ಹರಿಯಾಣ:ಲಾಕ್​ಡೌನ್​ ಹಿನ್ನೆಲೆಯಲ್ಲಿ ಅನೇಕ ಶಾಲೆಗಳ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದಾಗಲೇ ಪ್ರವೇಶಾತಿ ಮುಗಿದು ಇನ್ನೇನು ಶಾಲೆ ಶುರುವಾಗುವ ವೇಳೆಯಾಗಿತ್ತು. ಆದರೆ ಕರೊನಾ ವೈರಸ್​ನಿಂದಾಗಿ ಹಲವಾರು ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ನೀಡಲು ಕೂಡ ಹಣ ಇಲ್ಲದ ಸಮಸ್ಯೆ ತಲೆದೋರಿದೆ.
ಈ ನಡುವೆಯೇ ಸರ್ಕಾರಗಳು, ಮಕ್ಕಳಿಂದ ಶಾಲಾ ಶುಲ್ಕವನ್ನು ವಸೂಲಿ ಮಾಡಬಾರದು ಎಂಬ ಆದೇಶ ಹೊರಡಿಸಿದೆ. ಏಕೆಂದರೆ ಎಷ್ಟೋ ಪಾಲಕರಿಗೂ ಲಾಕ್​ಡೌನ್​ ಸಂಕಷ್ಟದ ಸಮಯ. ಶಾಲಾ ಶುಲ್ಕವನ್ನು ನೀಡಲು ಆಗದ ಸಮಯವಿದು. ಆದ್ದರಿಂದ ಶುಲ್ಕ ವಸೂಲಿ ಮಾಡಬಾರದು ಎಂದು ಶಾಲೆಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು.
ಇದನ್ನೂ ಓದಿ:ನಿಮ್ಮ ಫೋನ್​ನಲ್ಲಿ ಗೂಗಲ್​ ಮ್ಯಾಪ್​ ಇದ್ಯಾ? ಹಾಗಿದ್ರೆ ಈ ಅಮಾಯಕ ಗಂಡನ ಕಥೆ ಕೇಳಿ..!
ಈ ಆದೇಶದಿಂದ ತಾವು ಸಂಕಷ್ಟಕ್ಕೆ ಸಿಲುಕಿರುವುದಾಗಿ ಪಂಜಾಬ್​ ಮತ್ತು ಹರಿಯಾಣದ ಕೆಲವು ಶಾಲೆಗಳು ಅಲ್ಲಿಯ ಹೈಕೋರ್ಟ್​ ಮೊರೆ ಹೋಗಿದ್ದವು. ಪಂಜಾಬ್​ ಮತ್ತು ಹರಿಯಾಣದಲ್ಲಿ ಮಕ್ಕಳಿಂದ ಬೋಧನಾ ಶುಲ್ಕವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕ ಪಡೆಯಬಾರದು ಎಂಬ ಆದೇಶ ಮಾಡಿರುವ ಹಿನ್ನೆಲೆಯಲ್ಲಿ, ಶಿಕ್ಷಕರಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ ಎಂದು ಶಾಲೆಗಳು ಕೋರ್ಟ್​ನಲ್ಲಿ ದೂರಿದ್ದವು.
ಹೀಗೆ ಪರಿಸ್ಥಿತಿ ಮುಂದುವರೆದರೆ ಸಂಬಳವನ್ನೇ ನೆಚ್ಚಿಕೊಂಡಿರುವ ಶಿಕ್ಷಕರಿಗೆ ಬಹಳ ಅನ್ಯಾಯವಾಗುತ್ತದೆ, ಜತೆಗೆ ಶಾಲೆಯ ಅಭಿವೃದ್ಧಿಯೂ ಸಾಧ್ಯವಾಗುತ್ತಿಲ್ಲ ಎಂದು ಶಾಲೆಗಳು ತಿಳಿಸಿದವು.
ಇದನ್ನೂ ಓದಿ:ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಡಾ. ಹರ್ಷ್​ ವರ್ಧನ್​
ಶಾಲೆಗೆ ಸ್ಪಂದಿಸಿರುವ ಪಂಜಾಬ್​-ಹರಿಯಾಣ ಹೈಕೋರ್ಟ್​, ತನ್ನ ಮುಂದಿನ ಆದೇಶದವರೆಗೆ ಪಾಲಕರಿಂದ ಶೇ.70ರಷ್ಟು ಶುಲ್ಕವನ್ನು ವಸೂಲು ಮಾಡಲು ಅಲ್ಲಿಯ ಶಾಲೆಗಳಿಗೆ ಅನುಮತಿ ನೀಡಿದೆ. ಸಂಪೂರ್ಣ ಎಷ್ಟು ಶುಲ್ಕ ಇದೆಯೋ, ಅದರ ಶೇ.70ರಷ್ಟು ಭಾಗದ ಫೀಸ್​ ಪಡೆಯುವಂತೆ ಹೇಳಿದೆ. ಇದೇ ವೇಳೆ ಶಿಕ್ಷಕರಿಗೆ ಕೂಡ ಸಂಪೂರ್ಣ ಸಂಬಳದ ಬದಲು ತನ್ನ ಮುಂದಿನ ಆದೇಶದವರೆಗೆ ಶೇ.70ರಷ್ಟು ಸಂಬಳವನ್ನು ನೀಡುವಂತೆಯೂ ಹೇಳಿದೆ.
ಇದರಿಂದ ಸದ್ಯ ಶಾಲೆಗಳು ಹಾಗೂ ಶಿಕ್ಷಕರು ನಿರಾಳರಾಗಿದ್ದಾರೆ. ಜೂನ್​ 12ಕ್ಕೆ ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಿರುವ ಕೋರ್ಟ್​, ಅಲ್ಲಿಯವರೆಗೆ ತನ್ನ ಆದೇಶ ಪಾಲನೆ ಮಾಡುವಂತೆ ಹೇಳಿದೆ. (ಏಜೆನ್ಸೀಸ್​)
ಮದುಮಗಳಂತೆ ಸಿಂಗರಿಸಿಕೊಂಡು 80 ಕಿ.ಮೀ ನಡೆದು ಬಂದ ಯುವತಿಯ ಕಂಡ ಗ್ರಾಮಸ್ಥರು ಶಾಕ್​!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × two =
Remember me
