ಮುಂಬೈ/ಚೆನ್ನೈ:ಕರೊನಾ ಪೀಡಿತ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಮೇ ಕೊನೆಯವರೆಗೆ ಲಾಕ್​ಡೌನ್​ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಕಟ್ಟುನಿಟ್ಟಾಗಿ ಮುಂದುವರಿಯಲಿದ್ದರೆ, ತಮಿಳುನಾಡಿನಲ್ಲಿ ಲಾಕ್​ಡೌನ್​ ನಿಯಮವನ್ನು ಒಂದಷ್ಟು ಸಡಿಲಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮುಂಬೈ, ಪುಣೆ, ಮಾಲೇಗಾಂವ್​ ಮತ್ತು ಪಿಂಪ್ರಿ ಚಿಂಚವಾಡಾದ ಕೆಂಪು ವಲಯಗಳಲ್ಲಿ ಲಾಕ್​ಡೌನ್​ ಅನ್ನು ಕಟ್ಟುನಿಟ್ಟಾಗಿ ಮುಂದುವರಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಈ ಪ್ರದೇಶಗಳಲ್ಲೇ ಅತಿಹೆಚ್ಚು ಕರೊನಾ ಸೋಂಕಿತರು ಇರುವುದು ಇದಕ್ಕೆ ಕಾರಣ. ಶನಿವಾರ ಅಥವಾ ಭಾನುವಾರ ಈ ಬಗ್ಗೆ ಅಧಿಕೃತ ಸೂಚನೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ:ಕ್ರೀಡಾ ಕ್ಷೇತ್ರದಲ್ಲೂ ಮುತ್ತಪ್ಪ ರೈ ಸೈ…
ಮೇ 17ರ ನಂತರದಲ್ಲಿ ಲಾಕ್​ಡೌನ್​ ವಿಸ್ತರಣೆ ಕುರಿತು ನಿರ್ಧರಿಸಲು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ತಮ್ಮ ಸಚಿವ ಸಂಪುಟದ ಕೆಲ ಪ್ರಮುಖ ಸದಸ್ಯರೊಂದಿಗೆ ಗುರುವಾರ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಸಭೆಯ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ರವಾನಿಸಲಾಗಿದೆ.
ತಮಿಳುನಾಡು ಸರ್ಕಾರ ರಚಿಸಿರುವ ಅಧಿಕಾರಿಗಳ ಸಮಿತಿ ಮೇ 17ರ ನಂತರದ ವಿಸ್ತೃತ ಲಾಕ್​ಡೌನ್​ ಅವಧಿಯಲ್ಲಿ ಸಡಿಲಗೊಳಿಸಬಹುದಾದ ನಿಯಮಗಳು ಮತ್ತು ಪ್ರದೇಶಗಳ ಕುರಿತು ನಿರ್ಧರಿಸಿ, ಆ ವರದಿಯನ್ನು ಸಿಎಂ ಪಳನಿಸ್ವಾಮಿ ಅವರಿಗೆ ಸಲ್ಲಿಸಿದೆ. ಜತೆಗೆ ರಾಜ್ಯದಲ್ಲಿ ಕರೊನಾ ಸೋಂಕು ಹರಡುವಿಕೆಯ ಮೇಲೆ ನಿಗಾವಹಿಸಲು ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆ ಸಲಹೆ ನೀಡಿದೆ.
ಇದನ್ನೂ ಓದಿ:ಅನ್ಯ ರಾಜ್ಯಗಳಲ್ಲಿರುವ ಕನ್ನಡಿಗರು ಬದುಕಿದರೆ ಅಲ್ಲೇ ಬದುಕಲಿ, ಸತ್ತರೆ ಅಲ್ಲೇ ಸಾಯಲಿ!
ಒಂದು ಮೂಲದ ಪ್ರಕಾರ ವಿಸ್ತೃತ ಲಾಕ್​ಡೌನ್​ ಅವಧಿಯಲ್ಲೂ ಮಾಲ್​, ಜಿಮ್​, ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮುಂದುವರಿಸುವ ಜತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೂ ನಿರ್ಬಂಧಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಶೇ.50 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಕೈಗಾರಿಕೆಗಳಿಗೆ ಅನುಮತಿ ನೀಡಲಾಗುವುದು. ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗುತ್ತಿದೆ.
ಕರ್ನಾಟಕದ ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್​​ ವ್ಯವಸ್ಥೆ: ನಿರ್ಮಲಾ ಸೀತಾರಾಮನ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − twelve =
Remember me
