ನವದೆಹಲಿ:ಕರೊನಾ ವೈರಸ್​ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು, ಜಾರಿ ಮಾಡಿರುವ ಯೋಜನೆಗಳನ್ನು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟೀಕಿಸಿದ್ದಾರೆ.
ಈಗ ವಿಧಿಸಲಾಗಿರುವ ಲಾಕ್​ಡೌನ್​ ಯಾವುದಕ್ಕೂ ಪ್ರಯೋಜನ ಬರುವುದಿಲ್ಲ ಎಂದು ಹೇಳಿರುವ ಅವರು, ಲಾಕ್​ಡೌನ್​ ಒಂದು ನಿಲುಗಡೆ (ಪಾಸ್​ ಬಟನ್​) ಅಷ್ಟೇ. ಇದರಿಂದ ಕರೊನಾ ಪ್ರಸರಣ ತಡೆಗಟ್ಟಲು ಸಾಧ್ಯವಿಲ್ಲ. ಲಾಕ್​ಡೌನ್​ ಮುಗಿದ ತಕ್ಷಣ ನಾವೆಲ್ಲ ಹೊರಗೆ ಬರುತ್ತೇವೆ. ಆಗ ಮತ್ತೆ ವೈರಸ್​ ಕೂಡ ತನ್ನ ಕೆಲಸ ಶುರು ಮಾಡುತ್ತದೆ ಎಂದಿದ್ದಾರೆ.
ಭಾರತದಲ್ಲಿ ಕೊವಿಡ್​ ಟೆಸ್ಟ್​ ಪ್ರಮಾಣ ತೀರ ಕಡಿಮೆ ಇದೆ. ಅದರ ವೇಗವನ್ನು ಹೆಚ್ಚಿಸಬೇಕು. ದೇಶದಲ್ಲಿ ಕರೊನಾ ಹಾಟ್​ಸ್ಫಾಟ್ ಮತ್ತು ಹಾಟ್​ಸ್ಫಾಟ್​ ಅಲ್ಲದ ವಲಯಗಳೆಂದು ಗುರುತಿಸಬೇಕು. ತಪಾಸಣೆಯ ವೇಗವನ್ನು ಅಧಿಕಗೊಳಿಸದೆ, ಹೆಚ್ಚೆಚ್ಚು ಜನರನ್ನು ಟೆಸ್ಟ್​ಗೆ ಒಳಪಡಿಸದೆ ಎಲ್ಲರನ್ನೂ ಲಾಕ್​ ಮಾಡುವುದರಿಂದ ಏನೂ ಉಪಯೋಗವಿಲ್ಲ. ಜನರನ್ನು ಲಾಕ್​ ಮಾಡಿದಾಗ ಕಾಯಿಲೆಯೂ ಲಾಕ್ ಆಗುತ್ತದೆ. ಅವರು ಹೊರಬಂದ ಕೂಡಲೇ ವೈರಸ್​ ಕೂಡ ಮತ್ತೆ ಹೊರಬರುತ್ತದೆ. ಹಾಗಾಗಿ ಕೊವಿಡ್​-19 ಟೆಸ್ಟಿಂಗ್​ ವೇಗ ಹೆಚ್ಚಳವೇ ಕರೊನಾ ಮಣಿಸಲು ಇರುವ ಏಕೈಕ ಮಾರ್ಗ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.
ಹಾಗೇ ಲಾಕ್​ಡೌನ್​ನಿಂದ ಆರ್ಥಿಕ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿದ್ದರ ಬಗ್ಗೆಯೂ ರಾಹುಲ್​ ಗಾಂಧಿ ಕಳವಳವ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಬಡಜನರು, ನಿರ್ಗತಿಕರಿಗಾಗಿ ಆಹಾರ ಸಂಗ್ರಹಣಾ ದಾಸ್ತಾನುಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡ ಅನೇಕ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರಿಗೆ ತೆರಳುತ್ತಿದ್ದಾರೆ. ಇದರಿಂದಾಗಿ ಉಂಟಾಗಿರುವ ಬಿಕ್ಕಟ್ಟನ್ನು ಶಮನ ಮಾಡಲು ವಿಕೇಂದ್ರೀಕರಣ ಮಾರ್ಗ ಕಂಡುಕೊಳ್ಳಬೇಕು ಎಂದು ರಾಹುಲ್​ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹಾಗೇ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಸ್ಥಳೀಯವಾಗಿ ಶ್ರಮಿಸುತ್ತಿರುವ ಎಲ್ಲ ಜಿಲ್ಲಾಡಳಿತ, ಆರೋಗ್ಯ ಸಿಬ್ಬಂದಿಯನ್ನು ಅವರು ಹೊಗಳಿದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 2 =
Remember me
