ನವದೆಹಲಿ:ಕರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದನ್ನು ನಿಯಂತ್ರಿಸಲು ಎಲ್ಲ ರಾಜ್ಯಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಪ್ರಮುಖ ರಾಜ್ಯಗಳಲ್ಲಿ ಪರಿಸ್ಥಿತಿ ತಹಬಂಧಿಗೆ ಬರುತ್ತಿಲ್ಲ. ಅದರಲ್ಲೂ 10 ರಾಜ್ಯಗಳಲ್ಲಿ ಭಾರಿ ಹೆಚ್ಚಳವಾಗುತ್ತಿರುವುದು ಕೇಮದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಅಂತೆಯೇ ಬಿಹಾರದಲ್ಲಿ ಗೃಹ ಇಲಾಖೆ ಉನ್ನತಮಟ್ಟದ ಸಭೆ ನಡೆಸಿ ರಾಜ್ಯಾದ್ಯಂತ ಇನ್ನಷ್ಟು ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ. ಸೆಪ್ಟಂಬರ್​ 6ರ ವರೆಗೆ ಲಾಕ್​ಡೌನ್​ ಮುಂದುವರಿಸಲು ನಿರ್ಧರಿಸಿದೆ.
ಇದನ್ನೂ ಓದಿ;ಸೌದಿ ಅರೇಬಿಯಾದಲ್ಲಿ ಉತ್ಪಾದನೆಯಾಗಲಿದೆ ರಷ್ಯನ್​ ಕರೊನಾ ಲಸಿಕೆ; ಫಿಲಿಫೈನ್ಸ್​, ಬ್ರೆಜಿಲ್​ನಲ್ಲೂ ಕ್ಲಿನಿಕಲ್​ ಟ್ರಯಲ್​
ಈ ಮೊದಲಿನ ಆದೇಶದಂತೆ ಆಗಸ್ಟ್​ 16ರ ವರೆಗೆ ಲಾಕ್​ಡೌನ್​ ಜಾರಿಯಲ್ಲಿತ್ತು. ಇದೀಗ ಮತ್ತೆ 21 ದಿನಗಳ ವಿಸ್ತರಣೆ ಮಾಡಲಾಗಿದೆ. ಇದರನ್ವಯ ಧಾರ್ಮಿಕ ತಾಣಗಳನ್ನು ತೆರೆಯಲು ಅವಕಾಶವಿಲ್ಲ. ಯಾವುದೇ, ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ, ಸಾಂಸ್ಕೃತಿಕ ಸಭೆ- ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.
ವಾಣಿಜ್ಯ ಹಾಗೂ ಖಾಸಗಿ ಕಚೇರಿಗಳನ್ನು ತೆರೆಯಲು ಅವಕಾಶವಿದೆ. ಆದರೆ, ಜಿಮ್​, ಪಾರ್ಕ್​ಗಳು ಬಂದ್​ ಇರಲಿವೆ. ಮಾಸ್ಕ್​ ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಇದು ಭಾರಿ ಭಯಾನಕ ಕರೊನಾ; ಈಗಿನದ್ದಕ್ಕಿಂತಲೂ ಹತ್ತು ಮಾರಕ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
