದನೆ ಕಡಿತವಾಗಿರುವ ಬಗ್ಗೆ ವರದಿಗಳು ಬಂದಿವೆ. ‘ಇಂಥ ಸನ್ನಿವೇಶದಲ್ಲಿ ಅಗತ್ಯ ಸಾಮಗ್ರಿಗಳ ಅಕ್ರಮ ದಾಸ್ತಾನು, ಕಾಳಸಂತೆ ಮಾರಾಟ, ಲಾಭಕೋರತನ, ಅಗತ್ಯ ವಸ್ತುಗಳ ಬೆಲೆಯೇರಿಕೆ ಮೊದಲಾದವುಗಳ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು’ ಎಂದವರು ಹೇಳಿದ್ದಾರೆ.
ಜೂ.30ರವರೆಗೆ ಸಡಿಲ: ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿರುವ ನಿಯಮವನ್ನು ಜೂ.30ರವರೆಗೆ ಸಡಿಲಿಸಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಗಳಿಗೆ ಅಧಿಕಾರ ನೀಡುವ ಅಧಿಸೂಚನೆಯನ್ನು ಕೇಂದ್ರ ಗ್ರಾಹಕರ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಹೊರಡಿಸಲಿದೆ.
ನಿರ್ದೇಶನವೇನು
ಸ್ಯಾನಿಟೈಸರ್, ಮಾಸ್ಕ್ ದಂಧೆಗಿಲ್ಲ ಕಡಿವಾಣ
ಬೆಂಗಳೂರು: ರಾಜ್ಯದಲ್ಲಿ ಸ್ಯಾನಿಟೈಸರ್ ಹಾಗೂ ಫೇಸ್ ಮಾಸ್ಕ್​ಗಳ ನಕಲಿ ದಂಧೆ ದಿನೇದಿನೆ ಹೆಚ್ಚುತ್ತಿದ್ದು, ಬೆಂಗಳೂರೊಂದರಲ್ಲೇ 6ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದೆ. ನಕಲಿ ನೈರ್ಮಲ್ಯಕ ತಯಾರಿಸುತ್ತಿದ್ದ ಗೋದಾಮುಗಳ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು 10ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಸಿಸಿಬಿ ಬಲೆಗೆ ಬಿದ್ದ ಶ್ರೀರಾಂಪುರದ ಅಪಾರ್ಟ್​ವೆುಂಟ್​ನಲ್ಲಿ ನೆಲೆಸಿದ್ದ ಆರೋಪಿ ಶಿವಕುಮಾರ್ ಎಂಬಾತ ಐಸೋಪ್ರೊಫೈಲ್ ಆಲ್ಕೋಹಾಲ್ ಎಂಬ ರಾಸಾಯನಿಕ ದ್ರವ ಹಾಗೂ ಇತರೆ ಕೆಮಿಕಲ್ ಸಂಗ್ರಹಿಸಿ ಸ್ಯಾನಿಟೈಸರ್ ತಯಾರಿಸುತ್ತಿದ್ದ. ಮಾ.31ರಂದು ಓರ್ವನನ್ನು ಬಂಧಿಸಿದ ಸಿಸಿಬಿ ಪೊಲೀಸರು, 8 ಲಕ್ಷ ರೂ. ಮೌಲ್ಯದ ಥರ್ವಮೀಟರ್ ಜಪ್ತಿ ಮಾಡಿದ್ದರು.
ಮಹಾಮಾರಿ ಕರೊನಾ ಸೋಂಕಿತರ ಸೇವೆಗೆ ನಿಂತ ಭಾರತ ಮೂಲದ ಇಂಗ್ಲೆಂಡ್‌ ಸುಂದರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
