ಭುವನೇಶ್ವರ:ದೇಶಾದ್ಯಂತ ಏಪ್ರಿಲ್​ 14ರ ಬಳಿಕವೂ ಲಾಕ್​ಡೌನ್​ ವಿಸ್ತರಣೆಯಾಗುವ ಎಲ್ಲ ಸಾಧ್ಯತೆಗಳಿವೆ. ಈ ನಡುವೆ ಒಡಿಶಾ ರಾಜ್ಯಾದ್ಯಂತ ದಿಗ್ಬಂಧನವನ್ನು ಏಪ್ರಿಲ್​ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಲಾಕ್​ಡೌನ್​ ವಿಸ್ತರಿಸಿದ ಮೊದಲ ರಾಜ್ಯ ಎನಿಸಿದೆ. ಜತೆಗೆ, ರಾಜ್ಯದ ಶಾಲಾ-ಕಾಲೇಜುಗಳಿಗೆ ಜೂನ್​ 17ರವರೆಗೆ ರಜೆ ಘೋಷಣೆ ಮಾಡಿದ್ದಾರೆ.
ರಾಜ್ಯ ಜನರ ಪ್ರಾಣ ಕಾಪಾಡುವುದು ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಲಾಕ್​ಡೌನ್​ ವಿಸ್ತರಿಸುವುದಾಗಿ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಘೋಷಿಸಿದ್ದಾರೆ. ಜತೆಗೆ, ರಾಜ್ಯದಲ್ಲಿ ವಿಮಾನ ಹಾಗೂ ರೈಲು ಸಂಚಾರವನ್ನು ಆರಂಭಿಸದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ, ದೇಶಾದ್ಯಂತವೂ ದಿಗ್ಬಂಧನವನ್ನು ಇನ್ನೂ ಎರಡು ವಾರಗಳ ಕಾಲ ವಿಸ್ತರಿಸುವಂತೆ ಕೋರಿದ್ದಾರೆ.
ಒಡಿಶಾದಲ್ಲಿ ಮಾತ್ರ 15ರಂದು ಮೊದಲ ಕರೊನಾ ಪ್ರಕರಣ ವರದಿಯಾಗಿದ್ದರೆ, ಈವರೆಗೆ ಸೋಂಕಿತರ ಸಂಖ್ಯೆ 42ಕ್ಕೆ ತಲುಪಿದೆ. ಒಬ್ಬರು ಕೋವಿಡ್​-19 ನಿಂದಾಗಿ ಮೃತಪಟ್ಟಿದ್ದಾರೆ.
ರಾಜಧಾನಿ ಭುವನೇಶ್ವರದಲ್ಲಿ 18 ಕರೊನಾ ಸೋಂಕಿತ ಪ್ರಕರಣಗಳು ಪತ್ತೆಯಾದ ಹೌಸಿಂಗ್​ ಕಾಂಪ್ಲೆಕ್ಸ್​ ಒಳಗೊಂಡ ಒಂದೂವರೆ ಕಿ.ಮೀ ಸುತ್ತಳತೆ ಪ್ರದೇಶವನ್ನು ದಿಗ್ಬಂಧನಕ್ಕೆ ಒಳಪಡಿಸಲಾಗಿತ್ತು. ಮೊದಲ ಸಾವು ವರದಿಯಾದ ಬಳಿಕ ರಾಜಧಾನಿಯ ಕೆಲ ಪ್ರದೇಶಗಳಿಗೂ ಇದನ್ನು ವಿಸ್ತರಿಸಲಾಗಿತ್ತು. ಇದಲ್ಲದೇ ಕೇಂದ್ರಪಾಡಾ ಜಿಲ್ಲೆಯ ಹತ್ತು ಗ್ರಾಮಗಳಿಗೂ ದಿಗ್ಬಂಧನ ವಿಧಿಸಲಾಗಿದೆ.
ಇದಲ್ಲದೇ, ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಉತ್ತರಪ್ರದೇಶದ 15 ಜಿಲ್ಲೆಗಳ ಹಲವು ಭಾಗಗಳನ್ನು ಏಪ್ರಿಲ್​ 15 ರವರೆಗೆ ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ ಬುಧವಾರ ಘೋಷಿಸಿದ್ದರು. ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ. ಎಲ್ಲ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.(ಏಜೆನ್ಸೀಸ್​)
‘ವೆಂಟಿಲೇಟರ್​ ಕೊಡಿ, ಜೀವನ ಪರ್ಯಂತ ನಿಮ್ಮನ್ನು ಮರೆಯೋಲ್ಲ..’ ಭಾರತದ ಬಳಿ ಅಂಗಲಾಚಿದ ಪಾಕ್​ ಕ್ರಿಕೆಟರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − two =
Remember me
